Fashion

ಸೀರೆಗೆ ಫಾಲ್ ಹಾಕೋದು ಹೇಗೆ?

ಫಾಲ್ಸ್ ಹಾಕಿದರೆ ಸೀರೆ ಉಡೋದು ಸುಲಭ. 

ಹತ್ತಿಯ ಫಾಲ್

ಕಾಟನ್ ಫಾಲ್ಸ್ ಎಲ್ಲ ರೀತಿಯ ಸೀರೆಗಳಿಗೂ ಬಳಸಬಹುದು. ಇದು ಸೀರೆಯನ್ನು ದೀರ್ಘ ಕಾಲದವರೆಗೆ ಸುರಕ್ಷಿತವಾಗಿರಿಸುತ್ತದೆ.

ಮೊದಲ ಒಗೆಯಿರಿ

ಸೀರೆಗೆ ಫಾಲ್ ಹಾಕೋ ಮುನ್ನ ನೀರಲ್ಲಿ ನೆಸಿಟ್ಟು ಒಣಗಿಸಿ, ಐರನ್ ಮಾಡಿ ಬಳಸಿ. ಕಾಟನ್ ಫಾಲ್ಸ್ ಶ್ರಿಂಕ್ ಆಗೋ ಸಾಧ್ಯತೆ ಇರುತ್ತದೆ. ಬಣ್ಣ ಸಹ ಬಿಡಬಹುದು. 

ಫಾಲ್ ಗಾತ್ರ

ಕೆಳಗಿನಿಂದ 10 ಇಂಚು ಸೀರೆ ಬಿಟ್ಟು ಫಾಲ್ ಹಾಕಲು ಪ್ರಾರಂಭಿಸಬೇಕು. ಹೀಗೆ ಮಾಡುವುದರಿಂದ ಫಾಲ್ ನಿಮ್ಮ ಕೆಳಗಿನ ಪ್ಲೀಟ್ಸ್ ಅನ್ನು ಮುಚ್ಚುತ್ತದೆ. ಸೀರೆಯ ಫಾಲ್ ಗಾತ್ರ ಕೇವಲ ಎರಡೂಕಾಲು ಮೀಟರ್ ಮಾತ್ರ.

ಗೋಟಾ ಅಥವಾ ಬಾರ್ಡರ್ ಇದ್ದರೆ

ಸೀರೆ ಕೆಳಗೆ ಗೋಟಾ ಅಥವಾ ಬಾರ್ಡರ್ ಇದ್ದರೆ, ಅದನ್ನು ಸೀರೆಯಿಂದ ತೆಗೆದು ನಂತರ ಫಾಲ್ ಹಾಕಬೇಕು. ಬಾರ್ಡರ್ ಮೇಲೆ ಫಾಲ್ ಹಾಕಿದರೆ, ಸೀರೆಯಲ್ಲಿ ಸಡಿಲಿಕೆ ಬರುತ್ತದೆ. ಫಾಲ್ ಹಾಕಿದ ನಂತರ ಬಾರ್ಡರ್ ಅನ್ನು ಮತ್ತೆ ಹೊಲಿಯಿರಿ.

ಚಿಕ್ಕ ಹೊಲಿಗೆ

ಯಾವಾಗಲೂ ಸೀರೆಯ ಕೆಳಗೆ ಗಟ್ಟಿ ವಸ್ತುವನ್ನು ಇರಿಸಿ ಮತ್ತು ಚಿಕ್ಕ ಹೊಲಿಗೆ ಹಾಕಿ. ಫಾಲ್ ನಂತೆಯೇ ನೀವು ದಾರವನ್ನೂ ಹೊಂದಿಸುವಂತೆ ಆರಿಸಬೇಕು. ಇದರಿಂದ ಸೀರೆ ಮೇಲೆ ಫಾಲ್ ಹೊಲಿಗೆ ಕಾಣಿಸುವುದಿಲ್ಲ.

ಒಳಭಾಗದಲ್ಲಿ ಫಾಲ್ ಹಾಕಿ

ಫಾಲ್ ಅನ್ನು ಯಾವಾಗಲೂ ಸೀರೆಯ ಒಳಭಾಗದಲ್ಲಿ ಹಾಕಬೇಕು. ಸೀರೆಯ ಸೌಂದರ್ಯ ಕಡಿಮೆಯಾಗದಂತೆ ಎಚ್ಚರ ವಹಿಸಿ.

Find Next One