ಚಳಿಗಾಲದಲ್ಲಿ ಹೃದಯಾಘಾತ ಸಂಭವ ಹೆಚ್ಚೆಂದೇ ಹೇಳಲಾಗುತ್ತೆ. ಹೀಗಾಗಿ ಹೃದಯದ ಆರೋಗ್ಯ ಬಹಳ ಮುಖ್ಯವಾಗಿದೆ. ಶುಂಠಿ ಚಹ ಕುಡಿಯುದರಿಂದ ಹಾರ್ಟ್ ಅಟ್ಯಾಕ್ ಕಡಿಮೆ ಮಾಡುತ್ತದೆಯೇ ಎಂಬುದು ಇಲ್ಲಿ ತಿಳಿಯೋಣ.
ಹೃದಯಾಘಾತದ ಹೆಚ್ಚಳ
ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಮಿತಿಯಿಲ್ಲದೆ ಹೃದಯಾಘಾತ ಬರುತ್ತಿದೆ. ಇದಕ್ಕೆ ಕಾರಣ ಒತ್ತಡದ ಜೀವನಶೈಲಿ, ಅತಿಯಾದ ದೈಹಿಕ ಕಸರತ್ತು ಎಂಬುದು ಗೊತ್ತಿದೆ.
ಸರಿಯಾದ ಚಿಕಿತ್ಸೆ
ಸರಿಯಾದ ಸಮಯದಲ್ಲಿ ಚಿಕಿತ್ಸೆ ಪ್ರಾರಂಭಿಸಿದರೆ ಇದರಿಂದ ಪಾರಾಗಬಹುದು. ಇಲ್ಲದಿದ್ದರೆ ಸಮಸ್ಯೆ.ತೀವ್ರವಾಗಿರುತ್ತದೆ. ಹೃದಯಘಾತದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ಅದು ಸಂಭವವಿಸದಂತೆ ಎಚ್ಚರವಹಿಸುವುದು ಸೂಕ್ತ.
ಆಸ್ಪಿರಿನ್
ಅನೇಕ ವೈದ್ಯರು ಯಾವಾಗಲೂ ಈ ಮಾತ್ರೆಯನ್ನು ಜೇಬಿನಲ್ಲಿ ಇಟ್ಟುಕೊಳ್ಳಬಹುದು ಎಂದು ಸೂಚಿಸುತ್ತಾರೆ. ಇದರ ಪ್ರಮಾಣ ಎಷ್ಟು ಎಂಬುದನ್ನು ವೈದ್ಯರನ್ನು ಸಂಪರ್ಕಿಸಿ ತಿಳಿದುಕೊಳ್ಳಿ
ಶುಂಠಿ ಚಹಾ
ಶುಂಠಿ ಚಹಾ ಕುಡಿಯುವುದರಿಂದ ಅಜೀರ್ಣ ಇದ್ದರೆ ಸರಿಯಾಗುತ್ತದೆ. ಶೀತ, ಕೆಮ್ಮು ನಿಯಂತ್ರಣಕ್ಕೆ ಬರುತ್ತದೆ.
ಹೃದಯಾಘಾತ ಮತ್ತು ಶುಂಠಿ
ಆದರೆ, ವೈದ್ಯರ ಪ್ರಕಾರ, ಹೃದಯಾಘಾತಕ್ಕೂ ಶುಂಠಿಗೂ ಯಾವುದೇ ಸಂಬಂಧವಿಲ್ಲ. ಹೃದಯಾಘಾತವನ್ನು ತಡೆಯುವಲ್ಲಿ ಶುಂಠಿ ಯಾವುದೇ ಪಾತ್ರವನ್ನು ವಹಿಸುವುದಿಲ್ಲ.
ಸಂಶೋಧನೆಯಲ್ಲಿ ದೃಢೀಕರಣವಿಲ್ಲ
ಶುಂಠಿ ಅಥವಾ ಶುಂಠಿ ಚಹಾ ಕುಡಿಯುವುದರಿಂದ ಹೃದಯಾಘಾತದ ಸಾಧ್ಯತೆಗಳು ಕಡಿಮೆಯಾಗುತ್ತದೆ ಎಂದು ಎಲ್ಲಿಯೂ ಹೇಳಲಾಗಿಲ್ಲ.
ಆದರೆ ಮತ್ತೊಂದು ಅಧ್ಯಯನ ಹೇಳುತ್ತದೆ
ಆಸ್ಪಿರಿನ್ ಹೃದಯಾಘಾತದ ಸಾಧ್ಯತೆಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.