ಮನೆ ಎಷ್ಟೇ ಶುಚಿಯಾಗಿದ್ದರೂ ಅಲ್ಲಿ ನೊಣಗಳಿದ್ದರೆ ಮನಸಿಗೆ ಕಸಿವಿಸಿ ಅನಿಸುತ್ತಲ್ಲವೇ? ಹೇಗೆ ಓಡಿಸುವುದು? ಎಷ್ಟೇ ಪ್ರಯತ್ನಿಸಿದರೂ ನೊಣಗಳು ತಡೆಯಲು ಸಾಧ್ಯವಾಗದಿದ್ದರೆ ಚಿಂತಿಸಬೇಡಿ. ಹೇಗೆ ಓಡಿಸಬೇಕು ಎಂದು ತಿಳಿಯೋಣ.
Image credits: Getty
ನೊಣಗಳನ್ನು ತಡೆಯುವುದು ಹೇಗೆ?
ಮಳೆಗಾಲ, ಚಳಿಗಾಲದಲ್ಲಿ ನೊಣಗಳ ಕಾಟ ಹೆಚ್ಚಾಗಿರುತ್ತದೆ. ಮನೆಯಲ್ಲಿ ನೊಣಗಳು ಬಾರದಂತೆ ತಡೆಯುವುದು ಹೇಗೆ?
Image credits: Getty
ಉಪ್ಪು ನೀರಿನ ಸ್ಪ್ರೇ
ಉಪ್ಪು ನೀರನ್ನು ಬಾಟಲಿಗೆ ತೆಗೆದುಕೊಂಡು ಸ್ಪ್ರೇ ಮಾಡುವುದರಿಂದ ನೊಣಗಳು ದೂರವಿರುತ್ತವೆ.
Image credits: Getty
ಪುದೀನಾ ಎಲೆಗಳು
ಪುದೀನಾ, ತುಳಸಿ ಎಲೆಗಳನ್ನು ನೀರಿನಲ್ಲಿ ಬೆರೆಸಿ ಅಡುಗೆ ಮನೆ ಹಾಗೂ ಮನೆಯ ಸುತ್ತ ಸ್ಪ್ರೇ ಮಾಡುವುದರಿಂದ ನೊಣಗಳು ದೂರವಿರುತ್ತವೆ.
Image credits: Getty
ನಿಂಬೆಹಣ್ಣು
ಎರಡು ನಿಂಬೆಹಣ್ಣುಗಳನ್ನು ಅರ್ಧಕ್ಕೆ ಕತ್ತರಿಸಿ, ಪ್ರತಿ ಅರ್ಧದಲ್ಲಿ 4-5 ಲವಂಗಗಳನ್ನು ಇಟ್ಟು ನೊಣಗಳು ಹೆಚ್ಚಾಗಿರುವ ಜಾಗದಲ್ಲಿಡಿ.
Image credits: Getty
ಕಿತ್ತಳೆ ಸಿಪ್ಪೆಗಳು
ಕಿತ್ತಳೆ ಸಿಪ್ಪೆಗಳನ್ನು ನೆನೆಸಿ ಒಂದು ಬಟ್ಟೆಯಲ್ಲಿ ಸುತ್ತಿ ನೊಣಗಳು ಹೆಚ್ಚಾಗಿರುವ ಜಾಗದಲ್ಲಿ ನೇತು ಹಾಕಿ.
Image credits: Getty
ಶುಂಠಿ
ಒಂದು ಕಪ್ ನೀರಿನಲ್ಲಿ ಶುಂಠಿ ತುಂಡನ್ನು ಜಜ್ಜಿ ಬೆರೆಸಿ. ಶುಂಠಿಯ ವಾಸನೆ ನೊಣಗಳನ್ನು ದೂರವಿಡುತ್ತದೆ.