Jhumka With Chain: ಸೀರೆ, ಲೆಹೆಂಗಾಗೆ ರಾಯಲ್ ಲುಕ್ ನೀಡುವ ಜುಮುಕಿ ಚೈನ್‌ಗಳು
fashion Oct 28 2026
Author: Govindaraj S Image Credits:South india Jewels
Kannada
ಕ್ಲಾಸಿಕ್ ಡಿಸೈನ್
ಡೈಮಂಡ್ ಶೇಪ್ ವರ್ಕ್ ಕೆಳಗೆ ದುಂಡಗಿನ ಜುಮುಕಿ ಆಕಾರದಲ್ಲಿ ಈ ಕ್ಲಾಸಿಕ್ ಡಿಸೈನ್ ರೂಪಿಸಲಾಗಿದೆ. ಪಾರ್ಟಿ ಹಾಗೂ ಸಮಾರಂಭಗಳಲ್ಲಿ ಗ್ರಾಂಡ್ ಲುಕ್ ಬೇಕು ಎನ್ನುವವರಿಗೆ ಇದು ಹೇಳಿ ಮಾಡಿಸಿದಂತಿದೆ.
Image credits: South india Jewels
Kannada
ವಿಂಟೇಜ್ ಜುಮುಕಿ
ಈ ಜುಮುಕಿ ಡಿಸೈನ್ ನಿಮಗೆ ವಿಂಟೇಜ್ ಲುಕ್ ನೀಡುತ್ತದೆ. ಇದಕ್ಕೆ ಇಯರ್ ಚೈನ್ ಸೇರಿಸಿರುವುದರಿಂದ ಸಖತ್ ಟ್ರೆಂಡಿ ಹಾಗೂ ಕ್ಲಾಸಿಯಾಗಿ ಕಾಣುತ್ತದೆ.
Image credits: South india Jewels
Kannada
ರಾಯಲ್ ಲುಕ್
ನಾಜೂಕಾದ ನೆಟ್ ವರ್ಕ್ ಜುಮುಕಿ ಮೇಲೆ ಹರಳುಗಳ ಫ್ರೇಮ್ ಜೋಡಿಸಿರುವ ಸುಂದರ ಡಿಸೈನ್ ಇದು. ತುಂಬಾ ಹಗುರವಾಗಿದ್ದರೂ, ನೋಡಲು ರಿಚ್ ಲುಕ್ ನೀಡುವ ಮಾಡೆಲ್ ಇದಾಗಿದೆ.
Image credits: South india Jewels
Kannada
ಪೀಕಾಕ್ ಜುಮುಕಿ
ನವಿಲು ವಿನ್ಯಾಸದ ಮೇಲೆ ರೂಬಿ, ಎಮರಾಲ್ಡ್ ಹರಳುಗಳ ಹೊಳಪು ಹಾಗೂ ಕೆಳಗೆ ಹಸಿರು ಮಣಿಗಳ ಹ್ಯಾಂಗಿಂಗ್ ನೀಡಲಾಗಿದೆ. ಟೆಂಪಲ್ ಜ್ಯುವೆಲರಿ ಶೈಲಿಯಲ್ಲಿ ಇದು ರಾಯಲ್ ಹಾಗೂ ಸಾಂಪ್ರದಾಯಿಕ ಲುಕ್ ಕೊಡುತ್ತದೆ.
Image credits: South india Jewels
Kannada
ಲಕ್ಷ್ಮೀದೇವಿ ಜುಮುಕಿ
ಫ್ಲೋರಲ್ ಸ್ಟಡ್ ಕೆಳಗೆ ದೇವಾಲಯದ ಆಕಾರದಲ್ಲಿ ಪುಟ್ಟ ಲಕ್ಷ್ಮೀದೇವಿ ಇರುವ ಜುಮುಕಿ ಮಾಡೆಲ್ ಇದು. ಪೂಜೆ, ಹಬ್ಬ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಈ ಡಿಸೈನ್ ಹೇಳಿ ಮಾಡಿಸಿದಂತಿದೆ.
Image credits: South india Jewels
Kannada
ಸ್ಟೋನ್ಸ್ ಜುಮುಕಿ
ಹೊಳೆಯುವ ಬಿಳಿ ಹರಳುಗಳ ಚೈನ್‌ಗೆ ಕೆಳಗೆ ಪುಟ್ಟ ಜುಮುಕಿ ಹ್ಯಾಂಗಿಂಗ್ ಮಾಡೆಲ್ ನೀಡಲಾಗಿದೆ. ದಿನನಿತ್ಯದ ಬಳಕೆಗೆ ಅಥವಾ ಸಣ್ಣಪುಟ್ಟ ಫಂಕ್ಷನ್‌ಗಳಿಗೆ ಹಾಕಿಕೊಳ್ಳಲು ಇದು ಸಿಂಪಲ್ ಹಾಗೂ ಎಲಿಗೆಂಟ್ ಆಗಿರುತ್ತದೆ.
Image credits: South india Jewels
Kannada
ಟ್ರೆಂಡಿ ಡಿಸೈನ್
ಇಂತಹ ಜುಮುಕಿಗಳು ಸದ್ಯ ತುಂಬಾ ಟ್ರೆಂಡಿಯಾಗಿವೆ. ಬಿಳಿ ಹರಳುಗಳೊಂದಿಗೆ ಇದು ಕ್ಲಾಸಿ ಲುಕ್ ನೀಡುತ್ತದೆ. ಸೀರೆಗಳ ಮೇಲೆ ಧರಿಸಲು ಇವು ಅತ್ಯಂತ ಸುಂದರವಾಗಿ ಕಾಣುತ್ತವೆ.
Image credits: South india Jewels
Kannada
ಪಂಜರದ ಬುಟ್ಟಿಗಳು
ಪುಟ್ಟ ಪಂಜರದಂತಿರುವ ಬುಟ್ಟಿ ಡಿಸೈನ್ ಇದಾಗಿದೆ. ಚಿನ್ನದ ಜುಮುಕಿಗೆ ಅಲ್ಲಲ್ಲಿ ಬಿಳಿ ಹರಳುಗಳನ್ನು ಅಳವಡಿಸಲಾಗಿದೆ. ಇದಕ್ಕೆ ಇಯರ್ ಚೈನ್ ಸೇರಿಸಿರುವುದರಿಂದ ಅದ್ಭುತ ಲುಕ್ ಸಿಗುತ್ತದೆ.
Image credits: South india Jewels
Kannada
ಸ್ಟೋನ್ ಜುಮುಕಿ ವಿತ್ ಚೈನ್
ಹರಳುಗಳ ಚೈನ್ ಲೈನ್ ಕೆಳಗೆ ಹಲವು ಸಾಲುಗಳ ಪುಟ್ಟ ಮಣಿಗಳ ವರ್ಕ್ ಇರುವ ವಿಭಿನ್ನ ಮ್ಯಾಚಿಂಗ್ ಡಿಸೈನ್ ಇದು. ಸಾಂಪ್ರದಾಯಿಕ ಉಡುಗೆಗಳಿಗೆ ಮಾಡರ್ನ್ ಟಚ್ ನೀಡುತ್ತಾ ಇದು ಗ್ರಾಂಡ್ ಲುಕ್ ಕೊಡುತ್ತದೆ.
Image credits: South india Jewels
Kannada
ಹಾರ್ಟ್ ಜುಮುಕಿ
ಹಾರ್ಟ್ ಶೇಪ್ ಫ್ರೇಮ್ ಕೆಳಗೆ ಜುಮುಕಿ ನೇತಾಡುವಂತೆ ಇದನ್ನು ಡಿಸೈನ್ ಮಾಡಲಾಗಿದೆ. ಟ್ರೆಂಡಿ ಫ್ಯಾಷನ್ ಇಷ್ಟಪಡುವವರಿಗೆ ಈ ಮಾಡೆಲ್ ವಿಶೇಷ ಆಕರ್ಷಣೆಯಾಗಿ ನಿಲ್ಲುತ್ತದೆ.