ಭಾರತದ ದುಬಾರಿ ಅಣಬೆಯಿದು; 1 ಕೆಜಿ ಅಣಬೆ ಬೆಲೆಗೆ 40 ಕೆಜಿ ಮಟನ್ ಬರುತ್ತೆ!
ವಿಶ್ವದ ಅತ್ಯಂತ ದುಬಾರಿ ಅಣಬೆ
ಗುಚ್ಚಿ ಅಣಬೆ ವಿಶ್ವದ ದುಬಾರಿ ಅಣಬೆಗಳಲ್ಲಿ ಒಂದಾಗಿದೆ. ಇದನ್ನು ಮೊರ್ಚೆಲ್ಲಾ ಎಸ್ಕ್ಯುಲೆಂಟಾ ಎನ್ನುತ್ತಾರೆ. ಇದು ಕಾಡು ಅಣಬೆಯಾಗಿದ್ದು, ಅದರ ವಿಶಿಷ್ಟ ರುಚಿ, ಔಷಧೀಯ ಗುಣಗಳು ಮತ್ತು ಅಪರೂಪದಿಂದಾಗಿ ಹೆಸರುವಾಸಿಯಾಗಿದೆ.
ಗುಚ್ಚಿ ಅಣಬೆ ಎಲ್ಲಿ ಬೆಳೆಯುತ್ತದೆ:
ಗುಚ್ಚಿ ಅಣಬೆ ಕಾಶ್ಮೀರದಲ್ಲಿ ಮಾತ್ರ ಬೆಳೆಯುತ್ತದೆ. ವಿಶೇಷವೆಂದರೆ ಅವುಗಳನ್ನು ಕೃತಕವಾಗಿ ಬೆಳೆಸಲಾಗುವುದಿಲ್ಲ, ಅವು ನೈಸರ್ಗಿಕವಾಗಿ ಬೆಳೆಯುತ್ತವೆ. ಇವುಗಳನ್ನು ಇಂಗ್ಲಿಷ್‌ನಲ್ಲಿ ಮೊರೆಲ್ಸ್ ಎಂದೂ ಕರೆಯುತ್ತಾರೆ.
ಗುಚ್ಚಿ ಅಣಬೆ ಯಾವಾಗ ಮತ್ತು ಹೇಗೆ ಸಿಗುತ್ತದೆ?
ಗುಚ್ಚಿ ಅಣಬೆ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕಂಡುಬರುತ್ತದೆ. ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿರುವ ಅರಿಪಾಲ್‌ನಲ್ಲಿ ಗುಚ್ಚಿಯನ್ನು ಹುಡುಕಿ, ಮುರಿದು ಒಣಗಿಸಿ ಮಾರಾಟ ಮಾಡಲಾಗುತ್ತದೆ.
ಗುಚ್ಚಿ ಅಣಬೆ ಬೆಲೆ
ಉತ್ತಮ ಗುಣಮಟ್ಟದ ಗುಚ್ಚಿ ಅಣಬೆ ಕೆಜಿಗೆ 40,000 ರೂಪಾಯಿಗಳವರೆಗೆ ಮಾರಾಟವಾಗುತ್ತದೆ. ಇದೀಗ ಯುಗಾದಿ ಹೊಸತೊಡಕು ಹಬ್ಬದಲ್ಲಿ 1000 ರೂ.ಗೆ ಕೆಜಿ ಮಟನ್ ಸಿಗುತ್ತದೆ. ಅಂದರೆ 1 ಕೆಜಿ ಅಣಬೆ ಬೆಲೆಗೆ 40 ಕೆಜಿ ಮಟನ್ ಬರುತ್ತದೆ
ಯಾವ ಪಾಕಪದ್ಧತಿಗಳಲ್ಲಿ ಬಳಸಲಾಗುತ್ತದೆ
ಗುಚ್ಚಿ ಅಣಬೆಯನ್ನು ಚೈನೀಸ್, ಅರೇಬಿಕ್, ಇಟಾಲಿಯನ್ ಸ್ಟೈಲ್ ಅಡುಗೆಗಳಲ್ಲಿ ಬಳಸಲಾಗುತ್ತದೆ. ಆದರೆ ಕಾಶ್ಮೀರಿ ಊಟದಲ್ಲಿ ಹೆಚ್ಚು ಮಜಾ ಇರುತ್ತದೆ. ಇವುಗಳನ್ನು ಪುಲಾವ್, ಕುರ್ಮಾ ಅಥವಾ ಸ್ಟಫ್ ಮಾಡಲು ಬಳಸಲಾಗುತ್ತದೆ.
ಗುಚ್ಚಿ ಅಣಬೆ ಸೇವನೆಯ ಪ್ರಯೋಜನಗಳು
ಗುಚ್ಚಿ ಅಣಬೆ ರುಚಿಕರ ಜೊತೆಗೆ ಆರೋಗ್ಯಕರವೂ ಆಗಿದೆ. ಪ್ರೋಟೀನ್ ಭರಿತವಾಗಿದೆ. ಇದರ ಜೊತೆಗೆ ಆಂಟಿ ಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಖನಿಜಗಳು ಹೇರಳವಾಗಿ ಕಂಡುಬರುತ್ತವೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.