ಉಚಿತ ಮನರಂಜನೆಗಾಗಿ Netflixಗೆ ಪರ್ಯಾಯ ಸೈಟ್ ಇಲ್ಲಿವೆ ನೋಡಿ..
Netflix ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯ OTT ವೇದಿಕೆಯಾಗಿದೆ. ಅಲ್ಲಿ ನೀವು ಒಂದಕ್ಕಿಂತ ಹೆಚ್ಚು ವೆಬ್ ಸರಣಿಗಳು ಮತ್ತು ಕಾರ್ಯಕ್ರಮ ವೀಕ್ಷಿಸಿದರೆ, ಮುಂದುವರೆಸಲು ಹಣವನ್ನು ಪಾವತಿಸಬೇಕಾಗುತ್ತದೆ.
ನೀವು ಉಚಿತವಾಗಿ OTT ವಿಷಯ ಮತ್ತು ವೆಬ್ ಸರಣಿಗಳ ಲಾಭವನ್ನು ಪಡೆಯಲು ಬಯಸಿದರೆ, ಇಲ್ಲಿ ಅದೇ ಸಿನಿಮಾ ವೀಕ್ಷಿಸಬಹುದು. ಆದರೆ, ನೀವು ಕೆಲವು ಜಾಹೀರಾತುಗಳನ್ನು ವೀಕ್ಷಿಸಬೇಕಾಗುತ್ತದೆ.
Tubi TVಯಲ್ಲಿ ವಿವಿಧ ವೇದಿಕೆಗಳ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳು ಲಭ್ಯವಿವೆ. ಜಾಹೀರಾತುಗಳನ್ನು ವೀಕ್ಷಿಸುವಲ್ಲಿ ನಿಮಗೆ ಯಾವುದೇ ಸಮಸ್ಯೆ ಇಲ್ಲದಿದ್ದರೆ, ನೀವು ಈ ವೆಬ್‌ಸೈಟ್ ಅನ್ನು ಅನ್ವೇಷಿಸಬಹುದು.
Pluto TVಯಲ್ಲಿ ಬೇಡಿಕೆಯ ಮೇರೆಗೆ ಹಲವಾರು ಚಲನಚಿತ್ರಗಳು ಮತ್ತು ಸರಣಿಗಳು ಲಭ್ಯವಿವೆ. ಇದರಲ್ಲಿ ಡ್ರಾಮಾ, ಆಕ್ಷನ್, ಹಾಸ್ಯ, ರಿಯಾಲಿಟಿ ಶೋ ಮುಂತಾದ ಹಲವು ವಿಭಾಗಗಳಿವೆ. ಇದು ಕೂಡ ಉಚಿತ ಮತ್ತು ಜಾಹೀರಾತು ಬರುತ್ತವೆ.
ಈ ಚಾನೆಲ್‌ನಲ್ಲಿ ವಿವಿಧ ಮೂಲಗಳಿಂದ ಉಚಿತ ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳು ಲಭ್ಯವಿವೆ. ಇದರಲ್ಲಿ ಕೆಲವು ಮೂಲ ವಿಷಯ ಮತ್ತು ಜನಪ್ರಿಯ ಸರಣಿಗಳು ಸಹ ಇವೆ. ಇದರಲ್ಲಿ ಎಲ್ಲವೂ ಉಚಿತವಾಗಿದೆ, ಚಂದಾದಾರಿಕೆಯ ಅಗತ್ಯವಿಲ್ಲ.
Vudu ಸೈಟ್‌ನಲ್ಲಿಯೂ ಉಚಿತವಾಗಿ ಸಿನಿಮಾವೀಕ್ಷಿಸಬಹುದು. ಅಲ್ಲಿ ನೀವು ಜಾಹೀರಾತುಗಳೊಂದಿಗೆ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಇದು ಸಂಪೂರ್ಣವಾಗಿ ಉಚಿತವಾಗಿದೆ.
ಇದು ಜನಪ್ರಿಯ ವೆಬ್‌ಸೈಟ್ ಆಗಿದೆ. ಅಲ್ಲಿ ನೀವು Netflix ನಂತೆಯೇ ಇರುವ ಎಲ್ಲಾ ವಿಷಯವನ್ನು ಉಚಿತವಾಗಿ ವೀಕ್ಷಿಸಬಹುದು. ಆದಾಗ್ಯೂ, ಮಧ್ಯೆ ಮಧ್ಯೆ ಕೆಲವು ಜಾಹೀರಾತುಗಳು ನಿಮ್ಮನ್ನು ತೊಂದರೆಗೊಳಿಸಬಹುದು.