Food

ಚಳಿಗಾಲಕ್ಕೆ ಬೆಸ್ಟ್ ಮದ್ದು

ಬದಲಾಗುವ ಋತುವಿನಲ್ಲಿ ರಾಮಬಾಣ ಹುರಿದ ಬೆಳ್ಳುಳ್ಳಿ ಲವಂಗ.

ರೋಗ ನಿರೋಧಕ ಶಕ್ತಿ ಹೆಚ್ಚಳ

ಮಳೆ, ಬಿಸಲು, ಚಳಿಯಾದರೆ ರೋಗ ನಿರೋಧಕ ಶಕ್ತಿ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಬದಲಾಗುತ್ತಿರುವ ಋತುವಿನಲ್ಲಿ ಹುರಿದ ಬೆಳ್ಳುಳ್ಳಿ ಮತ್ತು ಲವಂಗ ಸೇವಿಸಿದರೆ ಹಲವು ಪ್ರಯೋಜನಗಳಿವೆ.

ರೋಗನಿರೋಧಕ ಶಕ್ತಿ ಹೆಚ್ಚಳ

ಬೆಳ್ಳುಳ್ಳಿಯಲ್ಲಿ ಆಲಿಸಿನ್ ಮತ್ತು ಉತ್ಕರ್ಷಣ ನಿರೋಧಕಗಳು ಇರುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮ್ಯಾಂಗನೀಸ್, ಸೆಲೆನಿಯಮ್, ರಂಜಕ, ಕಬ್ಬಿಣ, ತಾಮ್ರ ಇತ್ಯಾದಿಗಳು ದೇಹಕ್ಕೆ ಶಕ್ತಿ ಕೊಡುತ್ತದೆ.

ಬಲಿಷ್ಠಗೊಳಿಸುವ ಲವಂಗ

ಲವಂಗ ಆ್ಯಂಟಿ ವೈರಲ್, ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ರಾತ್ರಿ ಸೇವಿಸಿ

ರಾತ್ರಿ ಮಲಗುವ ಮುನ್ನ 2 ಲವಂಗವನ್ನು ಬಿಸಿ ನೀರಿನೊಂದಿಗೆ ಸೇವಿಸಿದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಲವಂಗವನ್ನು ಚಹಾದಲ್ಲಿಯೂ ಬೆರೆಸಿ ಸೇವಿಸಬಹುದು.

ಬೆಳ್ಳುಳ್ಳಿ-ಲವಂಗ ಒಟ್ಟಿಗೆ ಸೇವಿಸಿದರೆ?

ಬೆಳ್ಳುಳ್ಳಿ ದೇಹದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಹೃದ್ರೋಗದ ಅಪಾಯವೂ ಗಣನೀಯವಾಗಿ ಕಡಿಮೆಯಾಗುತ್ತದೆ. ಜೊತೆಗೆ ಬೆಳ್ಳುಳ್ಳಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ದೇಹದ ವಿಷ ನಿವಾರಿಸುತ್ತದೆ

ದೇಹವನ್ನು ನಿರ್ವಿಷಗೊಳಿಸಲು ಲವಂಗ, ಹುರಿದ ಬೆಳ್ಳುಳ್ಳಿಯನ್ನು ಸೇವಿಸಬಹುದು. ಹುರಿದ ಬೆಳ್ಳುಳ್ಳಿಯನ್ನು ಲವಂಗದೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ಊಟದ ಜೊತೆಗೆ ಇದನ್ನು ಸೇವಿಸಬಹುದು.

ಮೂಳೆಗಳಿಗೆ ಬಲ

ಲವಂಗ ಮತ್ತು ಬೆಳ್ಳುಳ್ಳಿಯಲ್ಲಿ ಸಾಕಷ್ಟು ಪ್ರಮಾಣದ ಮೆಗ್ನೀಷಿಯಮ್ ಮತ್ತು ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ನೀವು ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಅಥವಾ ಲವಂಗವನ್ನು ಸೇವಿಸಬಾರದು.

ಸಿಗರೇಟ್‌ ಜೊತೆ ಟೀ, ಕಾಫಿ ಸೇವಿಸ್ತೀರಾ.. ಹಾಗಿದ್ರೆ ಹೊಗೆ ಬೇಗ

ಬೆಳಬೆಳಗ್ಗೆ ಈ ಆಹಾರಗಳನ್ನು ತಿನ್ನಲೇಬೇಡಿ ಯಾಕೆಂದರೆ..,

ಬೆಳಗ್ಗಿನ ಉಪಹಾರ ಅಂತ ಇವುಗಳ ತಿನ್ತಿದ್ರೆ ಈಗಲೇ ನಿಲ್ಲಿಸಿ!

ಪಾಲಕ್ ಸೊಪ್ಪಿನ ಹಲವು ಅದ್ಭುತ ಆರೋಗ್ಯ ಪ್ರಯೋಜನಗಳಿವು