ಬಿಸಿಲಿಗೆ ಓಡಾಡಿ ಮುಖ ಕಪ್ಪಗಾಗಿದೆಯೇ? ಮುಖದ ಮೇಲಿನ ಟ್ಯಾನ್ ತೆಗೆದುಹಾಕಲು ಮನೆಯಲ್ಲೇ ಟ್ರೈ ಮಾಡಬಹುದಾದ ಕೆಲವು ಸಿಂಪಲ್ ಟಿಪ್ಸ್ ಇಲ್ಲಿವೆ.
ಅಲೋವೆರಾ ಚರ್ಮಕ್ಕೆ ಹೊಳಪು ನೀಡುತ್ತದೆ. ಜೊತೆಗೆ ಕಪ್ಪು ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ವಾರದಲ್ಲಿ ಎರಡು ಅಥವಾ ಮೂರು ದಿನ ಮುಖಕ್ಕೆ ಅಲೋವೆರಾ ಜೆಲ್ ಹಚ್ಚಿ.
ಅರಿಶಿನವು ಹೈಪರ್‌ಪಿಗ್ಮೆಂಟೇಶನ್ ಕಡಿಮೆ ಮಾಡಿ ಚರ್ಮಕ್ಕೆ ಕಾಂತಿ ನೀಡುತ್ತದೆ. ಅರಿಶಿನವನ್ನು ಹಾಲು ಅಥವಾ ನೀರಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ.
ರೋಸ್ ವಾಟರ್ ಚರ್ಮಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇದು ಟೋನರ್ ಆಗಿ ಕೆಲಸ ಮಾಡುತ್ತದೆ. ಪ್ರತಿದಿನ ಮುಖಕ್ಕೆ ರೋಸ್ ವಾಟರ್ ಸ್ಪ್ರೇ ಮಾಡುವುದು ತುಂಬಾ ಒಳ್ಳೆಯದು.
ಒಣ ಚರ್ಮಕ್ಕೆ ಆಲಿವ್ ಎಣ್ಣೆ ಅತ್ಯುತ್ತಮ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಇದು ಚರ್ಮ ಬೇಗನೆ ವಯಸ್ಸಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಕಡಲೆ ಹಿಟ್ಟು ಮತ್ತು ಟೊಮೆಟೊ ರಸವನ್ನು ಸೇರಿಸಿ ಪ್ಯಾಕ್ ತಯಾರಿಸಿ. ನಂತರ ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ.
ಸೌತೆಕಾಯಿ ರಸ ಮತ್ತು ಸ್ವಲ್ಪ ರೋಸ್ ವಾಟರ್ ಅನ್ನು ಸೇರಿಸಿ ಪ್ಯಾಕ್ ತಯಾರಿಸಿ. ನಂತರ ಈ ಪ್ಯಾಕ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ.
ಮೊಡವೆ ಸಮಸ್ಯೆಯಿಂದ ಬೇಸತ್ತಿದ್ದೀರಾ? ಚಿಂತೆ ಬಿಡಿ, ಈ 6 ಮನೆಮದ್ದು ಬಳಸಿ ನೋಡಿ!
ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿದರೆ ಏನೆಲ್ಲಾ ಲಾಭ? ಇಲ್ಲಿದೆ ನೋಡಿ
Pregnancy Diet: ಗರ್ಭಿಣಿಯರು ತಿನ್ನಲೇಬೇಕಾದ 6 ಸಖತ್ ಪೌಷ್ಟಿಕ ಹಣ್ಣುಗಳು
Superfoods: ಒತ್ತಡ ಕಡಿಮೆ ಮಾಡಲು ನೀವು ತಿನ್ನಲೇಬೇಕಾದ 7 ಸೂಪರ್‌ಫುಡ್‌ಗಳು!