ತೆಂಗಿನ ಎಣ್ಣೆ ಕೂದಲಿನ ಆಳಕ್ಕೆ ಇಳಿದು ಕೂದಲು ಒಡೆಯುವುದನ್ನು ತಡೆಯುತ್ತದೆ. ಜೊತೆಗೆ ನೆತ್ತಿಯನ್ನು ತೇವಗೊಳಿಸಿ ತಲೆಹೊಟ್ಟು ಮತ್ತು ತುರಿಕೆ ಸಮಸ್ಯೆಯನ್ನು ನಿವಾರಿಸುತ್ತದೆ.
ತೆಂಗಿನ ಎಣ್ಣೆ ಕೂದಲಿನ ಬುಡವನ್ನು ಬಲಪಡಿಸಿ ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಈ ಎಣ್ಣೆ ಹಗುರವಾಗಿದ್ದು ಬೇಗನೆ ಹೀರಿಕೊಳ್ಳುತ್ತದೆ.
ನಿಮ್ಮ ಕೂದಲು ತುಂಬಾ ಒಣಗಿದ್ದರೆ, ನಿರ್ಜೀವವಾಗಿದ್ದರೆ ಅಥವಾ ತುದಿಗಳಲ್ಲಿ ಸೀಳುಗಳಿದ್ದರೆ, ತೆಂಗಿನ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ರಾತ್ರಿಯಿಡೀ ಹಾಗೆಯೇ ಇಡಿ.
ಆಲಿವ್ ಎಣ್ಣೆ ಕೂದಲನ್ನು ಆಳವಾಗಿ ತೇವಗೊಳಿಸುತ್ತದೆ ಮತ್ತು ಒಣ ಕೂದಲಿಗೆ ಇದು ಉತ್ತಮವಾಗಿದೆ. ಇದರಲ್ಲಿರುವ ವಿಟಮಿನ್ ಇ ಕೂದಲನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
ಹೇರ್ ಸ್ಟ್ರೈಟ್ನರ್, ಡ್ರೈಯರ್ ಬಳಸುವವರಿಗೆ ಈ ಎಣ್ಣೆ ಶಾಖದ ಹಾನಿಯಿಂದ ಕೂದಲನ್ನು ರಕ್ಷಿಸುತ್ತದೆ.
ತೆಂಗಿನ ಎಣ್ಣೆ, ಆಲಿವ್ ಎಣ್ಣೆ ಎರಡೂ ಒಣ, ದುರ್ಬಲ ಕೂದಲಿಗೆ ಪ್ರಯೋಜನಕಾರಿ. ಆದರೆ ನಿಮ್ಮ ಕೂದಲಿನ ಪ್ರಕಾರಕ್ಕೆ ಅನುಗುಣವಾಗಿ ಈ ಎರಡರಲ್ಲಿ ಯಾವುದನ್ನಾದರೂ ಒಂದನ್ನು ಬಳಸಿ.
ಲಿವರ್ ಆರೋಗ್ಯಕ್ಕೆ ಹಾನಿಕರವಾದ ಅಭ್ಯಾಸಗಳಿವು, ಇಂದೇ ಇವನ್ನೆಲ್ಲ ಬಿಡಿ
ಈ ಲಕ್ಷಣಗಳು ಕಂಡ್ರೆ ಕಿಡ್ನಿಯಲ್ಲಿ ಸ್ಟೋನ್ ಆಗಿದೆ ಎಂದರ್ಥ
ಅನಾರೋಗ್ಯಕರ ಕರುಳಿನ ಎಚ್ಚರಿಕೆ ಲಕ್ಷಣಗಳು
ಮೆದುಳಿಗೆ ಹಾನಿಕಾರಕ ಆರು ಆಹಾರಗಳಿವು!