40 ರ ನಂತರ ಮೆದುಳಿನ ಚುರುಕುತನ ಕಾಪಾಡಿಕೊಳ್ಳಲು ಸಲಹೆಗಳು
ನಿಮ್ಮ ಸ್ಮರಣಶಕ್ತಿ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಸಣ್ಣ ಲೆಕ್ಕಾಚಾರಗಳಿಗೆ ಕ್ಯಾಲ್ಕುಲೇಟರ್ ಬಳಸುವ ಬದಲು ನಿಮ್ಮ ಮೆದುಳನ್ನು ಬಳಸಿ.
ಕೆಲವು ಕೆಲಸಗಳಿಗೆ ನಿಮ್ಮ ಸಾಮಾನ್ಯ ಕೈಯ ಬದಲು ಇನ್ನೊಂದು ಕೈಯನ್ನು ಬಳಸಿ. ಇದು ಮೆದುಳನ್ನು ಸಕ್ರಿಯವಾಗಿರಿಸುತ್ತದೆ.
ದೈನಂದಿನ ನಡಿಗೆಯಲ್ಲಿ ಒಂದೇ ದಾರಿಯಲ್ಲಿ ನಡೆಯುವ ಬದಲು ಬೇರೆ ಬೇರೆ ದಾರಿಗಳಲ್ಲಿ ನಡೆಯಿರಿ. ಇದು ನಿಮ್ಮ ಮೆದುಳನ್ನು ಜಾಗರೂಕತೆಯಿಂದ ಇಡಲು ಸಹಾಯ ಮಾಡುತ್ತದೆ.
ನಿಮ್ಮ ನೆಚ್ಚಿನ ಲೇಖಕರ ಪುಸ್ತಕಗಳನ್ನು ಓದಿ ಮತ್ತು ಸ್ಮರಣಶಕ್ತಿ ಮತ್ತು ಮೆದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಂಗೀತವನ್ನು ಕೇಳಿ.
ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್, ಜಾಗಿಂಗ್, ಸೈಕ್ಲಿಂಗ್ ಮುಂತಾದ ವ್ಯಾಯಾಮ ಮಾಡಿ.
ಪ್ರತಿದಿನ ಡೈರಿ ಬರೆಯುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಸ್ಮರಣಶಕ್ತಿಯನ್ನು ಸುಧಾರಿಸುತ್ತದೆ.
ದಿನಕ್ಕೆ ಸುಮಾರು ೧೦ ನಿಮಿಷಗಳ ಕಾಲ ಧ್ಯಾನ ಮಾಡಿದರೆ ಒತ್ತಡ ಕಡಿಮೆಯಾಗುತ್ತದೆ. ಮನಸ್ಸು ನಿರ್ಮಲವಾಗುತ್ತದೆ.
ಏನಾದರೂ ಹೊಸದನ್ನು ಕಲಿಯಿರಿ. ಅದು ಪದವಾಗಿರಬಹುದು ಅಥವಾ ಶೈಕ್ಷಣಿಕ ವೀಡಿಯೊ ಆಗಿರಬಹುದು. ಇದು ಮೆದುಳಿಗೆ ಉತ್ತಮ ವ್ಯಾಯಾಮ.
ಮಳೆಗಾಲದ ರೋಗಗಳಿಂದ ತಪ್ಪಿಸಿಕೊಳ್ಳಲು ಅನುಸರಿಸಬೇಕಾದ ಸರಳ ಟಿಪ್ಸ್
ಲಿವರ್ ಆರೋಗ್ಯಕ್ಕೆ ಮತ್ತು ಶುದ್ಧಿಗಾಗಿ ಈ ಪಾನೀಯಗಳನ್ನು ಕುಡಿಯಲೇಬೇಕು!
ಆಲ್ಝೈಮರ್ ಕಾಯಿಲೆಯ ಆರಂಭಿಕ ಲಕ್ಷಣಗಳನ್ನು ಹೇಗೆ ಗುರುತಿಸಬೇಕು? ಇಲ್ಲಿದೆ ಮಾಹಿತಿ!
ಶುಗರ್ ಕಡಿಮೆ ಮಾಡಲು ಬೆಳಗ್ಗೆ ಈ ಪಾನೀಯ ಟ್ರೈ ಮಾಡಿ, ಡೈಬಿಟಿಸ್ ನಿಯಂತ್ರಣ ಪಕ್ಕಾ