ನೀಲಿ ಬಣ್ಣದ ವಿಷಕಾರಿ ಕಪ್ಪೆ: ತನ್ನ ಕಡುನೀಲಿ ಬಣ್ಣ ಹಾಗೂ ಪ್ರಬಲವಾದ ವಿಷಕ್ಕೆ ಇದು ಪ್ರಸಿದ್ಧಿ ಹೊಂದಿದ್ದು, ಪರಭಕ್ಷಕಗಳ ವಿರುದ್ಧ ರಕ್ಷಣೆಗೆ ಈ ವಿಷವನ್ನು ಬಳಸುತ್ತದೆ
ಸ್ಟ್ರಾಬೆರಿ ಬಣ್ಣದ ವಿಷಕಾರಿ ಕಪ್ಪೆ: ನೋಡಲು ಕೆಂಪು ಕೆಂಪಾಗಿ ಸ್ಟ್ರಾಬೆರಿಯಂತೆ ಸ್ವೀಟಾಗಿ ಕಂಡರೂ ಇದು ತನ್ನ ಆಕರ್ಷಕ ಚರ್ಮದಲ್ಲಿ ಕರ್ಕೋಟಕ ವಿಷವನ್ನು ಹೊಂದಿದೆ.
ಕಪ್ಪು ಕಾಲಿನ ವಿಷಕಾರಿ ಕಪ್ಪೆ: ನೋಡುವುದಕ್ಕೆ ಇದು ಸಣ್ಣಗೆ ಕಾಣಿಸಿದರು ಅತ್ಯಂತ ವಿಷಕಾರಿ ಕಪ್ಪೆ. ಇದರ ವಿಷ ಸಣ್ಣ ಪ್ರಾಣಿಗಳ ಪಾರ್ಶ್ವವಾಯುವಿಗೆ ತಳ್ಳಿ ಕೊಲ್ಲಬಹುದು.
ಚಿನ್ನದ ಬಣ್ಣದ ವಿಷಕಾರಿ ಕಪ್ಪೆ: ಕಪ್ಪೆಗಳಲ್ಲಿಯೇ ಇವು ಅತ್ಯಂತ ವಿಷಕಾರಿ ಕಪ್ಪೆಗಳು, ಇವು 10 ಮನುಷ್ಯರನ್ನು ಕೊಲ್ಲುವಷ್ಟು ವಿಷ ಹೊಂದಿರುತ್ತವೆ.
ಫಾಂಟಸ್ಮಾಲ್ ವಿಷಕಾರಿ ಕಪ್ಪೆ: ಇದರ ಬಣ್ಣ ಬ್ರೈಟಾಗಿ ಕಾಣಿಸಿದರೂ ಇದೂ ಅತ್ಯಂತ ವಿಷಕಾರಿ ಕಪ್ಪೆ, ಇದು ಪರಭಕ್ಷಕಗಳ ತನ್ನಿಂದ ದೂರವಿಡಲು ಆಲ್ಕಲಾಯ್ಡ್ ಎಂಬ ವಿಷವನ್ನು ಉತ್ಪಾದಿಸುತ್ತದೆ.
ಕೊಕೊ ವಿಷ ಕಪ್ಪೆ: ಚಿಕ್ಕದಾಗಿದ್ದರೂ ಅತ್ಯಂತ ಶಕ್ತಿಶಾಲಿಯಾಗಿರುವ ಈ ಕಪ್ಪೆಯ ತನ್ನ ವಿಭಿನ್ನವಾದ ರಾಸಾಯನಿಕದ ರಕ್ಷಣಾ ವ್ಯವಸ್ಥೆಯ ಕಾರಣಕ್ಕೆ ಅಧ್ಯಯನ ವಿಷಯವಾಗಿದೆ.
ಲವ್ಲಿ ವಿಷಕಾರಿ ಕಪ್ಪೆ: ಇದು ಇದರ ಚಂದಕ್ಕೆ ತಕ್ಕಂತೆ ಅಷ್ಟೇ ಡೇಂಜರಸ್ ಕೂಡ ಆಗಿದೆ. ಅದರ ಬಣ್ಣವೇ ಅದು ಅತ್ಯಂತ ವಿಷಕಾರಿ ಎಂಬುದನ್ನು ಹೇಳುತ್ತದೆ.
ಡೈಯಿಂಗ್ ಡಾರ್ಟ್ ಫ್ರಾಗ್: ಬಣ್ಣ ಬಳಿಯುವಲ್ಲಿ ಸಾಂಪ್ರದಾಯಿಕ ಬಳಕೆಗೆ ಹೆಸರಾದ ಈ ಕಪ್ಪೆಯೂ ಕೂಡ ತನ್ನ ಚರ್ಮದಲ್ಲಿ ಶಕ್ತಿಶಾಲಿ ವಿಷವನ್ನು ಹೊಂದಿದೆ.
ಅಂಥೋನಿಯಾ ಪಾಯಿಸನ್ ಏರೋ ಫ್ರಾಗ್: ಎದ್ದುಕಾಣುವ ಬಣ್ಣ ಹಾಗೂ ವಿಷಕಾರಿ ಚರ್ಮದಿಂದ ಗುರುತಿಸಿಕೊಂಡಿರುವ ಈ ಕಪ್ಪೆ ಕಾಡಿನಲ್ಲಿ ತನ್ನ ರಕ್ಷಣೆಗೆ ಈ ವಿಷವನ್ನು ಬಳಸುತ್ತದೆ.
ಗಾಲ್ಫೊಡೆಲ್ಸಿಯನ್ ವಿಷ ಕಪ್ಪೆ: ಕೋಸ್ಟರಿಕಾ ಮೂಲದ ಈ ಕಪ್ಪೆ ತಾನು ಸೇವಿಸುವ ಕೀಟಗಳ ಆಹಾರದಿಂದ ತನ್ನ ದೇಹದಲ್ಲಿ ಆಲ್ಕಲಾಯ್ಡ್‌ಗಳನ್ನು ಸಂಗ್ರಹಿಸುತ್ತದೆ.
ಅಂಥೋನಿಯಾ ವಿಷಕಾರಿ ಏರೋ ಫ್ರಾಗ್: ಎದ್ದುಕಾಣುವ ಬಣ್ಣ ಹಾಗೂ ವಿಷಕಾರಿ ಚರ್ಮದಿಂದ ಗುರುತಿಸಿಕೊಂಡಿರುವ ಈ ಕಪ್ಪೆ ಕಾಡಿನಲ್ಲಿ ತನ್ನ ರಕ್ಷಣೆಗೆ ಈ ವಿಷವನ್ನು ಬಳಸುತ್ತದೆ.