ಬೇಸಿಗೆಯಲ್ಲಿ ಮಣ್ಣು ಬೇಗ ಒಣಗುವುದರಿಂದ ದಿನಕ್ಕೆ ಎರಡು ಬಾರಿ (ಬೆಳಗ್ಗೆ ಮತ್ತು ಸಂಜೆ) ನೀರು ಹಾಕಿ. ಮಣ್ಣಿನಲ್ಲಿ ಯಾವಾಗಲೂ ತೇವಾಂಶ ಇರುವಂತೆ ನೋಡಿಕೊಳ್ಳಿ.
life Apr 12 2026
Author: Ashwini HR Image Credits:Getty
Kannada
ಮಧ್ಯಾಹ್ನದ ಬಿಸಿಲಿನಿಂದ ದೂರವಿಡಿ
ಬೆಳಗಿನ ಬಿಸಿಲು ಗಿಡಕ್ಕೆ ಒಳ್ಳೆಯದು, ಆದರೆ ಮಧ್ಯಾಹ್ನದ 12 ರಿಂದ 4 ಗಂಟೆಯವರೆಗಿನ ಸುಡುವ ಬಿಸಿಲು ಗಿಡಕ್ಕೆ ತಗುಲದಂತೆ ನೆರಳಿನ ಜಾಗಕ್ಕೆ ಕುಂಡವನ್ನು ವರ್ಗಾಯಿಸಿ ಅಥವಾ 'ಗ್ರೀನ್ ನೆಟ್' ಬಳಸಿ.
Image credits: stockPhoto
Kannada
ಎಲೆಗಳ ಮೇಲೆ ನೀರು ಚಿಮುಕಿಸಿ
ಕೇವಲ ಬುಡಕ್ಕೆ ನೀರು ಹಾಕುವುದಷ್ಟೇ ಅಲ್ಲದೆ, ಗಿಡದ ಎಲೆಗಳ ಮೇಲೆ ನೀರನ್ನು ಸ್ಪ್ರೇ ಮಾಡಿ. ಇದರಿಂದ ಗಿಡಕ್ಕೆ ತಂಪು ಸಿಗುತ್ತದೆ ಮತ್ತು ಎಲೆಗಳು ಹಸಿರಾಗಿರುತ್ತವೆ.
Image credits: Getty
Kannada
ಹುಳಿ ಮಜ್ಜಿಗೆ
ಇದು ಬೇಸಿಗೆಯಲ್ಲಿ ಗಿಡಕ್ಕೆ ಅಮೃತವಿದ್ದಂತೆ. ಮಣ್ಣನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಆದರೆ ಮಜ್ಜಿಗೆ ತುಂಬಾ ಗಟ್ಟಿಯಾಗಿ ಇರಬಾರದು. 1 ಲೋಟ ಮಜ್ಜಿಗೆಗೆ 5 ಲೋಟ ನೀರು ಬೆರೆಸಿ ತೆಳ್ಳಗೆ ಮಾಡಿ ಹಾಕಿ.
Image credits: Getty
Kannada
ಅಕ್ಕಿ ತೊಳೆದ ನೀರು
ಇದನ್ನು ಪ್ರತಿದಿನ ಹಾಕಬಹುದು. ಬೇಸಿಗೆಯಲ್ಲಿ ಮಣ್ಣು ಬೇಗ ಒಣಗುವುದರಿಂದ, ಈ ನೀರು ಗಿಡಕ್ಕೆ ಹೆಚ್ಚುವರಿ ಪೋಷಣೆ ನೀಡುತ್ತದೆ.
Image credits: stockPhoto
Kannada
ಕುಡಿ ಚಿವುಟುವುದು (Pruning)
ಬೇಸಿಗೆಯಲ್ಲಿ ಗಿಡ ವೇಗವಾಗಿ ಬೆಳೆಯುವುದರಿಂದ, ಈ ಸಮಯದಲ್ಲಿ ಕುಡಿ ಚಿವುಟಿದರೆ ಗಿಡ ಬೇಗ ದಟ್ಟವಾಗಿ (Bushy) ಬೆಳೆಯುತ್ತದೆ.
Image credits: Getty
Kannada
ಗೊಬ್ಬರ
ಬೇಸಿಗೆಯಲ್ಲಿ ತುಂಬಾ ಸ್ಟ್ರಾಂಗ್ ಆಗಿರುವ ರಾಸಾಯನಿಕ ಗೊಬ್ಬರ ಹಾಕಬೇಡಿ. ಎರೆಹುಳು ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರದಂತಹ ತಂಪು ಗೊಬ್ಬರಗಳನ್ನೇ ಬಳಸಿ.