Kannada

ಕಡಿಮೆ ಬೆಲೆಗೆ ಮುತ್ತಿನ ಆಕ್ಸೆಸರಿ: ಎಥ್ನಿಕ್ ಲುಕ್ ಹೆಚ್ಚಿಸಲು ಇಲ್ಲಿದೆ 6 ಟಿಪ್ಸ್

ಸಾಂಪ್ರದಾಯಿಕ ಉಡುಗೆಗಳಿಗೆ ಸೌಂದರ್ಯ ಹೆಚ್ಚಿಸುವ ಮುತ್ತಿನ ಹೇರ್ ಆಕ್ಸೆಸರಿಗಳು ಈಗ ಕಡಿಮೆ ಬೆಲೆಯಲ್ಲಿ ಲಭ್ಯ. ನಿಮ್ಮ ಲುಕ್‌ಗೆ ಹೊಂದುವ ಆರು ವಿಧದ ಆಕ್ಸೆಸರಿಗಳ ಬಗ್ಗೆ ಇಲ್ಲಿ ತಿಳಿಯಿರಿ.
Kannada

ಸ್ಟೋನ್ ಪರ್ಲ್ ಲಟಕನ್ ಆಕ್ಸೆಸರಿ

ನೀವು ಜುಟ್ಟು ಅಥವಾ ಬನ್ ಹಾಕಿದ್ರೆ, ಈ ಮುತ್ತಿನ ಲಟಕನ್ ಇರುವ ಹೇರ್ ಆಕ್ಸೆಸರಿ ಬಳಸಬಹುದು. ನೋಡೋಕೆ ತುಂಬಾನೇ ಫ್ಯಾನ್ಸಿಯಾಗಿ ಕಾಣುತ್ತೆ, ಹಾಗೆಯೇ ಇದು ಬಜೆಟ್ ಫ್ರೆಂಡ್ಲಿ ಕೂಡ ಹೌದು.
Image credits: PINTEREST
Kannada

ಪರ್ಲ್ ಲಟಕನ್ ಕ್ಲಿಪ್

ಹಾಫ್ ಹೇರ್ ಟೈ ಮಾಡೋದಾದ್ರೆ, ಹಸಿರು ಕಲ್ಲಿನ ಜೊತೆ ಮುತ್ತು ಇರುವ ಈ ಕ್ಲಿಪ್ ಹಾಕಿ. ಇದು ನಿಮಗೆ 300 ರೂಪಾಯಿ ಒಳಗಡೆ ಸಿಗುತ್ತೆ.
Image credits: PINTEREST
Kannada

ಸೈಡ್ ಪರ್ಲ್ ಕ್ಲಿಪ್

ಹೆವಿ ಆಕ್ಸೆಸರಿ ಹಾಕೋಕೆ ಇಷ್ಟ ಇಲ್ಲ ಅಂದ್ರೆ, ಕೂದಲಿಗೆ ಈ ರೀತಿ ಸೈಡ್ ಕ್ಲಿಪ್ ಹಾಕಿ ಸಿಂಗರಿಸಿಕೊಳ್ಳಬಹುದು. ಈ ಅಗ್ಗದ ಕ್ಲಿಪ್‌ಗಳು ಕೇವಲ 50 ರೂಪಾಯಿ ಒಳಗಡೆ ಸಿಗುತ್ತವೆ.
Image credits: PINTEREST
Kannada

ಮಲ್ಟಿಲೇಯರ್ ಪರ್ಲ್ ಕ್ಲಿಪ್

ಮಲ್ಟಿಲೇಯರ್ ಪರ್ಲ್ ಕ್ಲಿಪ್ ಅನ್ನು ಅರ್ಧ ಕೂದಲು ಬಿಟ್ಟು ಹಾಕಬಹುದು. ಇದು ಕಡಿಮೆ ದಪ್ಪ ಇರುವ ಕೂದಲಿಗೆ ಹೆವಿ ಲುಕ್ ಕೊಡುತ್ತೆ.
Image credits: PINTEREST
Kannada

ಜಾಲರ್ ಲಟಕನ್ ಹೇರ್ ಆಕ್ಸೆಸರಿ

ಈ ಜಾಲರ್ ಲಟಕನ್ ಹೇರ್ ಆಕ್ಸೆಸರಿಯಲ್ಲಿ ಮುತ್ತುಗಳ ಜೊತೆ ಚಿಕ್ಕ ಗೆಜ್ಜೆಗಳನ್ನೂ ನೀಡಲಾಗಿದೆ. ಗೋಲ್ಡ್ ಲುಕ್ ಇರುವ ಎಥ್ನಿಕ್ ಡ್ರೆಸ್ ಜೊತೆ ಈ ರೀತಿ ಸ್ಟೈಲ್ ಮಾಡಿಕೊಳ್ಳಬಹುದು.
Image credits: PINTEREST
Kannada

ಬೋ ಡಿಸೈನ್ ಪರ್ಲ್ ಕ್ಲಿಪ್

ಬೋ ಡಿಸೈನ್ ಕ್ಲಿಪ್‌ಗಳು ಕರ್ಲಿ ಕೂದಲಿಗೆ ಪರ್ಫೆಕ್ಟ್ ಆಗಿ ಕಾಣಿಸುತ್ತೆ. ಇಂತಹ ಸುಂದರ ಕ್ಲಿಪ್‌ಗಳು 100 ರೂಪಾಯಿ ಒಳಗಡೆನೇ ಸಿಗುತ್ತವೆ.
Image credits: INSTAGRAM

ದುಂಡು ಮುಖದ ಅಂದ ಹೆಚ್ಚಿಸುತ್ತೆ ಈ 6 ಬಗೆಯ ಟ್ರೆಂಡಿ ಥ್ರೆಡರ್ ಜುಮ್ಕಾ!

ಮುತ್ತಿನ ಉಂಗುರದ 5 ಫ್ಯಾನ್ಸಿ ಡಿಸೈನ್‌ಗಳು: ಜ್ಯೋತಿಷ್ಯದ ಲಾಭವೂ ಸಿಗಲಿದೆ!

Silver Mangalsutra: ₹1000ಗೆ ಸಿಗುವ ಬೆಳ್ಳಿ ಮಾಂಗಲ್ಯ, ಇಲ್ಲಿವೆ 7 ಡಿಸೈನ್ಸ್

ಕೆಂಪು ಬಣ್ಣಕ್ಕಿಂತ ಹೆಚ್ಚು ಸುಂದರವಾಗಿ ಕಾಣುತ್ತೆ ಮದುವೆಯ ಈ 6 ಹಳದಿ ಸೀರೆಗಳು!