ದೊಡ್ಡ ಲಕ್ಷ್ಮೀದೇವಿ ಲಾಕೆಟ್ ಜೊತೆಗೆ, ಸುತ್ತಲೂ ಡಿಸೈನ್ ಇರುವ ಈ ಲಾಂಗ್ ಹಾರ ಸೀರೆ ಮೇಲೆ ತುಂಬಾ ಚೆನ್ನಾಗಿರುತ್ತೆ. ಮ್ಯಾಚಿಂಗ್ ಜುಮುಕಿ ನಿಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತೆ. ಕುತ್ತಿಗೆ ತುಂಬಿದಂತೆ ಕಾಣುತ್ತೆ.
ಸಿಂಗಲ್ ಲೇಯರ್ ಬದಲು ಈ ರೀತಿ ಡಬಲ್ ಲೇಯರ್ ಇರುವ ಹಾರ ಟ್ರೈ ಮಾಡಿ. ಇದನ್ನ ಹಾಕಿಕೊಂಡರೆ ಮತ್ತೆ ಬೇರೆ ನೆಕ್ಲೇಸ್ ಹಾಕುವ ಅಗತ್ಯವಿಲ್ಲ. ತುಂಬಾ ಹೆವಿ ಲುಕ್ ಕೊಡುತ್ತೆ.
ಮಾರ್ಕೆಟ್‌ಗೆ ಎಷ್ಟೇ ಬಗೆಯ ಹಾರಗಳು ಬಂದರೂ, ಕಾಸಿನ ಸರವನ್ನು ಮೀರಿಸುವ ಮತ್ತೊಂದಿಲ್ಲ. ಇದು ಹಳೆ ಮಾಡೆಲ್ ಅಲ್ಲ, ಸ್ವಲ್ಪ ಟ್ರೆಂಡಿ ಆಗಿದೆ. ಸೀರೆ ಮೇಲೆ ತುಂಬಾ ಅದ್ಭುತವಾಗಿ ಕಾಣಿಸುತ್ತೆ.
ಕಡಿಮೆ ತೂಕದಲ್ಲಿ ಹಾರ ಬೇಕು ಅಂದರೆ, ಈ ರೀತಿ ಗುಂಡುಗಳಿರುವ ಚೈನ್ ಡಿಸೈನ್ ಸೆಲೆಕ್ಟ್ ಮಾಡಬಹುದು. ಇದು ಕೂಡ ಒಳ್ಳೆ ಲುಕ್ ಕೊಡುತ್ತೆ. ಸೀರೆ ಮೇಲೆ ಭವ್ಯವಾಗಿ ಕಾಣುತ್ತೆ.
ಕಡಿಮೆ ಚಿನ್ನದಲ್ಲಿ ಹೆವಿ ಹಾರ ಬೇಕು ಅಂದರೆ ಈ ತರಹದ ಮುತ್ತಿನ ಡಿಸೈನ್ ಆಯ್ಕೆ ಮಾಡಬಹುದು. ಕೆಳಗಡೆ ಹೆವಿ ಲಾಕೆಟ್ ಮತ್ತು ಮೇಲೆ ನಾಲ್ಕು ಮುತ್ತಿನ ಲೇಯರ್‌ಗಳಿರುತ್ತವೆ. ತುಂಬಾ ಸುಂದರವಾಗಿರುತ್ತದೆ.
ಈ ಹೆವಿ ಲಕ್ಷ್ಮೀ ದೇವಿ ಹಾರ ವಧುವಿಗೆ ತುಂಬಾ ಚೆನ್ನಾಗಿ ಒಪ್ಪುತ್ತೆ. ಟೆಂಪಲ್ ಜ್ಯುವೆಲರಿ ಆಗಿರೋದ್ರಿಂದ ರಿಚ್ ಲುಕ್ ಎದ್ದು ಕಾಣುತ್ತೆ. ಮ್ಯಾಚಿಂಗ್ ಜುಮುಕಿ ಅಂದವನ್ನು ದುಪ್ಪಟ್ಟು ಮಾಡುತ್ತೆ.
ಈ ಹಾರ ಕೇವಲ ಚಿನ್ನ ಮಾತ್ರವಲ್ಲದೆ ಎಡಿ ಸ್ಟೋನ್‌ಗಳಿಂದ ತುಂಬಿರುತ್ತದೆ. ಇದು ಕ್ಲಾಸಿ ಲುಕ್ ಕೊಡುತ್ತೆ. ಚಿನ್ನದಲ್ಲಿ ಕೊಳ್ಳೋಕೆ ಆಗದಿದ್ದರೆ ಆರ್ಟಿಫಿಷಿಯಲ್ ಕೂಡ ಸುಲಭವಾಗಿ ಸಿಗುತ್ತೆ.
ಪ್ರಸ್ತುತ ಇಂತಹ ಲಾಂಗ್ ಹಾರಗಳು ಟ್ರೆಂಡ್ ಆಗುತ್ತಿವೆ. ತುಂಬಾ ಹೆವಿ ಲುಕ್ ಇಷ್ಟಪಡದವರು ಇಂತಹ ಸಿಂಪಲ್ ಡಿಸೈನ್ ಆಯ್ಕೆ ಮಾಡಬಹುದು. ಹಬ್ಬ ಮತ್ತು ಫಂಕ್ಷನ್‌ಗಳಿಗೆ ಇದು ಬೆಸ್ಟ್ ಚಾಯ್ಸ್.
ಕಾಸಿನ ಸರದ ನಂತರ ಅಷ್ಟೇ ಡಿಮ್ಯಾಂಡ್ ಇರುವ ಹಾರ ಅಂದ್ರೆ ಮಾವಿನಕಾಯಿ ಹಾರ. ಇದಕ್ಕೆ ಸ್ವಲ್ಪ ಮಾಡರ್ನ್ ಟಚ್ ಕೊಟ್ಟು ಡಿಸೈನ್ ಮಾಡಿದ್ದಾರೆ. ಕುತ್ತಿಗೆಯಲ್ಲಿ ಇದೊಂದಿದ್ದರೆ ಬೇರೆನೂ ಬೇಡ.
ಬರೀ ಚಿನ್ನದ ಒಡವೆ ಇಷ್ಟಪಡದವರು ಪಚ್ಚೆ, ರೂಬಿ, ಕುಂದನ್ ಮತ್ತು ಸ್ಟೋನ್ ಕಾಂಬಿನೇಷನ್ ಇರುವ ಹಾರಗಳನ್ನು ಆಯ್ಕೆ ಮಾಡಬಹುದು. ಇವು ಕ್ಲಾಸಿ ಮತ್ತು ಎಲಿಗೆಂಟ್ ಲುಕ್ ನೀಡುತ್ತವೆ.
ಗುಟ್ಟಪೂಸಲು ಹಾರ ಇತ್ತೀಚೆಗೆ ತುಂಬಾ ಟ್ರೆಂಡ್ ಆಗಿತ್ತು. ಈಗಲೂ ಈ ಹಾರ ಹಾಕಿಕೊಳ್ಳಲು ಸಾಕಷ್ಟು ಜನ ಇಷ್ಟಪಡುತ್ತಾರೆ. ರೇಷ್ಮೆ ಸೀರೆಗಳ ಮೇಲೆ ಇಂಥ ಹಾರ ತುಂಬಾ ಚೆನ್ನಾಗಿ ಕಾಣಿಸುತ್ತೆ.
ಈ ಹಾರ ಚಿನ್ನ ಮತ್ತು ಎಡಿ ಸ್ಟೋನ್‌ಗಳ ಕಾಂಬಿನೇಷನ್‌ನಲ್ಲಿದೆ. ನೈಟ್ ಪಾರ್ಟಿಗಳಿಗೆ ಇಂಥ ಹಾರಗಳು ಸೂಕ್ತವಾಗಿರುತ್ತವೆ. ಕ್ಲಾಸಿ ಲುಕ್ ನೀಡುವ ಈ ಹಾರ ಹಾಕಿಕೊಂಡರೆ ಆಕರ್ಷಕವಾಗಿ ಕಾಣಿಸುತ್ತೆ.
ನಿಮ್ಮನ್ನು 10 ವರ್ಷ ಚಿಕ್ಕವರನ್ನಾಗಿ ಮಾಡುತ್ತೆ ಸುಂದರ ಕಶೀದಾ ಸೀರೆಗಳು
Chain Necklace: ಸೀರೆ, ಲೆಹೆಂಗಾ ಉಟ್ಟಾಗ ಈ ಚೈನ್ ನೆಕ್ಲೇಸ್ ಧರಿಸಿ; ಸಿಂಪಲ್ ಲುಕ್‌ಗೆ ಸಿಗುತ್ತೆ ಗ್ರ್ಯಾಂಡ್ ಟಚ್
Salwar Suits: ಹಬ್ಬ, ಮದುವೆಗೆ ಸೀರೆಗಿಂತ ಸಲ್ವಾರ್ ಸೂಟ್ ಇಷ್ಟನಾ? ಈ ಟ್ರೆಂಡಿ ಡಿಸೈನ್‌ಗಳನ್ನು ನೋಡಿ!
Bangle Designs: ಚಿನ್ನದ ಬಳೆಗಳಲ್ಲೇ ಇಷ್ಟೊಂದು ವೆರೈಟಿನಾ? ಸೀರೆಗೆ ಒಪ್ಪುವ ಸುಂದರ ಡಿಸೈನ್ ನೋಡಿ