ಬಳಸಿದ ನಂತರ ಎಣ್ಣೆಯನ್ನು ತಣ್ಣಗಾಗಲು ಬಿಡಿ. ನಂತರ ಒಳ್ಳೆಯ ಬಟ್ಟೆಯಿಂದ ಎಣ್ಣೆಯನ್ನು ಫಿಲ್ಟರ್ ಮಾಡಿ.
ಎಣ್ಣೆಯನ್ನು ಚೆನ್ನಾಗಿ ಫಿಲ್ಟರ್ ಮಾಡಲು ಕಾಫಿ ಫಿಲ್ಟರ್ ಬಳಸಬಹುದು. ಫನಲ್ (Funnel)ನಲ್ಲಿ ಇರಿಸಲಾಗಿರುವ ಕಾಫಿ ಫಿಲ್ಟರ್‌ಗೆ ಎಣ್ಣೆಯನ್ನು ಸುರಿಯಿರಿ.
ಹೆಚ್ಚು ಬೆಳಕಿಲ್ಲದ ತಂಪಾದ ಸ್ಥಳದಲ್ಲಿ ಎಣ್ಣೆಯನ್ನು ಸಂಗ್ರಹಿಸಬೇಕು. ಗಾಳಿಯಾಡದ ಪಾತ್ರೆಯಲ್ಲಿ ಮುಚ್ಚಿಡಬಹುದು.
ಎಣ್ಣೆಯಲ್ಲಿರುವ ಕೊಳೆ ಮತ್ತು ದುರ್ವಾಸನೆಯನ್ನು ತೆಗೆದುಹಾಕಲು ಆಲೂಗಡ್ಡೆಯನ್ನು ಕತ್ತರಿಸಿ ಎಣ್ಣೆಯಲ್ಲಿ ಹಾಕುವುದು ಒಳ್ಳೆಯದು.
ಒಂದು ಚಮಚ ಕಾರ್ನ್‌ಸ್ಟಾರ್ಚ್ ಅನ್ನು ಎಣ್ಣೆಯಲ್ಲಿ ಸೇರಿಸಿ. ಚೆನ್ನಾಗಿ ಕಲಕಿ ನಂತರ ಫಿಲ್ಟರ್ ಮಾಡಿ. ಎಣ್ಣೆಯಲ್ಲಿರುವ ಕೊಳೆಯನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ.
ಶುಚಿಗೊಳಿಸುವ ಮೊದಲು ಎಣ್ಣೆಯನ್ನು ಚೆನ್ನಾಗಿ ತಣ್ಣಗಾಗಲು ಬಿಡಿ. ಬಿಸಿಯಾಗಿ ಇರಿಸಿದರೆ ಕೈಗಳು ಸುಟ್ಟುಹೋಗಬಹುದು ಮತ್ತು ಎಣ್ಣೆಯನ್ನು ಸ್ವಚ್ಛಗೊಳಿಸಲು ಕಷ್ಟವಾಗುತ್ತದೆ.
ಬಳಸಿದ ಎಣ್ಣೆಗಳನ್ನು ಒಟ್ಟಿಗೆ ಮಿಶ್ರಣ ಮಾಡಬಾರದು. ಪ್ರತಿಯೊಂದಕ್ಕೂ ವಿಭಿನ್ನ ರುಚಿ ಇರುತ್ತದೆ.
4 ಬಾರಿ ಬಳಸಿದ ಎಣ್ಣೆಯನ್ನು ಮತ್ತೆ ಬಳಸಬಾರದು. ಇದು ಎಣ್ಣೆಯ ಗುಣಮಟ್ಟ ಕಳೆದುಕೊಳ್ಳಲು ಕಾರಣವಾಗುತ್ತದೆ.
ಮಳೆಗಾಲದಲ್ಲಿ ಉಪ್ಪಿನಕಾಯಿ ಬೂಸ್ಟ್ ಬರದಂತೆ ಕಾಪಾಡುವ ಸಲಹೆಗಳು
ಅಡುಗೆಗೆ ಮಾತ್ರವಲ್ಲ, ಉಪ್ಪನ್ನು ಹೀಗೂ ಬಳಸಬಹುದು
ಡಿಶ್‌ವಾಷರ್ ದುರ್ವಾಸನೆ ನಿವಾರಿಸಲು 7 ಟಿಪ್ಸ್