OTHER SPORTS

ಇತಿಹಾಸ ಬರೆದ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಕುಸ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ವಿನೇಶ್

Image credits: social media

ಫೈನಲ್‌ಗೆ ಅನರ್ಹ

ಕೇವಲ 100 ಗ್ರಾಮ್ ಹೆಚ್ಚಿಗೆ ತೂಕ ಹೊಂದಿದ್ದರಿಂದ ಫೋಗಟ್ ಅವರನ್ನು ಆಯೋಜಕರು ಟೂರ್ನಿಯಿಂದಲೇ ಅನರ್ಹ ಮಾಡಿದ್ದರು

Image credits: social media

ಅನರ್ಹ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿರುವ ಫೋಗಟ್

ವಿನೇಶ್, ಈ ತೀರ್ಮಾನವನ್ನು ಪ್ರಶ್ನಿಸಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದ ಹಂಗಾಮಿ ಪೀಠದ ಮೆಟ್ಟಿಲೇರಿದ್ದರು

Image credits: social media

ವಿನೇಶ್ ಫೋಗಟ್ ವೈಯಕ್ತಿಕ ಜೀವನ

ವಿನೇಶ್ ಫೋಗಟ್ ಅವರ ಪತಿ ಸೋಮ್‌ವೀರ್ ರಾಥಿ, ಅವರು ಮಾಜಿ ಕುಸ್ತಿಪಟು ಮತ್ತು ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಾರೆ.

Image credits: social media

ವಿನೇಶ್ ಮತ್ತು ಸೋಮ್‌ವೀರ್‌ ಲವ್ ಸ್ಟೋರಿ

ವಿನೇಶ್ ಮತ್ತು ಸೋಮ್‌ವೀರ್ ಒಟ್ಟಿಗೆ ಭಾರತೀಯ ರೈಲ್ವೆಗಾಗಿ ಕೆಲಸ ಮಾಡುತ್ತಿದ್ದರು. ಪರಸ್ಪರ ಪರಿಚಯ, ಸ್ನೇಹ ಪ್ರೀತಿಯಾಗಿ ಬೆಳೆಯಿತು.

Image credits: social media

ವಿಮಾನ ನಿಲ್ದಾಣದಲ್ಲಿ ನಿಶ್ಚಿತಾರ್ಥ

2018 ರಲ್ಲಿ ವಿನೇಶ್ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಬಂದಾಗ, ದೆಹಲಿ ವಿಮಾನ ನಿಲ್ದಾಣದಲ್ಲಿ ಸೋಮ್‌ವೀರ್ ಅವರು ಮದುವೆಗೆ ಪ್ರಪೋಸ್ ಮಾಡಿ ನಿಶ್ಚಿತಾರ್ಥ ಮಾಡಿಕೊಂಡರು.

Image credits: social media

ವಿನೇಶ್-ಸೋಮ್‌ವೀರ್ ಅಷ್ಟಪದಿ

ವಿನೇಶ್ ಫೋಗಟ್ ಮತ್ತು ಸೋಮ್‌ವೀರ್ ರಾಥಿ ಡಿಸೆಂಬರ್ 13, 2018 ರಂದು ವಿವಾಹವಾದರು. ಇಬ್ಬರೂ ತಮ್ಮ ಮದುವೆಯಲ್ಲಿ ಸಪ್ತಪದಿ ಬದಲಿಗೆ ಅಷ್ಟಪದಿ ತೆಗೆದುಕೊಂಡರು.

Image credits: social media

ಅಷ್ಟಪದಿಯ ಅರ್ಪಣೆ:

ಅಷ್ಟಪದಿಯ ಭಾಗವಾಗಿ 'ಬೇಟಿ ಬಚಾವೋ, ಬೇಟಿ ಪಡಾವೋ, ಬೇಟಿ ಖಿಲಾವೋ' ಅಭಿಯಾನಕ್ಕೆ ಅರ್ಪಿಸಲಾಯಿತು. ಹೆಣ್ಣು  ಮಕ್ಕಳನ್ನು ರಕ್ಷಿಸಿ, ಹೆಣ್ಣು ಮಕ್ಕಳನ್ನು ಓದಿಸಿ, ಹೆಣ್ಣು ಮಕ್ಕಳನ್ನು ಆಡಿಸಿ' ಕರೆಕೊಟ್ಟರು

Image credits: social media
Find Next One