ರಾತ್ರಿ ಕಡಿಮೆ ಕ್ಯಾಲೋರಿ ಇರುವ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯಕರ ತೂಕ ಇಳಿಕೆಗೆ ಸಹಾಯವಾಗುತ್ತದೆ.
ಕಡಿಮೆ ಕ್ಯಾಲೋರಿ ಆಹಾರಗಳು ಜೀರ್ಣಾಂಗ ವ್ಯವಸ್ಥೆಯ ಕಾರ್ಯವನ್ನು ಸುಗಮಗೊಳಿಸಲು ಸಹಾಯ ಮಾಡುತ್ತವೆ. ರಾತ್ರಿ ಸೇವಿಸಬೇಕಾದ ಕಡಿಮೆ ಕ್ಯಾಲೋರಿ ಆಹಾರಗಳ ಪಟ್ಟಿ ಇಲ್ಲಿದೆ.
ಕ್ಯಾರೆಟ್, ಬೀಟ್ರೂಟ್, ಎಲೆಕೋಸು, ಟೊಮೆಟೊ, ಸೌತೆಕಾಯಿಯಂತಹ ತರಕಾರಿಗಳನ್ನು ಒಟ್ಟಿಗೆ ಸೇರಿಸಿ ಸಲಾಡ್ ಆಗಿ ಸೇವಿಸಿ.
ಬ್ರೊಕೊಲಿ, ಹೂಕೋಸು, ಬೇಳೆಕಾಳುಗಳಂತಹ ಪದಾರ್ಥಗಳಿಂದ ಸೂಪ್ ತಯಾರಿಸಿ ಕುಡಿಯಿರಿ.
ಓಟ್ಸ್, ಗೋಧಿ, ಕ್ವಿನೋವಾದಂತಹ ಸಂಪೂರ್ಣ ಧಾನ್ಯಗಳಲ್ಲಿ ಫೈಬರ್ ಅಧಿಕವಾಗಿದ್ದು, ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿದಂತೆ ಇಡುತ್ತದೆ.
ರಾತ್ರಿ ಎಣ್ಣೆಯನ್ನು ಮಿತವಾಗಿ ಬಳಸಿ. ಸಾಧ್ಯವಾದಷ್ಟು ಹಬೆಯಲ್ಲಿ ಬೇಯಿಸಿದ ಆಹಾರಗಳನ್ನು ಸೇವಿಸಿ.
ಸಿಹಿತಿಂಡಿಗಳು, ಸಂಸ್ಕರಿಸಿದ ಆಹಾರಗಳು, ಸೋಡಿಯಂ ಅಧಿಕವಿರುವ ಆಹಾರಗಳನ್ನು ತಪ್ಪಿಸಿ.
ರಾತ್ರಿ ಮಲಗುವ ಸುಮಾರು 2 ರಿಂದ 3 ಗಂಟೆಗಳ ಮೊದಲು ಊಟ ಮಾಡಬೇಕು.
ನಿಮಗೆ ಈ ಸಮಸ್ಯೆಗಳಿದ್ದರೆ ಆಹಾರದಲ್ಲಿ ತುಪ್ಪ ಸೇರಿಸಿ ತಿನ್ನಿ!
ಈ ಆಹಾರಗಳು ಬಂಗಾರಕ್ಕಿಂತ ದುಬಾರಿ, ನೀವು ಎಂದಾದರೂ ರುಚಿ ನೋಡಿದ್ದೀರಾ?
ಬೆಳಗ್ಗೆ ಎದ್ದ ತಕ್ಷಣ ಸೋರೆಕಾಯಿ ಜ್ಯೂಸ್ ಕುಡಿಯಬೇಕಂತೆ, ಯಾಕೆ ಗೊತ್ತಾ?
ಹಾಗಲಕಾಯಿ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದು ಆದ್ರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು ಏಕೆ?