Festivals

ರಾಮಲಲ್ಲಾ

ಅಯೋಧ್ಯಾ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಈ ವರ್ಷದ ಜನವರಿ 22ರಂದು ನಡೆದಿತ್ತು. ಆದರೆ ಈ ಕಾರ್ಯಕ್ರಮದ ವಾರ್ಷಿಕೋತ್ಸವವನ್ನು ಜನವರಿ 22 ರ ಬದಲು ಜನವರಿ 11 ರಂದು ನಡೆಸಲು ನಿರ್ಧರಿಸಲಾಗಿದೆ. 

ಕಾರಣವೇನು?

ಅಯೋಧ್ಯಾ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ  ವಾರ್ಷಿಕೋತ್ಸವವನ್ನು ಜನವರಿ 22 ರ ಬದಲು ಜನವರಿ 11 ರಂದು ನಡೆಸಲು ನಿರ್ಧರಿಸಲಾಗಿದೆ.  ಹೀಗೆ ಮಾಡಲು ಕಾರಣವೇನು, ಇದರ ಹಿಂದಿನ ತಾರ್ಕಿಕ ಕಾರಣವೇನು? 

ರಾಮಲಲ್ಲಾ

ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಮಹೋತ್ಸವವು ಜನವರಿ 22, 2024 ರಂದು ಅಯೋಧ್ಯೆಯಲ್ಲಿ ನಡೆಯಿತು, ಆದರೆ ಈಗ ಅದರ ವಾರ್ಷಿಕೋತ್ಸವವನ್ನು ಪ್ರತಿ ವರ್ಷ ಹಿಂದೂ ಪಂಚಾಂಗದ ಪ್ರಕಾರ ಆಚರಿಸಲಾಗುವುದು.

ರಾಮಲಲ್ಲಾ

ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಈ ಕಾರ್ಯಕ್ರಮವು 2025 ರಲ್ಲಿ ಜನವರಿ 11 ರಂದು ನಡೆಯಲಿದೆ ಎಂದು ಘೋಷಿಸಿದೆ, ಏಕೆಂದರೆ ಹಿಂದೂ ಧರ್ಮದಲ್ಲಿ ಹಬ್ಬಗಳನ್ನು ಪಂಚಾಂಗ ಆಧಾರಿತ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ.

ರಾಮಲಲ್ಲಾ

2024ರಲ್ಲಿ ಪೌಷ ಶುಕ್ಲ ಪಕ್ಷದ ಕೂರ್ಮ ದ್ವಾದಶಿಯಂದು ಪ್ರಾಣ ಪ್ರತಿಷ್ಠಾಪನೆ ನಡೆದಿತ್ತು. ಈ ದಿನಾಂಕವು 2025 ರಲ್ಲಿ ಜನವರಿ 11 ರಂದು ಬರುತ್ತದೆ. ಆದ್ದರಿಂದ ವಾರ್ಷಿಕೋತ್ಸವವನ್ನು ಜನವರಿ 11 ರಂದು ಆಚರಿಸಲಾಗುತ್ತಿದೆ

ಟ್ರಸ್ಟ್‌ನ ಅಧಿಕೃತ ಹೇಳಿಕೆ

ಸಂತರ ಜೊತೆ ಸಮಾಲೋಚನೆಯ ನಂತರ, ಹಿಂದೂ ಪಂಚಾಂಗದ ಪ್ರಕಾರ ಶ್ರೀ ರಾಮಲಲ್ಲಾ ಅವರ ಪ್ರಾಣ ಪ್ರತಿಷ್ಠಾ ವಾರ್ಷಿಕೋತ್ಸವವನ್ನು ಪೌಷ ಶುಕ್ಲ ದ್ವಾದಶಿಯಂದು ಪ್ರತಿಷ್ಠಾ ದ್ವಾದಶಿಯಾಗಿ ಆಚರಿಸಲಾಗುವುದು ಎಂದು  ಟ್ರಸ್ಟ್ ತಿಳಿಸಿದೆ

ರಾಮಲಲ್ಲಾ

ರಾಮ ಮಂದಿರ ನಿರ್ಮಾಣ ಕಾರ್ಯವು ಸೆಪ್ಟೆಂಬರ್ 2025 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಾರ್ಮಿಕರ ಕೊರತೆಯಿಂದ ನಿರ್ಮಾಣ ವಿಳಂಬವಾಗುತ್ತಿದೆ ಎಂದು ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.

ಯಾತ್ರಿಕರಿಗೆ ಆಸ್ಪತ್ರೆ ನಿರ್ಮಾಣ

ರಾಮ ಮಂದಿರದ ಆವರಣದಲ್ಲಿ ಯಾತ್ರಿಕರಿಗೆ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸುವ ಯೋಜನೆಯಿದೆ. ಅಪೋಲೋ ಆಸ್ಪತ್ರೆಯು ಮಂದಿರದ ಆವರಣದ ಬಳಿ 3,000 ಚದರ ಮೀಟರ್‌ಗಳಲ್ಲಿ ಅತ್ಯಾಧುನಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಿದೆ.

ರಾಮಲಲ್ಲಾ

ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಮತ್ತು ಮಂದಿರದ ಅಭಿವೃದ್ಧಿಗೆ ಸಂಬಂಧಿಸಿದ ಈ ಘೋಷಣೆಗಳು ಮುಂಬರುವ ದಿನಗಳಲ್ಲಿ ಭಕ್ತರಿಗೆ ಹೊಸ ನಿರೀಕ್ಷೆಯನ್ನು ತರುತ್ತಿವೆ.

ಸಮಯಕ್ಕೆ ಸರಿಯಾಗಿ ಈ 4 ಕೆಲಸಗಳನ್ನು ಮಾಡಿ

ಕಾರ್ಪೋರೇಟ್‌ ಯಶಸ್ಸಿಗೆ ಚಾಣಕ್ಯ ನೀಡಿರುವ 10 ಸಲಹೆಗಳು!

ಗುಲಾಬಿ ಅಥವಾ ಪಿಂಕ್ ಕಲರ್ ಪ್ರೀತಿಯ ಸಂಕೇತ ಅಲ್ವಂತೆ, ಯಾಕೆ ಗೊತ್ತಾ?

ಯಶಸ್ಸಿಗೆ ಏಕಾಂಗಿಯಾಗಿ ಮಾಡಬೇಕಾದ 4 ಕೆಲಸಗಳು