ನಿಯಮಿತವಾಗಿ ಮೊಟ್ಟೆ ಸೇವಿಸುವುದರಿಂದ ಆಗುವ ಪ್ರಯೋಜನಗಳೇನೆಂದು ನೋಡೋಣ.
ಸ್ನಾಯುಗಳ ಆರೋಗ್ಯಕ್ಕೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಪ್ರೋಟೀನ್ ಒಳಗೊಂಡಿರುವ ಸೂಪರ್ ಆಹಾರವಾಗಿದೆ ಮೊಟ್ಟೆ.
ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ, ವಿಟಮಿನ್ ಬಿ 12, ಫೋಲೇಟ್, ಕಬ್ಬಿಣ, ಸೆಲೆನಿಯಮ್, ಸತು ಮುಂತಾದ ಅಗತ್ಯ ವಿಟಮಿನ್‌ಗಳು ಮತ್ತು ಖನಿಜಗಳನ್ನು ಮೊಟ್ಟೆಯಿಂದ ಪಡೆಯಬಹುದು.
ಮೊಟ್ಟೆಯಲ್ಲಿ ಅಪರ್ಯಾಪ್ತ ಕೊಬ್ಬುಗಳಿವೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಎರಡು ಪ್ರಬಲವಾದ ಉತ್ಕರ್ಷಣ ನಿರೋಧಕಗಳಾದ ಲ್ಯೂಟಿನ್ ಮತ್ತು ಝೀಕ್ಸಾಂಥಿನ್‌ಗಳಿಂದ ಸಮೃದ್ಧವಾಗಿದೆ ಮೊಟ್ಟೆ.
ಮೊಟ್ಟೆಯಲ್ಲಿ ಕಂಡುಬರುವ ಕೋಲೀನ್ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.
ಮೊಟ್ಟೆಯಲ್ಲಿರುವ ಹೆಚ್ಚಿನ ಪ್ರೋಟೀನ್ ಅಂಶವು ಹಸಿವು ಕಡಿಮೆ ಮಾಡಲು ಮತ್ತು ತನ್ಮೂಲಕ ತೂಕ ಇಳಿಸಲು ಸಹಾಯ ಮಾಡುತ್ತದೆ.
ಪ್ರೋಟೀನ್‌ಗಳ ಆಗರವಾದ ಮೊಟ್ಟೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಸ್ನಾಯುಗಳನ್ನು ಬೆಳೆಸಲು ಸಹಾಯ ಮಾಡುತ್ತದೆ. ಮೂಳೆಗಳ ಆರೋಗ್ಯಕ್ಕೂ ಮೊಟ್ಟೆ ಸಹಾಯ ಮಾಡುತ್ತದೆ.
ವಿಟಮಿನ್ ಎ, ಇ, ಸೆಲೆನಿಯಮ್ ಮತ್ತು ಸತುವು ಕಾಲಜನ್ ಉತ್ಪಾದಿಸಲು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಡೆಂಗ್ಯೂ ಜ್ವರ ಬಂದಾಗ ಸೇವಿಸಬೇಕಾದ ಆಹಾರಗಳು
ಸಾಕು ಪ್ರಾಣಿಗಳಿಗೆ ಈ 5 ಆಹಾರಗಳನ್ನು ನೀಡಬೇಡಿ
ಈ ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯುವುದು ಅಪಾಯಕಾರಿ: ಯಾಕೆ ಗೊತ್ತಾ?
ಬ್ರಷ್ ಮಾಡುವ ಮುನ್ನ ಎಷ್ಟು ನೀರು ಕುಡಿಯಬೇಕು? ಅಸಲಿ ಸತ್ಯವೇನು?