Kannada

ದೆಹಲಿ ಪ್ರಯೋಗಾಲಯದಲ್ಲಿ ಕಪ್ಪು ಪೆಟ್ಟಿಗೆ

ಅಹಮದಾಬಾದ್‌ನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನ AI-171 ರ ಕಪ್ಪು ಪೆಟ್ಟಿಗೆಗಳಿಂದ ಪಡೆದ ದತ್ತಾಂಶವನ್ನು ಪರಿಶೀಲಿಸಲು ದೆಹಲಿಯಲ್ಲಿರುವ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪ್ರಯೋಗಾಲಯವು ಕೆಲಸಮಾಡುತ್ತಿದೆ. 

Kannada

ವಿದೇಶಿ ತನಿಖೆ ಇಲ್ಲ

ವಿಮಾನ ಅಪಘಾತದಸಂಪೂರ್ಣ ತನಿಖೆಯನ್ನು ಭಾರತದೊಳಗೆ ಮಾಡಲಾಗುವುದು ಮತ್ತು ಯಾವುದೇ ವಿದೇಶಿ ಸಹಾಯದ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಹೇಳಿದೆ.

Image credits: social media
Kannada

ನಾಗರಿಕ ವಿಮಾನಯಾನ ಸಚಿವಾಲಯದ ಮಾಹಿತಿ

 ವಿಮಾನದ ಮುಂಭಾಗದ ಕಪ್ಪು ಪೆಟ್ಟಿಗೆಯಿಂದ ಕ್ರ್ಯಾಶ್ ಪ್ರೊಟೆಕ್ಷನ್ ಮಾಡ್ಯೂಲ್ (CPM) ಅನ್ನು ಸುರಕ್ಷಿತವಾಗಿ ಹೊರತೆಗೆದು, ಮೆಮೊರಿ ಮಾಡ್ಯೂಲ್‌ಗೆ ಯಶಸ್ವಿಯಾಗಿ  ಸೇರಿಸಿ  ಡೇಟಾ AAIB ಪ್ರಯೋಗಾಲಯದಲ್ಲಿ ಇಡಲಾಗಿದೆ

Image credits: Getty
Kannada

ಡೇಟಾ ತೆಗೆಯಲು ಗೋಲ್ಡನ್ ಚಾಸಿಸ್ ಬಳಕೆ

ಕಪ್ಪು ಪೆಟ್ಟಿಗೆಯಿಂದ ಡೇಟಾ ಸಂಪೂರ್ಣವಾಗಿ ಮರುಪಡೆಯಬಹುದೇ ಎಂಬುದನ್ನು ಖಚಿತಪಡಿಸಲು “ಗೋಲ್ಡನ್ ಚಾಸಿಸ್” ಎಂದು ಕರೆಯುವ ಒಂದೇ ಮಾದರಿಯ ಕಪ್ಪು ಪೆಟ್ಟಿಗೆಯನ್ನೂ ಬಳಸಲಾಗಿದೆ

Image credits: ANI
Kannada

ಎರಡೂ ಬ್ಲ್ಯಾಕ್ ಬಾಕ್ಸ್ ಸಿಕ್ಕಿದ್ಯಾವಾಗ

ಜೂನ್ 13ರಂದು ಅಪಘಾತ ಸ್ಥಳದಲ್ಲಿದ್ದ ಕಟ್ಟಡದ ಮೇಲ್ಛಾವಣಿಯಿಂದ ಕಪ್ಪು ಪೆಟ್ಟಿಗೆಯನ್ನು ಪ್ರಥಮವಾಗಿ ವಶಪಡಿಸಿಕೊಳ್ಳಲಾಯಿತು. ಬಳಿಕ ಜೂನ್ 16ರಂದು ಇನ್ನೊಂದು ಪೆಟ್ಟಿಗೆ ಅವಶೇಷಗಳಲ್ಲಿ ಸಿಕ್ಕಿತು

Image credits: social media
Kannada

ತನಿಖೆಗೆ AAIB ಅಧಿಕಾರಿಗಳು ನೇತೃತ್ವ

ಭಾರತೀಯ ವಾಯುಪಡೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಮತ್ತು ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB)ಯ ತಾಂತ್ರಿಕ ಸದಸ್ಯರ ತನಿಖಾ ತಂಡ.  

Image credits: Getty
Kannada

ತಾಂತ್ರಿಕ ನೆರವು ನೀಡಲು ಬೋಯಿಂಗ್ ಮತ್ತು GE ಕಂಪನಿಗಳ ಅಧಿಕಾರಿಗಳು ದೆಹಲಿಯಲ್ಲಿ

 NTSB ತಂಡ ಈಗ ದೆಹಲಿಯಲ್ಲೇ ತಂಗಿದ್ದು, AAIB ಪ್ರಯೋಗಾಲಯದಲ್ಲಿ ಭಾರತೀಯ ಅಧಿಕಾರಿಗಳೊಂದಿಗೆ ಹತ್ತಿರದಿಂದ ಕೆಲಸ ಮಾಡುತ್ತಿದೆ. 

Image credits: ANI
Kannada

ಚಿಕಾಗೋ ಸಮಾವೇಶಕ್ಕೆ ಭಾರತ ಸಹಿ

1944ರ ಐಸಿಎಒ ಚಿಕಾಗೋ ಸಮಾವೇಶಕ್ಕೆ ಭಾರತ ಸಹಿ ಹಾಕಿದ್ದು, ಐಸಿಎಒ ಅನುಬಂಧ13& ವಿಮಾನ(ಅಪಘಾತಗಳು & ಘಟನೆಗಳ ತನಿಖೆ) ನಿಯಮಗಳು, 2017 ರ ಪ್ರಕಾರ ಎಲ್ಲಾ ಅಂತರರಾಷ್ಟ್ರೀಯ ನಿಯಮ ಮತ್ತು ಕಾರ್ಯವಿಧಾನ  ಅನುಸರಿಸುತ್ತಿದೆ.

Image credits: ANI
Kannada

ಈ ಸಲ ವಿದೇಶಕ್ಕೆ ಕಳಿಸುತ್ತಿಲ್ಲ

ಭಾರತವು ತನ್ನ ಹಾನಿಗೊಳಗಾದ ವಿಮಾನಗಳ ಕಪ್ಪು ಪೆಟ್ಟಿಗೆಯ ತನಿಖೆಗೆ ವಿದೇಶಗಳಾದ ಯುಕೆ, ಯುಎಸ್, ಫ್ರಾನ್ಸ್, ಇಟಲಿ, ಕೆನಡಾ ಅಥವಾ ರಷ್ಯಾದ ಡಿಕೋಡಿಂಗ್ ಕೇಂದ್ರಗಳಿಗೆ ಕಳುಹಿಸುತ್ತಿತ್ತು.

Image credits: Social Media
Kannada

ದೆಹಲಿಯ ಪ್ರಯೋಗಾಲಯದಲ್ಲಿ ಸಾಮರ್ಥ್ಯವಿದೆ

ದೆಹಲಿಯ AAIB ಪ್ರಯೋಗಾಲಯವು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಮತ್ತು ಫ್ಲೈಟ್ ಡೇಟಾ ರೆಕಾರ್ಡರ್ (FDR) ಎರಡನ್ನೂ ಡಿಕೋಡ್ ಮಾಡಲು ಸಂಪೂರ್ಣವಾಗಿ ಸಜ್ಜುಗೊಂಡಿದೆ.

Image credits: ANI

ಅಮರನಾಥ ಯಾತ್ರೆಗೆ ಸೋಲೋ ಟ್ರಾವೆಲ್ ನಿಷೇಧ, ಏನೆಲ್ಲ ಹೊಸ ನಿಯಮಗಳು ಜಾರಿ ತಿಳಿಯಿರಿ

ವಾರಣಾಸಿಯಿಂದ ಬಲ್ಲಿಯಾಗೆ ₹400 ಕೋಟಿ ವೆಚ್ಚದಲ್ಲಿ ರಸ್ತೆ ವಿಸ್ತರಣೆ; ಡಜನ್‌ಗಟ್ಟಲೆ ಹಳ್ಳಿಗಳ ಭೂಮಿಗೆ ಚಿನ್ನದ ಬೆಲೆ!

ಫುಲ್ ಟ್ಯಾಂಕ್ ಮಾಡಿಸ್ತೀರಾ? ನಿಮ್ಮ ಸಿಟಿಯ ಪೆಟ್ರೋಲ್, ಡೀಸೆಲ್ ಬೆಲೆ ಇಲ್ಲಿದೆ!

ಚಿತ್ರಕೂಟ್ ಲಿಂಕ್ ಎಕ್ಸ್‌ಪ್ರೆಸ್‌ವೇ ಸಂಪರ್ಕ ಎಲ್ಲಿಗೆ? ಎಷ್ಟು ಸಮಯ ಉಳಿಯುತ್ತೆ?