ಮದುಮಗಳಿಗೆ ನೀಡುವ ಈ ವಾಂಕಿ ಉಂಗುರವನ್ನು ರಕ್ಷಾ ಕವಚವೆಂದೇ ಪರಿಗಣಿಸಲಾಗುತ್ತದೆ.
Kannada
ಮದುವೆಗೆ ವಾಂಕಿ ಉಂಗುರ ವಿನ್ಯಾಸ
ವಾಂಕಿ ಉಂಗುರವು ಸಾಂಪ್ರದಾಯಿಕ ಉಂಗುರ ವಿನ್ಯಾಸಗಳಲ್ಲೊಂದು. ಬಾಲಿವುಡ್ ಸೆಲೆಬ್ರಿಟಿಗಳಾದ ಐಶ್ವರ್ಯ ರೈಯಿಂದ ಪ್ರಾಜಕ್ತಾ ಕೋಲಿವರೆಗೆ ಇದನ್ನು ಧರಿಸುತ್ತಾರೆ,
Kannada
ರತ್ನ ಖಚಿತ ವಿನ್ಯಾಸ
ಬಿಳಿ, ಗುಲಾಬಿ ಮತ್ತು ಹಸಿರು ಬಣ್ಣದ ರತ್ನಗಳಿಂದ ಅಲಂಕರಿಸಲ್ಪಟ್ಟ ಈ ವಾಂಕಿ ಉಂಗುರವು ನಿಮ್ಮ ಕೈ ಬೆರಳಿನ ಸೌಂದರ್ಯವನ್ನು ನೂರ್ಮಡಿಗೊಳಿಸುತ್ತದೆ.
Kannada
ಚಿನ್ನದ ಉಂಗುರ
ಸಾಂಪ್ರದಾಯಿಕ ವಾಂಕಿ ಉಂಗುರದ ಈ ಸರಳ ವಿನ್ಯಾಸ ಚಿನ್ನದಲ್ಲಿದೆ, ಇದರಲ್ಲಿ ಕೆತ್ತನೆ ಜೊತೆಗೆ ಮೂರು ಗೆಜ್ಜೆಗಳೂ ಇವೆ, ಇದು ಬೆರಳ ಮೇಲೆ ಚೆನ್ನಾಗಿ ಕಾಣುತ್ತದೆ.
Kannada
ಬಿಳಿ ಹರಳಿನ ಉಂಗುರ
ಕಚೇರಿ ಮತ್ತು ದೈನಂದಿನ ಉಡುಗೆಗೆ ಈ ಬಿಳಿ ರತ್ನಗಳ ವಾಂಕಿ ಉಂಗುರ ವಿನ್ಯಾಸವು ತುಂಬಾ ಸುಂದರ ಮತ್ತು ಸ್ಟೈಲಿಶ್ ಆಗಿದೆ. ಸರಳ ವಾಂಕಿ ಧರಿಸುವ ಬದಲು ನೀವು ಈ ರೀತಿಯ ಹರಳಿನ ಉಂಗುರ ಧರಿಸಬಹುದು.
Kannada
ಆಧುನಿಕ ವಿನ್ಯಾಸ
ಚಿನ್ನ ಅಥವಾ ಸಾಂಪ್ರದಾಯಿಕ ವಾಂಕಿ ಉಂಗುರದ ವಿನ್ಯಾಸಕ್ಕಿಂತ ಭಿನ್ನವಾಗಿ ಈ ಎರಡು ವಿನ್ಯಾಸಗಳು ಆಧುನಿಕ ಮತ್ತು ಸ್ಟೈಲಿಶ್ ಆಗಿವೆ. ಈ ವಿನ್ಯಾಸ ಆಧುನಿಕ ಹುಡುಗಿಯರಿಗೂ ಹೇಳಿ ಮಾಡಿಸದಂತಿದೆ.
Kannada
ಎಡಿ ವರ್ಕ್ ವಿನ್ಯಾಸ
ಎಡಿ ವರ್ಕ್ ವಾಂಕಿ ಉಂಗುರದ ಈ ವಿನ್ಯಾಸ ಆಧುನಿಕ ಸ್ಪರ್ಶದೊಂದಿಗೆ ತುಂಬಾ ಸುಂದರ ಮತ್ತು ಸ್ಟೈಲಿಶ್ ಆಗಿದೆ. ವಾಂಕಿ ಉಂಗುರದ ಈ ವಿನ್ಯಾಸ ಕೈಗಳ ಮೇಲೆ ಚೆನ್ನಾಗಿ ಕಾಣುತ್ತದೆ.