ಮನೆಯಲ್ಲಿ ಗ್ರೋ ಬ್ಯಾಗ್‌ಗಳಲ್ಲೂ ಸುಲಭವಾಗಿ ಕ್ಯಾರೆಟ್ ಬೆಳೆಯಬಹುದು. ಗ್ರೋ ಬ್ಯಾಗ್‌ನಲ್ಲಿ ಕ್ಯಾರೆಟ್ ಬೆಳೆದು, ಫಸಲು ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ.
life Aug 19 2026
Author: Ashwini HR Image Credits:Getty
Kannada
12–15 ಇಂಚು ಆಳದ ಗ್ರೋ ಬ್ಯಾಗ್
ಕ್ಯಾರೆಟ್ ಬೇರುಗಳು ಆಳವಾಗಿ ಇಳಿಯುವುದರಿಂದ, ಕನಿಷ್ಠ 12–15 ಇಂಚು ಆಳವಿರುವ ಗ್ರೋ ಬ್ಯಾಗ್ ಆಯ್ಕೆ ಮಾಡಿ. ಹೆಚ್ಚುವರಿ ನೀರು ಹರಿದು ಹೋಗಲು ಬ್ಯಾಗ್‌ನ ಕೆಳಗೆ ಸಾಕಷ್ಟು ರಂಧ್ರಗಳಿವೆಯೇ ಎಂದು ಖಚಿತಪಡಿಸಿಕೊಳ್ಳಿ.
Image credits: Getty
Kannada
ಮಣ್ಣಿನ ಮಿಶ್ರಣ ಹೀಗಿರಲಿ
ಗ್ರೋ ಬ್ಯಾಗ್‌ಗೆ ಮಣ್ಣು ತುಂಬುವಾಗ, 40% ತೆಂಗಿನ ನಾರು (ಕೋಕೋಪೀಟ್), 30% ಕೊಟ್ಟಿಗೆ ಗೊಬ್ಬರ/ಕಾಂಪೋಸ್ಟ್ ಮತ್ತು 30% ಮೇಲ್ಮಣ್ಣು ಅಥವಾ ಮರಳನ್ನು ಚೆನ್ನಾಗಿ ಮಿಶ್ರಣ ಮಾಡಿ.
Image credits: Getty
Kannada
ಮರಳಿನೊಂದಿಗೆ ಬೀಜ ಬಿತ್ತನೆ
ಕ್ಯಾರೆಟ್ ನೇರವಾಗಿ ಬೆಳೆಯಲು ಮಣ್ಣಿನಲ್ಲಿರೊ ಕಲ್ಲು, ಗಡ್ಡೆ ತೆಗೆದುಹಾಕಿ. ಕ್ಯಾರೆಟ್ ಬೀಜಗಳು ಚಿಕ್ಕದಾಗಿರುವುದರಿಂದ ಸ್ವಲ್ಪ ಮರಳಿನೊಂದಿಗೆ ಬೆರೆಸಿ ಬಿತ್ತನೆ ಮಾಡಿ. ಕಾಲು ಇಂಚು ದಪ್ಪಕ್ಕೆ ಮೇಲೆ ಮಣ್ಣನ್ನ ಹರಡಿ.
Image credits: Getty
Kannada
ತೇವಾಂಶ ಕಾಪಾಡಿಕೊಳ್ಳಿ
ಬೀಜಗಳು ಕೊಚ್ಚಿ ಹೋಗದಂತೆ ಆರಂಭದಲ್ಲಿ ಸ್ಪ್ರೇಯರ್ ಬಳಸಿ ನೀರು ಹಾಕಿ. ಮಣ್ಣಿನಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಿ. 10 ರಿಂದ 14 ದಿನಗಳಲ್ಲಿ ಬೀಜಗಳು ಮೊಳಕೆಯೊಡೆಯುತ್ತವೆ.
Image credits: Getty
Kannada
2–3 ಇಂಚು ಅಂತರವಿರಲಿ
ಸಸಿಗಳು 2 ಇಂಚು ಎತ್ತರ ಬೆಳೆದಾಗ, ದುರ್ಬಲ ಸಸಿಗಳನ್ನು ಕಿತ್ತುಹಾಕಿ. ಆರೋಗ್ಯಕರ ಸಸಿಗಳ ನಡುವೆ 2–3 ಇಂಚು ಅಂತರ ಇರುವಂತೆ ನೋಡಿಕೊಳ್ಳಿ. ಇದು ಕ್ಯಾರೆಟ್ ಚೆನ್ನಾಗಿ ಬೆಳೆಯಲು ಸಹಾಯ ಮಾಡುತ್ತದೆ.
Image credits: Getty
Kannada
ಸೂರ್ಯನ ಬೆಳಕು ಅಗತ್ಯ
ಗ್ರೋ ಬ್ಯಾಗ್ ಅನ್ನು ಪ್ರತಿದಿನ ಕನಿಷ್ಠ 5–6 ಗಂಟೆಗಳ ಕಾಲ ನೇರ ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಇಡಿ. ಮಣ್ಣಿನಲ್ಲಿ ಯಾವಾಗಲೂ ಸ್ವಲ್ಪ ತೇವಾಂಶವಿರಲಿ, ಆದರೆ ನೀರು ನಿಲ್ಲಲು ಬಿಡಬೇಡಿ.
Image credits: Getty
Kannada
ಬೆಳೆ ಕಟಾವು ಮಾಡಿ
ಸಾಮಾನ್ಯವಾಗಿ 70–90 ದಿನಗಳಲ್ಲಿ ಕ್ಯಾರೆಟ್ ಕಟಾವಿಗೆ ಸಿದ್ಧವಾಗುತ್ತದೆ. ಕ್ಯಾರೆಟ್‌ನ ಮೇಲ್ಭಾಗವು ಮಣ್ಣಿನಿಂದ ಮೇಲೆ ಕಾಣಿಸಲು ಪ್ರಾರಂಭಿಸಿದಾಗ, ನೀವು ಅದನ್ನು ಕೀಳಬಹುದು.