ಮಳೆಗಾಲದ ತೇವಾಂಶ, ದುರ್ವಾಸನೆ ಕಡಿಮೆ ಮಾಡಲು ಮನೆಯಲ್ಲಿಡಿ ಈ 6 ಗಿಡಗಳು!
life Aug 10 2026
Author: Govindaraj S Image Credits:Getty
Kannada
ಬೋಸ್ಟನ್ ಫರ್ನ್
ಈ ಗಿಡಗಳು ತೇವಾಂಶವನ್ನು ಹೆಚ್ಚು ಇಷ್ಟಪಡುತ್ತವೆ. ಹಾಗಾಗಿ ಇವುಗಳನ್ನು ಬಾತ್‌ರೂಮ್, ಬಾಲ್ಕನಿಯಲ್ಲಿ ಇಡುವುದು ಉತ್ತಮ. ಇವು ಗಾಳಿಯಲ್ಲಿರುವ ತೇವಾಂಶವನ್ನು ಹೀರಿಕೊಂಡು ಮನೆಯನ್ನು ಫ್ರೆಶ್ ಆಗಿಡುತ್ತವೆ.
Image credits: Getty
Kannada
ಅರೆಕಾ ಪಾಮ್
ಹಾಲ್‌ಗೆ ಈ ಗಿಡ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಇದು 'ನ್ಯಾಚುರಲ್ ಹ್ಯೂಮಿಡಿಫೈಯರ್' ಆಗಿ ಕೆಲಸ ಮಾಡುತ್ತದೆ. ಅಂದರೆ, ವಿಷಕಾರಿ ಅಂಶಗಳನ್ನು ತೆಗೆದುಹಾಕಿ, ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುವ ಶಕ್ತಿ ಇದಕ್ಕಿದೆ.
Image credits: Getty
Kannada
ರಬ್ಬರ್ ಪ್ಲಾಂಟ್
ದೊಡ್ಡ, ಹೊಳೆಯುವ ಎಲೆಗಳನ್ನು ಹೊಂದಿರುವ ಈ ಗಿಡ ಗಾಳಿಯಲ್ಲಿನ ಮಾಲಿನ್ಯವನ್ನು ಫಿಲ್ಟರ್ ಮಾಡುತ್ತದೆ. ಕಡಿಮೆ ಸೂರ್ಯನ ಬೆಳಕಿನಲ್ಲೂ ಚೆನ್ನಾಗಿ ಬೆಳೆಯುವುದರಿಂದ, ಮಳೆಗಾಲಕ್ಕೆ ಇದು ಸೂಪರ್ ಚಾಯ್ಸ್.
Image credits: Getty
Kannada
ಪೀಸ್ ಲಿಲ್ಲಿ
ಬಿಳಿ ಹೂವುಗಳಿಂದ ಸುಂದರವಾಗಿ ಕಾಣುವ ಈ ಗಿಡ, ತನ್ನ ಎಲೆಗಳ ಮೂಲಕ ಗಾಳಿಯಲ್ಲಿನ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದು ಅತ್ಯುತ್ತಮ 'ಏರ್ ಪ್ಯೂರಿಫೈಯರ್' ಗಿಡ ಎಂದೂ ಫೇಮಸ್ ಆಗಿದೆ.
Image credits: Getty
Kannada
ಸ್ಪೈಡರ್ ಪ್ಲಾಂಟ್
ಇದರ ನಿರ್ವಹಣೆ ತುಂಬಾ ಸುಲಭ. ಗಾಳಿಯಲ್ಲಿರುವ ಫಾರ್ಮಾಲ್ಡಿಹೈಡ್‌ನಂತಹ ವಿಷಕಾರಿ ಅಂಶಗಳನ್ನು ತೆಗೆದುಹಾಕುವ ಶಕ್ತಿ ಇದಕ್ಕಿದೆ. ಹ್ಯಾಂಗಿಂಗ್ ಪಾಟ್‌ಗಳಲ್ಲಿ ಬೆಳೆಸಿದರೆ ಇದು ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ.
Image credits: Getty
Kannada
ಬ್ರೊಮೆಲಿಯಾಡ್
ಈ ಗಿಡಗಳು ಉಷ್ಣವಲಯದ ವಾತಾವರಣವನ್ನು ಇಷ್ಟಪಡುತ್ತವೆ. ಮಳೆಗಾಲದ ತೇವಾಂಶದಲ್ಲಿ ಇವು ಹುಲುಸಾಗಿ ಬೆಳೆಯುತ್ತವೆ. ಮನೆಯ ಒಳಗೆ ಆಕರ್ಷಕ ಲುಕ್ ನೀಡುವುದಲ್ಲದೆ, ಇವುಗಳ ಆರೈಕೆಯೂ ಸುಲಭ.