ಜಪಾನಿನ ಸೌಂದರ್ಯಕ್ಕೆ ನೀರಿನ ಸೇವನೆ ಮುಖ್ಯ. ಮುಖ ತೊಳೆದ ನಂತರ ಮಾಯಿಶ್ಚರೈಸಿಂಗ್ ಲೋಷನ್ ಅಥವಾ ಟೋನರ್ ಹಚ್ಚಬೇಕು.
ಜಪಾನಿಯರು ಪ್ರತಿದಿನ ಗ್ರೀನ್ ಟೀ ಕುಡಿಯುತ್ತಾರೆ. ಈ ಟೀ ಚರ್ಮಕ್ಕೆ ಹಾನಿ ಮಾಡುವ ನೇರಳಾತೀತ ಕಿರಣಗಳಿಂದ ರಕ್ಷಿಸುತ್ತದೆ.
ಜಪಾನಿನ ಮಹಿಳೆಯರು ಮುಖಕ್ಕೆ ಮಸಾಜ್ ಮಾಡುತ್ತಾರೆ. ಇದಕ್ಕಾಗಿ ವಿಶೇಷ ಮಸಾಜರ್‌ಗಳಿವೆ. ಇವು ರಕ್ತ ಪರಿಚಲನೆಯನ್ನು ಸುಧಾರಿಸಿ ಸುಕ್ಕುಗಳನ್ನು ತಡೆಯುತ್ತವೆ.
ಅಕ್ಕಿ ನೀರು ಬಳಸುವುದರಿಂದ ಮುಖದಲ್ಲಿರುವ ಕೊಳೆಯನ್ನು ತೆಗೆದುಹಾಕಿ ಚರ್ಮವನ್ನು ಮೃದುಗೊಳಿಸುತ್ತದೆ.
ಕಾಲಜನ್ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಆದ್ದರಿಂದ ಮೀನು, ಮೂಳೆ, ಮೊಟ್ಟೆ ಮುಂತಾದ ಕಾಲಜನ್ ಯುಕ್ತ ಆಹಾರಗಳನ್ನು ಸೇವಿಸುತ್ತಾರೆ.
ಲಿಪೊಫಿಲಿಕ್, ವಿಟಮಿನ್‌ಗಳುಳ್ಳ ಸೀರಮ್‌ಗಳು ಸೌಂದರ್ಯವನ್ನು ಹೆಚ್ಚಿಸುತ್ತವೆ. ಇದು ಚರ್ಮವನ್ನು ತೇವವಾಗಿರಿಸುತ್ತದೆ.
ವಾರಕ್ಕೆ 1 ಅಥವಾ 2 ಬಾರಿ ಫೇಸ್ ಮಾಸ್ಕ್ ಹಚ್ಚಿದರೆ ಕೊಳೆ ನಿವಾರಣೆಯಾಗಿ ಮುಖವು ಹೊಳೆಯುತ್ತದೆ.
ಜಪಾನಿನ ಮಹಿಳೆಯರು ಗ್ರೀನ್ ಟೀಯನ್ನು ಟೋನರ್ ಆಗಿ ಮುಖಕ್ಕೆ ಹಚ್ಚುತ್ತಾರೆ. ಇದು ಚರ್ಮವನ್ನು ತೇವವಾಗಿರಿಸುತ್ತದೆ.
ಎರಡು ಬಾರಿ ಮುಖ ತೊಳೆಯಿರಿ. ಪ್ರತಿದಿನ ಮುಖ ತೊಳೆದು ಮಲಗಬೇಕು.
ಒತ್ತಡವಿಲ್ಲದ ಉತ್ತಮ ನಿದ್ರೆಯೇ ಯೌವ್ವನದ ಮುಖಕ್ಕೆ ಮುಖ್ಯ ಕಾರಣ. ಸಂತೋಷವಾಗಿರಿ.
ಪ್ರತಿದಿನ ಈ ಆಹಾರಗಳ ಸೇವನೆಯಿಂದ ವೀರ್ಯಾಣುಗಳ ಸಂಖ್ಯೆ ಹೆಚ್ಚುತ್ತೆ!
ಬೇಸಿಗೆಯಲ್ಲಿ ತೆಂಗಿನೆಣ್ಣೆ ಹಚ್ಚಿದ್ರೆ ಏನಾಗುತ್ತೆ; ತಿಳಿದರೆ ಹಚ್ಚೋದು ಬಿಡ್ತೀರಿ!
ಹಾರ್ಟ್ ಅಟ್ಯಾಕ್ ಆಗುವ ಮುನ್ನ ಈ 8 ಲಕ್ಷಣ ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡಬೇಡಿ!
ಬ್ರೌನ್ ರೈಸ್ vs ವೈಟ್ ರೈಸ್: ತೂಕ ಇಳಿಸಲು ಯಾವುದು ಬೆಸ್ಟ್?