India

ಅರವಿಂದ್ ಕೇಜ್ರಿವಾಲ್ ಬಾಲ್ಯದ ಹೆಸರು, ರಹಸ್ಯ ಬಹಿರಂಗ

ವಿಭಿನ್ನ ರಾಜಕೀಯ ಸ್ಥಿಂತ್ಯರದಲ್ಲಿ ಆಪ್ ಎಂಬ ಪಕ್ಷವನ್ನು ಸ್ಥಾಪಿಸಿದ್ದಲ್ಲದೇ, ದೆಹಲಿಯಲ್ಲಿ ಬೇರೆ ಪಕ್ಷಗಳ ಹೇಳ ಹೆಸರಿಲ್ಲದಂತೆ ಮಾಡಿದವರು ಅರವಿಂದ್ ಕೇಜ್ರಿವಾಲ್.

ಕೇಜ್ರಿವಾಲ್ ಕುಟುಂಬ

ಕೇಜ್ರಿವಾಲ್ ಕುಟುಂಬದ ಎಲ್ಲ ಸದಸ್ಯರು ಉತ್ತಮ ವಿದ್ಯಾವಂತರು. ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಸ್ತುತ ದೆಹಲಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿ.

ಬಾಲ್ಯದ ಕುತೂಹಲಕಾರಿ ಘಟನೆಗಳು

ದೆಹಲಿ ಚುನಾವಣೆಗಾಗಿ ಮನೆ-ಮನೆಗೆ ಪ್ರಚಾರ ಮಾಡುತ್ತಿರುವ ಅರವಿಂದ್ ಕೇಜ್ರಿವಾಲ್ ಅವರ ಬಾಲ್ಯದ ಕೆಲವು ಕುತೂಹಲಕಾರಿ ಘಟನೆಗಳನ್ನು ಅವರ ತಂಗಿ ಹಂಚಿಕೊಂಡಿದ್ದಾರೆ. 

ಬಾಲ್ಯದ ಹೆಸರು ಬಹಿರಂಗ

ಅರವಿಂದ್ ಕೇಜ್ರಿವಾಲ್ ಅವರ ತಂಗಿ ರಂಜನಾ ಗುಪ್ತಾ, ಅರವಿಂದ್ ಕೇಜ್ರಿವಾಲ್ ಬಾಲ್ಯದಿಂದಲೂ ಅಧ್ಯಯನದಲ್ಲಿ ನಿರತರಾಗಿಯೇ ಇರುತ್ತಿದ್ದರೆಂದಿದ್ದಲ್ಲದೇ, ಅವರ ಬಾಲ್ಯದ ಹೆಸರನ್ನೂ ರಿವೀಲ್ ಮಾಡಿದ್ದಾರೆ. 

ಮೂರು ತಲೆಮಾರಿನ ಇಂಜಿನಿಯರ್

ಅರವಿಂದ್ ಕೇಜ್ರಿವಾಲ್ ಐಐಟಿಯನ್, ಅವರ ತಂದೆ ಗೋವಿಂದ್ ರಾಮ್ ಕೇಜ್ರಿವಾಲ್ ಕೂಡ ಇಂಜಿನಿಯರ್ ಆಗಿದ್ದರು. ತಾಯಿ ಗೃಹಿಣಿ. ಅರವಿಂದ್ ತಮ್ಮ ಪೋಷಕರನ್ನು ಗೌರವಿಸುತ್ತಾರೆ.

ಹರ್ಷಿತಾ ಮತ್ತು ಪುಲ್ಕಿತ್ ಕೇಜ್ರಿವಾಲ್ ಕೂಡ ಐಐಟಿಯನ್

ಇದಲ್ಲದೆ, ಅರವಿಂದ್ ಕೇಜ್ರಿವಾಲ್ ಅವರ ಮಕ್ಕಳಾದ ಹರ್ಷಿತಾ ಕೇಜ್ರಿವಾಲ್ ಮತ್ತು ಪುಲ್ಕಿತ್ ಕೇಜ್ರಿವಾಲ್ ಕೂಡ ಪ್ರತಿಷ್ಠಿತ ಐಐಟಿ ದೆಹಲಿಯಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಪತ್ನಿ ಸುನೀತಾ ಮಾಜಿ IRS ಅಧಿಕಾರಿ

ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಮಾಜಿ IRS ಅಧಿಕಾರಿ. ನಂತರ ಅವರು ಸ್ವಯಂಪ್ರೇರಿತ ವಿಆರ್‌ಎಸ್ ಪಡೆದರು. ಈಗವರು ಪತಿಗೆ ರಾಜಕೀಯದಲ್ಲಿ ಸಹಕರಿಸುತ್ತಾರೆ.

ಒಡಹುಟ್ಟಿದವರ ವೃತ್ತಿ

ಅರವಿಂದ್ ಅವರಿಗೆ ಒಟ್ಟು ನಾಲ್ಕು ಒಡಹುಟ್ಟಿದವರಿದ್ದಾರೆ. ತಮ್ಮ ಮನೋಜ್ ಸಾಫ್ಟ್‌ವೇರ್ ಇಂಜಿನಿಯರ್, ತಂಗಿ ರಂಜನಾ ಗುಪ್ತಾ ವೃತ್ತಿಯಲ್ಲಿ ವೈದ್ಯೆ.

Image credits: social media

ಒಡಹುಟ್ಟಿದವರ ಶಿಕ್ಷಣ

ಕೇಜ್ರಿವಾಲ್, ಒಡಹುಟ್ಟಿದವರು ಹರಿಯಾಣದ ಹಿಸಾರ್‌ನಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹಿಸಾರ್‌ನಲ್ಲಿ ಪಡೆದರು. ಅರವಿಂದ್‌ಗೆ ದೆಹಲಿಯಲ್ಲಿ ಉದ್ಯೋಗ ಸಿಕ್ಕಾಗ ಕುಟುಂಬ ದೆಹಲಿಗೆ ಶಿಫ್ಟ್ ಆಯಿತು.

ಕೇಜ್ರಿವಾಲ್ ತಂಗಿ ವೈದ್ಯೆ

ಅರವಿಂದ್ ತಂಗಿ ರಂಜನಾ ಗುಪ್ತಾ ವೈದ್ಯೆಯಾಗಿದ್ದು, ಉತ್ತರಾಖಂಡದ ಹರಿದ್ವಾರದಲ್ಲಿ ವಾಸಿಸುತ್ತಿದ್ದಾರೆ. ಅವರ ಪತಿ ಅಜಯ್ ಗುಪ್ತಾ ಅಲ್ಲಿಯೇ ಭೆಲ್ ಕಾರ್ಖಾನೆಯಲ್ಲಿ ವೈದ್ಯರಾಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳು. 

ಬಾಲ್ಯದ ಹೆಸರು

ಅರವಿಂದ್ ಕೇಜ್ರಿವಾಲ್ ಅವರ ಬಾಲ್ಯದ ಹೆಸರು ಕೃಷ್ಣ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅವರು ಜನ್ಮಾಷ್ಟಮಿಯಂದು ಜನಿಸಿದ್ದರಿಂದ, ಬಾಲ್ಯದಲ್ಲಿ ಅವರನ್ನು ಕುಟುಂಬದಲ್ಲಿ ಕೃಷ್ಣ ಎಂದು ಕರೆಯುತ್ತಿದ್ದರು.

ಬಾಲ್ಯದಲ್ಲಿ ಕೃಷ್ಣ ಎಂದು ಕರೆಯುತ್ತಿದ್ದ ಕುಟುಂಬ

ಕುಟುಂಬದವರೆಲ್ಲರೂ ಬಾಲ್ಯದಲ್ಲಿ ದೆಹಲಿ ಮಾಜಿ ಸಿಎಂ ಅನ್ನು ಕೃಷ್ಣ ಎಂದೇ ಕರೆಯುತ್ತಿದ್ದರು. ದೊಡ್ಡವರಾದ ಮೇಲೆ ಅರವಿಂದ್ ಎಂದು ಬದಲಾಯಿತು.

2024ರಲ್ಲಿ ಗೂಗಲ್‌ನಲ್ಲಿ ಗರಿಷ್ಠ ಸರ್ಚ್‌ ಆದ ಭಾರತೀಯರ ಲಿಸ್ಟ್‌!

ಬಶರ್ ಅಲ್-ಅಸದ್ ಸರ್ಕಾರ ಪತನ ಬೆನ್ನಲ್ಲೇ ಸಿರಿಯಾ ಮೇಲೆ ಮುಗಿಬಿದ್ದ ಇಸ್ರೇಲ್!

2024ರ ಟ್ರೆಂಡಿಂಗ್ ಹೇರ್‌ಕಟ್‌ಗಳು, ನಿಮಗ್ಯಾವುದು ಇಷ್ಟ?

ಮಾಲೀಕರೇ ಗಮನಿಸಿ, ನಿಮ್ಮ ಕಾರು ಸ್ನೇಹಿತರಿಗೆ ಕೊಟ್ಟರೆ ಜೈಲೂಟ ಫಿಕ್ಸ್!