Health
ಹಾಲು ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಹಾಲಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್‌ಗಳು, ಖನಿಜಗಳು ಮುಂತಾದ ಹಲವು ಪೋಷಕಾಂಶಗಳು ಹೇರಳವಾಗಿವೆ.
ಹಾಲು ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರ ಆರೋಗ್ಯಕ್ಕೂ ಒಳ್ಳೆಯದು. ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಹಾಲು ಕುಡಿಯುವುದು ಹಲವು ಮನೆಗಳಲ್ಲಿ ರೂಢಿಯಲ್ಲಿದೆ.
ಹಾಲು ಕುಡಿದರೆ ದುರ್ಬಲವಾದ ಮೂಳೆಗಳು ಬಲಗೊಳ್ಳುತ್ತವೆ, ಸ್ನಾಯುಗಳು ಗಟ್ಟಿಯಾಗುತ್ತವೆ. ಇದರಿಂದ ದೇಹ ಮತ್ತು ಮನಸ್ಸು ಯಾವಾಗಲೂ ಚುರುಕಾಗಿರುತ್ತದೆ. ಹಾಲಿನಲ್ಲಿರುವ ವಿಟಮಿನ್ ಡಿ ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಹಲವು ಮನೆಗಳಲ್ಲಿ ಬೆಳಗ್ಗೆ ಮಾತ್ರವಲ್ಲ, ರಾತ್ರಿ ಮಲಗುವ ಮುನ್ನವೂ ಒಂದು ಲೋಟ ಹಾಲು ಕುಡಿಯುವ ಅಭ್ಯಾಸವಿರುತ್ತದೆ. ಆದರೆ, ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದರಿಂದ ಆಗುವ ಲಾಭಗಳ ಜೊತೆಗೆ ನಷ್ಟಗಳೂ ಇವೆ.
ಆಯುರ್ವೇದದ ಪ್ರಕಾರ, ಬೆಳಿಗ್ಗೆ ಬರಿ ಹೊಟ್ಟೆಯಲ್ಲಿ ಹಾಲು ಕುಡಿಯುವುದು ಒಳ್ಳೆಯದಕ್ಕಿಂತ ಹಾನಿಕಾರಕ. ಏಕೆಂದರೆ ಹಾಲಿನಲ್ಲಿರುವ ಲ್ಯಾಕ್ಟೋಸ್ (ಸಕ್ಕರೆ) ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ.
ಕೆಲವರಿಗೆ ಹಾಲಿನ ಉತ್ಪನ್ನಗಳಿಂದ ಅಲರ್ಜಿಗಳು ಬರುತ್ತವೆ. ಅಂತಹವರು ಬೆಳಗ್ಗೆ ಬರಿ ಹೊಟ್ಟೆಯಲ್ಲಿ ಹಾಲು ಕುಡಿದರೆ ಭೇದಿ, ಹೊಟ್ಟೆ ಉಬ್ಬರ, ಗ್ಯಾಸ್ ಮುಂತಾದ ಜೀರ್ಣಕ್ರಿಯೆಯ ಸಮಸ್ಯೆಗಳು ಬರುತ್ತವೆ.
ಕೆಲವರಿಗೆ ಜೀರ್ಣಶಕ್ತಿ ಕಡಿಮೆಯಿರುತ್ತದೆ. ಅಂತಹವರು ಬರಿ ಹೊಟ್ಟೆಯಲ್ಲಿ ಹಾಲು ಕುಡಿದರೆ ಚರ್ಮದ ತುರಿಕೆ, ಭೇದಿ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಬರುತ್ತವೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿದರೆ ಅದರಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣ ಮುಂತಾದ ಪೋಷಕಾಂಶಗಳ ಹೀರಿಕೆಗೆ ಅಡ್ಡಿಯಾಗುತ್ತದೆ. ಇದರಿಂದ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗುತ್ತದೆ.
ನೀವು ಯಾವುದೇ ಕಾಯಿಲೆಗೆ ಔಷಧಿಗಳನ್ನು ಸೇವಿಸುತ್ತಿದ್ದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯಬೇಡಿ. ಹಾಲಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಅದು ನೀವು ತೆಗೆದುಕೊಳ್ಳುವ ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ.