ಮಳೆಗಾಲದಲ್ಲಿ ಉಪ್ಪಿನಕಾಯಿ ಬೇಗನೆ ಹಾಳಾಗುತ್ತವೆ. ಈ ಸುಲಭ ಸಲಹೆಗಳನ್ನು ನೆನಪಿನಲ್ಲಿಡಿ ಮತ್ತು ನಿಮ್ಮ ಉಪ್ಪಿನಕಾಯಿಯನ್ನು ತಾಜಾವಾಗಿಡಿ.
ಆರ್ದ್ರ (ತೇವಾಂಶ ಭರಿತ_ ವಾತಾವರಣದಿಂದ ಉಪ್ಪಿನಕಾಯಿ ಬೇಗನೇ ಹಾಳಾಗುತ್ತದೆ. ಇದರಿಂದ ಉಪ್ಪಿನಕಾಯಿಯ ರುಚಿ ಮತ್ತು ಬಾಳಿಕೆ ಕಡಿಮೆಯಾಗುತ್ತದೆ.
ಉಪ್ಪಿನಕಾಯಿಗೆ ಬಳಸುವ ಮಾವು, ಹಲಸು, ನಿಂಬೆ ಅಥವಾ ಮೆಣಸಿನಕಾಯಿ ಸಂಪೂರ್ಣವಾಗಿ ಒಣಗಿರಬೇಕು. ತೇವ ಪದಾರ್ಥಗಳನ್ನು ಬಳಸಿದರೆ ಹಾಳಾಗುವ ಸಾಧ್ಯತೆ ಇರುತ್ತದೆ.
ಉಪ್ಪಿನಕಾಯಿ ಹಾಳಾಗದಂತೆ ತಡೆಯಲು ಎಣ್ಣೆ ಮತ್ತು ಉಪ್ಪನ್ನು ಹೆಚ್ಚಾಗಿ ಬಳಸಿ. ಕಡಿಮೆ ಇದ್ದರೆ ಬೇಗ ಹಾಳಾಗುತ್ತದೆ.
ಉಪ್ಪಿನಕಾಯಿಯನ್ನು ಗಾಜಿನ ಅಥವಾ ಸೆರಾಮಿಕ್ ಒಣ ಡಬ್ಬದಲ್ಲಿಡಿ. ಪ್ಲಾಸ್ಟಿಕ್ ಬಳಸಬೇಡಿ. ಉಪ್ಪಿನಕಾಯಿ ತೆಗೆಯಲು ಒಣ ಚಮಚ ಬಳಸಿ.
ಉಪ್ಪಿನಕಾಯಿಗೆ 1 ಚಮಚ ಸಿಟ್ರಿಕ್ ಆಮ್ಲ ಅಥವಾ ವಿನೆಗರ್ ಸೇರಿಸಿ. ಮೊದಲು ಮುಚ್ಚಳದ ಬದಲು ಹತ್ತಿ ಬಟ್ಟೆಯಿಂದ ಮುಚ್ಚಿ, ಕೆಲವು ದಿನಗಳ ನಂತರ ಬಿಸಿಲಿಗೆ ಇಡಿ.