OTHER SPORTS
ಈ ಬಾರಿಯ ಒಲಂಪಿಕ್ ನಲ್ಲಿ ಪದಕ ಗೆಲ್ಲುವ ಭರವಸೆಯನ್ನು ಮೂಡಿಸಿದ್ದಾರೆ ನೀರಜ್ ಚೋಪ್ರಾ.
ಭಾರತೀಯ ಜಾವೆಲಿನ್ ಥ್ರೋವರ್ ಮತ್ತು ಟೋಕಿಯೋ ಒಲಿಂಪಿಕ್ಸ್ 2020 ರ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಇಂದು ಅಖಾಡಕ್ಕೆ ಇಳಿದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದರೆ ಒಲಿಂಪಿಕ್ಸ್ ಇತಿಹಾಸದಲ್ಲಿ ಎರಡು ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎನಿಸಿಕೊಳ್ಳಲಿದ್ದಾರೆ.
ನೀರಜ್ ಚೋಪ್ರಾ ತಮ್ಮ ಫಿಟ್ನೆಸ್ ಬಗ್ಗೆ ತುಂಬಾ ಕಾನ್ಷಿಯಸ್ ಆಗಿರುತ್ತಾರೆ.
ನೀರಜ್ ಚೋಪ್ರಾ ಯಾವುದೇ ಲಕ್ಷುರಿ ಅಥವಾ ವಿಶೇಷ ಆಹಾರ ಸೇವಿಸಲ್ಲ. ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವಿಸುತ್ತಾರೆ. ದೇಹದ ಕೊಬ್ಬನ್ನು 10 ರಿಂದ 15% ರ ನಡುವೆ ಇರುವಂತೆ ಕಾಳಜಿ ವಹಿಸ್ತಾರೆ.
1 ಗ್ಲಾಸ್ ಜ್ಯೂಸ್ ಅಥವಾ ತೆಂಗಿನ ನೀರಿನಿಂದ ಬೆಳಗ್ಗೆ ಆರಂಭವಾಗುತ್ತದೆ. ನಂತರ 3-4 ಮೊಟ್ಟೆಯ ಬಿಳಿ ಭಾಗ, ಎರಡು ರೋಟಿ, ಬಟ್ಟಲು ಓಟ್ಸ್ ಹಣ್ಣು ತಿಂತಾರೆ. ಆಮ್ಲೆಟ್ ನೀರಜ್ ನೆಚ್ಚಿನ ಆಹಾರ.
ಊಟಕ್ಕೆ ಮೊಸರು, ಅನ್ನ ಮತ್ತು ದಾಲ್ ತಿನ್ನಲು ಇಷ್ಟಪಡುತ್ತಾರೆ. ಊಟದಲ್ಲಿ ಗ್ರಿಲ್ಡ್ ಚಿಕನ್ ಮತ್ತು ಸಲಾಡ್ ಸೇವಿಸ್ತಾರೆ. ತರಬೇತಿ,ಜಿಮ್ ವೇಳೆ ಒಣಹಣ್ಣು, ಹಣ್ಣಿನ ರಸ ಸೇವಿಸುತ್ತಾರೆ.
ರಾತ್ರಿಯ ಊಟದಲ್ಲಿ ಹೆಚ್ಚಾಗಿ ಸೂಪ್ ಕುಡಿಯಲು ಇಷ್ಟಪಡುತ್ತಾರೆ. ಬೇಯಿಸಿದ ತರಕಾರಿಗಳು ಮತ್ತು ಹಣ್ಣುಗಳನ್ನು ಸಹ ರಾತ್ರಿಯ ಊಟದಲ್ಲಿ ಸೇರಿಸುತ್ತಾರೆ. ರಾತ್ರಿ ಊಟ ತುಂಬಾನೇ ಲೈಟ್ ಆಗಿರುತ್ತದೆ.
ನೀರಜ್ ಚೋಪ್ರಾಗೆ ಚುರ್ಮಾ ರೋಟಿ ತಿನ್ನೋದು ತುಂಬಾ ಇಷ್ಟ. ಚೀಟ್ ಡೇ ನಲ್ಲಿ ಪಾನಿ ಪುರಿ, ಸಿಹಿ ತಿಂಡಿ, ಪಾನಿಪುರಿ, ಐಸ್ ಕ್ರೀಂ ತಿನ್ನಲು ಇಷ್ಟಪಡ್ತಾರೆ.