ನಮ್ಮ ಹೃದಯವನ್ನು ಆರೋಗ್ಯವಾಗಿ ಮತ್ತು ಬಲಿಷ್ಠವಾಗಿಡಲು ಸಹಾಯ ಮಾಡುವ ಏಳು ಪ್ರಮುಖ ಸೂಪರ್‌ಫುಡ್‌ಗಳ ಬಗ್ಗೆ ಇಲ್ಲಿ ತಿಳಿಯೋಣ. ಇವು ನಿಮ್ಮ ದೈನಂದಿನ ಆಹಾರದ ಭಾಗವಾಗಿರಲಿ.
health-life May 06 2026
Author: Ashwini HR Image Credits:Getty
Kannada
ಹಸಿರು ಸೊಪ್ಪು ತರಕಾರಿಗಳು
ಸೊಪ್ಪುಗಳಲ್ಲಿ ವಿಟಮಿನ್‌ಗಳು, ಖನಿಜಾಂಶಗಳು ಮತ್ತು ನೈಟ್ರೇಟ್‌ಗಳು ಅಧಿಕವಾಗಿವೆ. ಇವು ರಕ್ತನಾಳಗಳನ್ನು ಬಲಪಡಿಸಿ, ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತವೆ.
Image credits: Getty
Kannada
ಕೊಬ್ಬಿನಾಂಶವಿರುವ ಮೀನು
ಸಾಲ್ಮನ್, ಬಂಗುಡೆ, ಸಾರ್ಡಿನ್ ಮತ್ತು ಟ್ಯೂನಾದಂತಹ ಮೀನುಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ಸಮೃದ್ಧವಾಗಿದೆ. ಇದು ಉರಿಯೂತವನ್ನು ಕಡಿಮೆ ಮಾಡಿ, ಹೃದ್ರೋಗದ ಅಪಾಯವನ್ನು ತಗ್ಗಿಸುತ್ತದೆ.
Image credits: Getty
Kannada
ಹೋಲ್ ಗ್ರೈನ್
ಓಟ್ಸ್, ಬ್ರೌನ್ ರೈಸ್, ಬಾರ್ಲಿ ಮತ್ತು ಗೋಧಿಯಂತಹ ಹೋಲ್ ಗ್ರೈನ್‌ಗಳಲ್ಲಿ ಫೈಬರ್ ಅಂಶ ಹೆಚ್ಚಿರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
Image credits: Getty
Kannada
ಬೆರ್ರಿ ಹಣ್ಣುಗಳು
ಬ್ಲೂಬೆರ್ರಿ, ಸ್ಟ್ರಾಬೆರ್ರಿ, ರಾಸ್ಪ್‌ಬೆರಿಗಳಲ್ಲಿ ಆಂಥೋಸಯಾನಿನ್‌ಗಳಂತಹ ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದಿಂದ ದೇಹವನ್ನು ರಕ್ಷಿಸುತ್ತವೆ.
Image credits: Getty
Kannada
ನಟ್ಸ್
ನಟ್ಸ್‌ಗಳು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಾಲ್‌ನಟ್, ಬಾದಾಮಿ, ಪಿಸ್ತಾ, ಗೋಡಂಬಿಗಳಲ್ಲಿ ಮೊನೊಸಾಚುರೇಟೆಡ್ ಕೊಬ್ಬು, ಫೈಬರ್ ಮತ್ತು ಒಮೆಗಾ-3 ಫ್ಯಾಟಿ ಆಸಿಡ್‌ಗಳಿವೆ.
Image credits: Getty
Kannada
ಆಲಿವ್ ಎಣ್ಣೆ
ಆಲಿವ್ ಎಣ್ಣೆಯಲ್ಲಿ ಮೊನೊಸಾಚುರೇಟೆಡ್ ಕೊಬ್ಬು ಅಧಿಕವಾಗಿದೆ. ಇದು 'ಕೆಟ್ಟ' (LDL) ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Image credits: Getty
Kannada
ಅವಕಾಡೊ
ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ಅವಕಾಡೊ ತಿಂದರೆ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯ 16% ಮತ್ತು ಪರಿಧಮನಿಯ ಹೃದ್ರೋಗದ ಅಪಾಯ 21% ರಷ್ಟು ಕಡಿಮೆಯಾಗುತ್ತದೆ.