ಅಡುಗೆಗೆ ಬಳಸುವ ಎಣ್ಣೆಯನ್ನು ದೀರ್ಘಕಾಲ ಹಾಳಾಗದಂತೆ ಇಡಲು ಹೀಗೆ ಮಾಡಿ ನೋಡಿ.
ತಂಪಾದ, ಹೆಚ್ಚು ಬೆಳಕಿಲ್ಲದ ಸ್ಥಳದಲ್ಲಿ ಎಣ್ಣೆಯನ್ನು ಶೇಖರಿಸಿಡಬೇಕು. ಬಿಸಿಯಾಗುವ ಸ್ಥಳದಲ್ಲಿ ಎಣ್ಣೆಯನ್ನು ಇಡಬಾರದು. ಇದರಿಂದ ಕ್ವಾಲಿಟಿ ಕ್ಷೀಣಿಸುತ್ತದೆ.
ಗ್ಯಾಸ್ ಸ್ಟೌವ್, ಅಡುಗೆ ಸಿಂಕ್, ಏರ್ ಫ್ರೈಯರ್, ಇಂಡಕ್ಷನ್ ಕುಕ್ಕರ್ ಮುಂತಾದವುಗಳ ಬಳಿ ಎಣ್ಣೆಯನ್ನು ಶೇಖರಿಸುವುದನ್ನು ತಪ್ಪಿಸಿ.
ಎಣ್ಣೆಯನ್ನು ಶೇಖರಿಸಿಡಲು ಗಾಢ ಬಣ್ಣದ ಬಾಟಲಿಯನ್ನು ಬಳಸಬೇಕು. ಬೆಳಕು ಒಳಗೆ ಹೋಗದಂತೆ ತಡೆಯಲು ಹೀಗೆ ಮಾಡಲಾಗುತ್ತದೆ. ಸ್ಟೀಲ್, ಅಲ್ಯುಮಿನಿಯಂ ಡಬ್ಬಿ ಸೂಕ್ತ.
ಪ್ರತಿ ಬಾರಿ ಬಳಸಿದ ನಂತರ ಎಣ್ಣೆ ಬಾಟಲಿಯನ್ನು ಚೆನ್ನಾಗಿ ಮುಚ್ಚಿಡಬೇಕು. ಗಾಳಿ ಒಳಗೆ ಹೋದರೆ ಎಣ್ಣೆ ಹಾಳಾಗುವ ಸಾಧ್ಯತೆ ಇರುತ್ತದೆ.
ಎಣ್ಣೆಯನ್ನು ಫ್ರಿಡ್ಜ್‌ನಲ್ಲಿ ಶೇಖರಿಸುವುದನ್ನು ತಪ್ಪಿಸಿ. ಇದು ಎಣ್ಣೆಯ ರಚನೆ ಮತ್ತು ರುಚಿಯನ್ನು ಬದಲಾಯಿಸುತ್ತದೆ. ಕೋಣೆಯ ಉಷ್ಣಾಂಶದಲ್ಲಿ ಎಣ್ಣೆ ಡಬ್ಬಗಳನ್ನಿರಿಸಬೇಕು.
ಹಳೆಯ ಎಣ್ಣೆಯನ್ನು ಎಂದಿಗೂ ಬಳಸಬಾರದು. ಬಳಸುವ ಮೊದಲು ಎಣ್ಣೆಯನ್ನು ಪರಿಶೀಲಿಸಿಕೊಳ್ಳಿ. ಒಮ್ಮೆ ಬಳಕೆಯಾದ ಎಣ್ಣೆಯನ್ನು ಬಳಕೆಯಾಗದ ಎಣ್ಣೆಯಲ್ಲಿ ಸೇರಿಸಬೇಡಿ.
ಅವಧಿ ಮುಗಿದ ಎಣ್ಣೆಯನ್ನು ಎಂದಿಗೂ ಬಳಸಬಾರದು. ಇದು ಎಣ್ಣೆಯ ರುಚಿಯನ್ನು ಬದಲಾಯಿಸುತ್ತದೆ ಮತ್ತು ಆಹಾರ ಹಾಳಾಗಲು ಕಾರಣವಾಗುತ್ತದೆ.
ಅಡುಗೆಮನೆ ಸಿಂಕ್ ಸ್ವಚ್ಛಗೊಳಿಸುವ ಸಿಂಪಲ್ ಟಿಪ್ಟ್
ಈ ವಸ್ತುಗಳನ್ನ ನಿಂಬೆ ಹಣ್ಣಿನ ರಸದಿಂದ ಕ್ಲೀನ್ ಮಾಡಬೇಡಿ!
ಮನೆಯಿಂದ ಪ್ಲಾಸ್ಟಿಕ್ ತ್ಯಾಜ್ಯ ಹೊರ ಹಾಕುವ ಸಲಹೆಗಳು
ಈ ರೀತಿ ಮಾಡಿದ್ರೆ 15 ದಿನವಾದ್ರೂ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಳಾಗಲ್ಲ!