ನೇರಳೆ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಎ, ಸಿ, ಕೆ, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಮೆಗ್ನೀಶಿಯಂ ಮುಂತಾದವುಗಳು ಹೇರಳವಾಗಿದ್ದು, ನೇರಳೆ ಹಣ್ಣಿನ ಆರೋಗ್ಯ ಪ್ರಯೋಜನಗಳೇನೆಂದು ನೋಡೋಣ.
Kannada
ಜೀರ್ಣಕ್ರಿಯೆಗೆ ಸಹಕಾರಿ
ನಾರಿನಂಶವಿರುವ ನೇರಳೆ ಹಣ್ಣು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಹೊಟ್ಟೆಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
Kannada
ರಕ್ತಹೀನತೆ ತಡೆಯಲು
ವಿಟಮಿನ್ ಸಿ ಮತ್ತು ಕಬ್ಬಿಣವನ್ನು ಹೊಂದಿರುವ ನೇರಳೆ ಹಣ್ಣು ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಲು ಮತ್ತು ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ.
Kannada
ಸಕ್ಕರೆ ಪ್ರಮಾಣ ಕಡಿಮೆ ಮಾಡಲು
ನೇರಳೆ ಹಣ್ಣಿಗೆ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇದೆ. ನಾರಿನಂಶವೂ ಇದರಲ್ಲಿದೆ. ಆದ್ದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
Kannada
ರೋಗನಿರೋಧಕ ಶಕ್ತಿ ಹೆಚ್ಚಳ
ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ನೇರಳೆ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
Kannada
ಕಣ್ಣಿನ ಆರೋಗ್ಯ
ವಿಟಮಿನ್ ಸಿ ಮತ್ತು ಎ ಹೇರಳವಾಗಿರುವುದರಿಂದ ಇದು ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು.
Kannada
ತೂಕ ಇಳಿಸಲು
ನಾರಿನಂಶ ಹೊಂದಿರುವ ಮತ್ತು ಕಡಿಮೆ ಕ್ಯಾಲೊರಿ ಇರುವ ನೇರಳೆ ಹಣ್ಣು ಹಸಿವು ಕಡಿಮೆ ಮಾಡಲು ಮತ್ತು ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ.
Kannada
ಚರ್ಮದ ಆರೋಗ್ಯ
ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೇರಳೆ ಹಣ್ಣು ಸಹಾಯ ಮಾಡುತ್ತದೆ.