OTHER SPORTS

ಒಲಿಂಪಿಕ್ ಕುಸ್ತಿ: ಭಾರತದ ಮೊದಲ ಪದಕ

ಒಲಿಂಪಿಕ್ ಕುಸ್ತಿಯಲ್ಲಿ ಭಾರತೀಯರ ಸಾಧನೆ ನೋಡೋಣ ಬನ್ನಿ

21ರ ಹರೆಯದಲ್ಲಿ ಅಮನ್ ಸಾಧನೆ

21 ವರ್ಷದ ಅಮನ್ ಸೆಹ್ರಾವತ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಹಾಗಾದರೆ ಭಾರತಕ್ಕೆ ಮೊದಲ ಪದಕ ಯಾರು ತಂದರು ಮತ್ತು ನಾವು ಎಷ್ಟು ಪದಕಗಳನ್ನು ಗೆದ್ದಿದ್ದೇವೆ ಎಂದು ತಿಳಿಯೋಣ.

ಒಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಪದಕ

ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಕುಸ್ತಿಪಟು ಕೆಡಿ ಜಾಧವ್ ದೇಶಕ್ಕೆ ಮೊದಲ ಪದಕ ತಂದುಕೊಟ್ಟರು. 1952 ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಅವರು ಈ ಪದಕ ಗೆದ್ದರು.

ಒಲಿಂಪಿಕ್ಸ್‌ನಲ್ಲಿ ಭಾರತದ ಎರಡನೇ ಮತ್ತು ಮೂರನೇ ಪದಕ

ಸುಶೀಲ್ ಕುಮಾರ್ 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದು ಭಾರತಕ್ಕೆ ಎರಡನೇ ಪದಕ ತಂದುಕೊಟ್ಟರು. ಇನ್ನು ಸುಶೀಲ್ 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಬೆಳ್ಳಿ ಪದಕ ಗೆದ್ದರು.

ಒಲಿಂಪಿಕ್ಸ್‌ನಲ್ಲಿ ಭಾರತದ ನಾಲ್ಕನೇ ಪದಕ

ಹರಿಯಾಣದ ಕುಸ್ತಿಪಟು ಯೋಗೇಶ್ವರ್ ದತ್ 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದರು. ಕುಸ್ತಿಯಲ್ಲಿ ಭಾರತಕ್ಕೆ ಇದು ನಾಲ್ಕನೇ ಪದಕವಾಗಿತ್ತು.

ಕುಸ್ತಿಯಲ್ಲಿ ಭಾರತದ ಐದನೇ ಪದಕ

ಭಾರತದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ 2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು. ಕುಸ್ತಿಯಲ್ಲಿ ಭಾರತಕ್ಕೆ ಇದು ಐದನೇ ಪದಕವಾಗಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಆರನೇ ಪದಕ

ಭಾರತೀಯ ಕುಸ್ತಿಪಟು ಬಜರಂಗ್ ಪೂನಿಯಾ, 2020ರ  ಟೋಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು. ಈ ಒಲಿಂಪಿಕ್ಸ್‌ನಲ್ಲಿ ಭಾರತ ಕುಸ್ತಿಯಲ್ಲಿ ಎರಡು ಪದಕಗಳನ್ನು ಗೆದ್ದಿತು.

ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ 7 ಮತ್ತು 8 ನೇ ಪದಕ

ಬಜರಂಗ್ ಪೂನಿಯಾ ಜೊತೆಗೆ ಕುಸ್ತಿಪಟು ರವಿ ದಹಿಯಾ ಕೂಡ ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಭಾರತಕ್ಕೆ ಪದಕ ತಂದುಕೊಟ್ಟರು. ಇದು ಭಾರತದ 7 ನೇ ಪದಕವಾಗಿತ್ತು. 

Find Next One