Health
ಋತುಸ್ರಾವದ ರಕ್ತವು ತುಕ್ಕು ಹಿಡಿದ ಕಿತ್ತಳೆ ಬಣ್ಣದಲ್ಲಿದ್ದರೆ, ನಿರ್ಜಲೀಕರಣವಿದೆ ಎಂದು ಅರ್ಥ. ಅಥವಾ ಕಬ್ಬಿಣದ ಸಪ್ಲಿಮೆಂಟ್ಸ್ ತೆಗೆದುಕೊಳ್ಳುತ್ತಿದ್ದೀರಿ ಎಂದು ಅರ್ಥ.
ಮೊದಲಿಗೆ ತಿಳಿ ಗುಲಾಬಿ ಬಣ್ಣದಲ್ಲಿ ಋತುಸ್ರಾವ ಕಾಣಿಸಬಹುದು. ಈಸ್ಟ್ರೊಜೆನ್ ಕಡಿಮೆಯಿರುವುದರಿಂದ ಋತುಸ್ರಾವ ಕಡಿಮೆ ದಿನಗಳು ಬರಬಹುದು.
ಋತುಸ್ರಾವದ ರಕ್ತವು ಕಂದು, ಕಪ್ಪು ಬಣ್ಣದಲ್ಲಿ ಕಂಡರೆ ಗಾಬರಿಯಾಗಬೇಡಿ. ಋತುಸ್ರಾವದ ರಕ್ತವು ಹೆಚ್ಚು ಹೊತ್ತು ಗರ್ಭಾಶಯದಲ್ಲಿ ಇರುವುದರಿಂದ ಹೀಗಾಗುತ್ತದೆಯಂತೆ.
ತಿಳಿ ಕೆಂಪು ಬಣ್ಣದಲ್ಲಿ ಋತುಸ್ರಾವ ಬರುವುದು ಸಾಮಾನ್ಯ. ಇದು ತಾಜಾವಿರುವ ರಕ್ತ. ಹಾರ್ಮೋನುಗಳ ಸಮಸ್ಯೆ ಇಲ್ಲವೆಂದು ಇದರ ಅರ್ಥ.
ಕೆಂಪು ಬಣ್ಣದಲ್ಲಿ ಋತುಸ್ರಾವ, ಬಂದರೆ, ದೇಹದಲ್ಲಿ ಈಸ್ಟ್ರೊಜೆನ್ ಹೆಚ್ಚಾಗಿದೆ ಎಂದು ಅರ್ಥ.
ಋತುಸ್ರಾವದ ಬಣ್ಣ ನೀಲಿ ಅಥವಾ ನೇರಳೆ ಬಣ್ಣದಲ್ಲಿದ್ದರೆ ಎಂಡೊಮೆಟ್ರಿಕ್ ಓವೇರಿಯನ್ ಸಿಸ್ಟ್ ಕಾರಣವಾಗಿರಬಹುದು. ತಕ್ಷಣ ಡಾಕ್ಟರ್ ಅನ್ನು ಸಂಪರ್ಕಿಸುವುದು ಒಳ್ಳೆಯದು.