Kannada

ಸೀನಿದಾಗ God Bless You ಎನ್ನುವುದು ಯಾಕೆ?

ಯಾರಾದರೂ ಸೀನಿದ ತಕ್ಷಣ (Sneezing) ಪಕ್ಕದಲ್ಲಿದ್ದವರು "God Bless You" ಎಂದು ಹೇಳುವುದನ್ನು ನೀವು ಖಂಡಿತ ಗಮನಿಸಿರುತ್ತೀರಿ. ಇದನ್ನ ಯಾಕೆ ಹೇಳುತ್ತಾರೆ ಗೊತ್ತಾ?

Kannada

ನೀವು ಹೀಗೆ ಹೇಳಿದ್ದೀರಾ?

ನಮ್ಮ ದಿನನಿತ್ಯದ ಜೀವನದಲ್ಲಿ ಯಾರಾದರೂ ಯಾರಾದರೂ ಯಾವುದೇ ಸಂದರ್ಭದಲಿ ಸೀನಿದ ತಕ್ಷಣ ನಾವು ಅಥವಾ ನಮ್ಮ ಸುತ್ತಮುತ್ತಲಿನವರು 'God Bless You' ಎಂದು ಹೇಳುವುದನ್ನು ಕೇಳಿರುತ್ತೇವೆ.

Image credits: Getty
Kannada

ಅದರ ಹಿಂದಿದೆ ಇತಿಹಾಸ

ಸೀನಿದಾಗ ಮಾತ್ರ ಹೀಗೆ ಏಕೆ ಹೇಳುತ್ತಾರೆ ಎಂದು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದೆ ವೈಜ್ಞಾನಿಕ ಕಾರಣವಿದೆಯೋ ಅಥವಾ ಇತಿಹಾಸವಿದೆಯೋ? ಬನ್ನಿ, ತಿಳಿಯೋಣ.

Image credits: Getty
Kannada

ಪ್ಲೇಗ್ ಹರಡಿದ ಸಂದರ್ಭ

6ನೇ ಶತಮಾನದಲ್ಲಿ ಯುರೋಪ್‌ನಲ್ಲಿ 'ಬ್ಯೂಬೋನಿಕ್ ಪ್ಲೇಗ್' (Bubonic Plague) ಎಂಬ ಭೀಕರ ಸಾಂಕ್ರಾಮಿಕ ರೋಗ ಹರಡಿತ್ತು. ಆ ಸಮಯದಲ್ಲಿ ಸೀನುವುದು ಈ ರೋಗದ ಮೊದಲ ಲಕ್ಷಣವಾಗಿತ್ತು.

Image credits: pexels
Kannada

ಬೇಗ ಗುಣಮುಖವಾಗಲು ಹಾರೈಕೆ

ಆಗಿನ ಪೋಪ್ ಗ್ರೆಗೊರಿ I (Pope Gregory I), ರೋಗಿಯಿಂದ ಬೇರೆಯವರಿಗೆ ಸೋಂಕು ಹರಡದಿರಲಿ ಮತ್ತು ಸೀನಿದ ವ್ಯಕ್ತಿ ಬೇಗ ಗುಣಮುಖನಾಗಲಿ ಎಂಬ ಉದ್ದೇಶದಿಂದ ಸೀನಿದ ತಕ್ಷಣ 'God Bless You' ಎಂದು ಪ್ರಾರ್ಥಿಸುತ್ತಿದ್ದರು.

Image credits: pexels
Kannada

ಸೀನಿದ್ರೆ ಆತ್ಮ ಹೊರ ಬರುತ್ತಾ?

ಇದಲ್ಲದೇ ಪ್ರಾಚೀನ ಕಾಲದಲ್ಲಿ, ಸೀನಿದಾಗ ಶರೀರದಿಂದ ಜೀವ ಅಥವಾ ಆತ್ಮ ಹೊರಬರುತ್ತದೆ, ಅಥವಾ ಕೆಟ್ಟ ಶಕ್ತಿಗಳು ದೇಹವನ್ನು ಪ್ರವೇಶಿಸುತ್ತವೆ ಎಂದು ಜನರು ನಂಬುತ್ತಿದ್ದರು.

Image credits: pexels
Kannada

ದುಷ್ಟ ಶಕ್ತಿಗಳಿಂದ ರಕ್ಷಣೆ

ಆ ಸಮಯದಲ್ಲಿ 'God Bless You' ಎಂದು ಹೇಳುವುದರಿಂದ ದುಷ್ಟ ಶಕ್ತಿಗಳಿಂದ ವ್ಯಕ್ತಿಗೆ ರಕ್ಷಣೆ ಸಿಗುತ್ತದೆ ಎಂಬ ಭಾವನೆ ಇತ್ತು. ಅದನ್ನೇ ಈಗ ಜನರು ಮುಂದುವರೆಸಿಕೊಂಡು ಬಂದಿದ್ದಾರೆ.

Image credits: Pixabay
Kannada

ಹೃದಯ ಬಡಿತ ನಿಲ್ಲುತ್ತಾ?

ನಾವು ಸೀನಿದಾಗ ನಮ್ಮ ಹೃದಯದ ಬಡಿತ ಒಂದು ಕ್ಷಣ ನಿಲ್ಲುತ್ತದೆ ಎಂಬ ತಪ್ಪು ಕಲ್ಪನೆ ಇನ್ನೂ ಹಲವರಲ್ಲಿದೆ. ಆದರೆ ಸೀನುವಾಗ ಹೃದಯ ಬಡಿತದ ವೇಗ ಬದಲಾಗಬಹುದೇ ವಿನಃ ಹೃದಯ ನಿಲ್ಲುವುದಿಲ್ಲ!

Image credits: Pixabay
Kannada

ಹಳೆಯ ನಂಬಿಕೆ

ಆದರೆ ಈ ಹಳೆಯ ನಂಬಿಕೆಯಿಂದಾಗಿಯೂ 'Bless You' ಹೇಳುವ ಪದ್ಧತಿ ಮುಂದುವರಿಯಿತು. ಇಂದಿನ ಆಧುನಿಕ ಯುಗದಲ್ಲಿ ಮೂಢನಂಬಿಕೆಗಳಿಗಿಂತ ಹೆಚ್ಚಾಗಿ, ಇದು ನಾಗರಿಕತೆ ಮತ್ತು ಸೌಜನ್ಯದ ಸಂಕೇತವಾಗಿದೆ.

Image credits: Pixabay
Kannada

ಇತಿಹಾಸ ನೆನಪಿರಲಿ

ಯಾರಾದರೂ ಸೀನಿದಾಗ ಅವರ ಆರೋಗ್ಯ ಚೆನ್ನಾಗಿರಲಿ ಎಂದು ಹಾರೈಸುವ ಒಂದು ಸರಳ ವಿಧಾನ ಇದಾಗಿದೆ. ಇನ್ನು ಮುಂದೆ ಯಾರಾದರೂ ಸೀನಿದಾಗ, ಇತಿಹಾಸ ನೆನಪಿಸಿಕೊಂಡು 'God Bless You' ಹೇಳಿ!

Image credits: Pixabay

Gut Healt ಮಳೆಗಾಲದಲ್ಲಿ ಕರುಳಿನ ಆರೋಗ್ಯಕ್ಕೆ 6 ಪಾನೀಯ ಕುಡಿಯಲು ಮರೆಯದಿರಿ

ಬಿಪಿ ಕಂಟ್ರೋಲ್ ಮಾಡಲು ಈ 6 ತರಕಾರಿಗಳನ್ನು ತಪ್ಪದೇ ತಿನ್ನಿ!

ಕಿಡ್ನಿ ಆರೋಗ್ಯವನ್ನು ಸದ್ದಿಲ್ಲದೆ ಹಾನಿ ಮಾಡುವ ನಿಮ್ಮ ಅಭ್ಯಾಸಗಳು

Blood Pressure: ಬಿಪಿ ಹೆಚ್ಚಾಗಿದ್ರೆ? ಈ ಆಹಾರಗಳು ನಿಮ್ಮ ಡಯಟ್‌ನಲ್ಲಿರಲಿ!