ಮಹಿಳೆಯರಿಗಿಂತ ಪುರುಷರ ಚರ್ಮ ತುಸು ಗಡುಸು, ಮೇಲಾಗಿ ಹೊರಗಡೆ ಹೆಚ್ಚು ಕೆಲಸ ಮಾಡುವುದರಿಂದ ಮುಖದ ಮೇಲೆ ಕಪ್ಪು ಕಲೆಗಳಾಗುತ್ತವೆ. ಇಂಥ ಕಪ್ಪು ಕಲೆ ತೆಗೆಯಲು ಬಯಸಿದರೆ ಇಲ್ಲಿವೆ ಸಲಹೆಗಳು.
ಪುರುಷರಲ್ಲಿ ಕಪ್ಪುಕಲೆಗಳ ಸಮಸ್ಯೆ
ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಕಪ್ಪುಕಲೆಗಳಿರುತ್ತವೆ. ಅವುಗಳನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂದು ತಿಳಿದುಕೊಳ್ಳೋಣ.
ಸ್ಕ್ರಬ್ಬರ್
ಸ್ಕ್ರಬ್ಬರ್ ಬಳಸಿ ಕಪ್ಪುಕಲೆಗಳನ್ನು ಸುಲಭವಾಗಿ ಕಡಿಮೆ ಮಾಡಬಹುದು. ಇದನ್ನು ಮನೆಯಲ್ಲಿಯೇ ತಯಾರಿಸಬಹುದು. ಗುಲಾಬಿ ನೀರಿನಲ್ಲಿ ಒಂದು ಟೀಚಮಚ ಸಕ್ಕರೆ, ಚಿಟಿಕೆ ಉಪ್ಪು ಬೆರೆಸಿ ಹಚ್ಚಿ.