ದಿನಕ್ಕೊಂಬತ್ತು ಗಂಟೆ ನಿದ್ರೆ ಮಾಡಿ ತೊಂಬತ್ತು ಸಾವಿರ ಸಂಬಳ ತೆಗೆದುಕೊಳ್ಳುವುದಾದರೆ ಯಾರಿಗೆ ಬೇಡ ಹೇಳಿ?
ನಿದ್ರಿಸುವುದಕ್ಕೂ ಸಂಬಳ ಕೊಡ್ತಾರೆ ಅಂದ್ರೆ ಅದಕ್ಕಿಂತ ಸುಖ ಮತ್ತೊಂದು ಇದ್ಯಾ?
ನಿದ್ರೆ ಉತ್ಪನ್ನಗಳನ್ನು ತಯಾರಿಸುವ ಕಂಪನಿ ವೇಕ್‌ಫಿಟ್ ಒಂದು ಸ್ಲೀಪ್ ಇಂಟರ್ನ್‌ಶಿಪ್ ಅನ್ನು ಪ್ರಕಟಿಸಿದೆ. ಇದರ ಭಾಗವಾಗಿ ಎರಡು ತಿಂಗಳ ಕಾಲ ನಿದ್ರಿಸಲು ನಿಮಗೆ ರೂ.10 ಲಕ್ಷ ನೀಡಲಾಗುತ್ತದೆ.
ವೇಕ್‌ಫಿಟ್ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಇಂಟರ್ನ್‌ಶಿಪ್ ವಿವರಗಳನ್ನು ನೀಡಲಾಗಿದೆ. ಅರ್ಜಿ ಸಲ್ಲಿಸಲು https://bit.ly/4fW31N7 ಲಿಂಕ್ ಅನ್ನು ಕ್ಲಿಕ್ಕಿಸಿ.
ಈ ಉದ್ಯೋಗದಲ್ಲಿ ಸೇರಿದರೆ ನೀವು ಮಾಡಬೇಕಾಗಿರುವುದು ಹಾಸಿಗೆ ಮೇಲೆ ಮಲಗಿ ನಿದ್ರಿಸುವುದು ಮಾತ್ರ ಎಂದು ವೇಕ್‌ಫಿಟ್ ತಿಳಿಸಿದೆ. ಅಂದರೆ ನಿಮ್ಮ ಕಚೇರಿ ನಿಮ್ಮ ಹಾಸಿಗೆಯೇ. ಈ ಉದ್ಯೋಗ ಎರಡು ತಿಂಗಳವರೆಗೆ ಮಾತ್ರ ಇರುತ್ತದೆ.
'ನೀವು ಸ್ಪ್ರೆಡ್‌ಶೀಟ್‌ಗಳಿಗಿಂತ ಹಾಸಿಗೆ ಇಷ್ಟಪಟ್ಟರೆ, ದೈನಂದಿನ ಕೆಲಸದ ಭಾಗವಾಗಿ 9 ಗಂಟೆ ಕಾಲ ನಿದ್ರಿಸಬೇಕು. ಇಚ್ಛಿಸುವವರಿಗೆ ನಮ್ಮಲ್ಲಿ ಒಂದು ಅವಕಾಶವಿದೆ' ಎಂದು ವೇಕ್‌ಫಿಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಇಂಟರ್ನ್‌ಶಿಪ್‌ಗೆ ಆಯ್ಕೆಯಾದ ಪ್ರತಿಯೊಬ್ಬರಿಗೂ ತಿಂಗಳಿಗೆ ರೂ. ಒಂದು ಲಕ್ಷ ಖಾತರಿಯ ಸ್ಟೈಫಂಡ್ ಸಿಗಲಿದೆ. ಸ್ಲೀಪ್ ಚಾಂಪಿಯನ್ ಆಗಿ ಹೊರಹೊಮ್ಮುವ ಅಭ್ಯರ್ಥಿ ರೂ.10 ಲಕ್ಷ ಪಡೆಯಬಹುದು.
ಯಾವುದಾದರೂ ಒಂದು ಪದವಿ, ದಿಂಬನ್ನು ಸರಿಯಾಗಿ ಬಳಸುವುದು, ಗೊಂದಲವಿಲ್ಲದೆ ನಿದ್ರಿಸುವುದು ಈ ಉದ್ಯೋಗಕ್ಕೆ ಅರ್ಹತೆಗಳು. ನಿದ್ರೆಗೆ ನೆಪ ಹೇಳುವುದು ಮುಂತಾದ ವಿಷಯಗಳನ್ನು ಸಂದರ್ಶನದಲ್ಲಿ ಕೇಳಲಾಗುತ್ತದೆ.
ಪಂದ್ಯಗಳು, ಸಿನಿಮಾಗಳನ್ನು ನೋಡುವಾಗ, ಟ್ರಾಫಿಕ್‌ನಲ್ಲಿ ನಿದ್ರಿಸುವವರು, ವಾರಾಂತ್ಯದಲ್ಲಿ ಯೋಜನೆ ರೂಪಿಸಿಕೊಂಡು ನಿದ್ರಿಸುವವರು ಕೂಡ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು.