Kannada

ರೇಷ್ಮೆ ಸೀರೆಗೆ ಈ ಒಡವೆಗಳನ್ನು ಧರಿಸಿದರೆ ಎಲ್ಲರ ಕಣ್ಣು ನಿಮ್ಮ ಮೇಲೆಯೇ ಇರುತ್ತೆ!

ರೇಷ್ಮೆ ಸೀರೆ ಉಟ್ಟಾಗ ಅದಕ್ಕೆ ಒಪ್ಪುವಂತಹ ಒಡವೆಗಳನ್ನು ಧರಿಸಿದರೆ ಆ ಲುಕ್ಕೇ ಬೇರೆ. ಮದುವೆ, ಹಬ್ಬ ಹಾಗೂ ಶುಭ ಸಮಾರಂಭಗಳಲ್ಲಿ ರಾಯಲ್ ಲುಕ್ ಪಡೆಯಲು ಎಂತಹ ಒಡವೆಗಳನ್ನು ಆಯ್ಕೆ ಮಾಡಬೇಕು ಎಂಬುದನ್ನು ಇಲ್ಲಿ ನೋಡೋಣ.

Kannada

ಹೆವಿ ಜುಮುಕಿ

ರೇಷ್ಮೆ ಸೀರೆಗೆ ಮ್ಯಾಚ್ ಆಗುವಂತಹ ಸುಂದರವಾದ ಚಿನ್ನದ ಜುಮುಕಿಗಳನ್ನು ಧರಿಸಿದರೆ ನಿಮ್ಮ ಲುಕ್ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ. ಟೆಂಪಲ್ ಡಿಸೈನ್ ಜುಮುಕಿಗಳು ವಿಶೇಷ ಕಳೆ ನೀಡುತ್ತವೆ.

Image credits: Instagram@aura_adorns
Kannada

ಚಿನ್ನದ ಹಾರ

ಉದ್ದವಾದ ಚಿನ್ನದ ಹಾರವು ರೇಷ್ಮೆ ಸೀರೆಗೆ ರಾಜಗಾಂಭೀರ್ಯವನ್ನು ತಂದುಕೊಡುತ್ತದೆ. ಮದುವೆ ಹಾಗೂ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಟೆಂಪಲ್ ಜ್ಯುವೆಲರಿ ಡಿಸೈನ್‌ಗಳು ವಿಶೇಷ ಆಕರ್ಷಣೆಯಾಗಿ ನಿಲ್ಲುತ್ತವೆ.

Image credits: PINTEREST
Kannada

ಚಿನ್ನದ ನೆಕ್ಲೇಸ್

ಚಿನ್ನದ ನೆಕ್ಲೇಸ್ ಕುತ್ತಿಗೆಯ ಅಂದವನ್ನು ಇಮ್ಮಡಿಗೊಳಿಸುತ್ತದೆ. ರೇಷ್ಮೆ ಸೀರೆಯೊಂದಿಗೆ ನೆಕ್ಲೇಸ್ ಧರಿಸಿದರೆ ಅಚ್ಚುಮೆಚ್ಚಿನ ಮದುವಣಗಿತ್ತಿಯಂತೆ ಕಂಗೊಳಿಸುತ್ತೀರಿ.

Image credits: Pinterest
Kannada

ಮೂಗುತಿ

ಲಕ್ಷ್ಮಿದೇವಿಯ ಸುತ್ತಲೂ ಹರಳುಗಳನ್ನು ಹೊಂದಿರುವ ಈ ಮೂಗುತಿಯು ಮುಖದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ರೇಷ್ಮೆ ಸೀರೆಗಳೊಂದಿಗೆ ಇದು ಸೂಪರ್ ಆಗಿ ಮ್ಯಾಚ್ ಆಗುತ್ತದೆ.

Image credits: aahaana_mooguthii instagram
Kannada

ಚಿನ್ನದ ಚೋಕರ್

ಕುತ್ತಿಗೆಗೆ ಅಂಟಿಕೊಂಡಿರುವ ಈ ಚಿನ್ನದ ಚೋಕರ್ ರೇಷ್ಮೆ ಸೀರೆಯೊಂದಿಗೆ ಅದ್ಭುತವಾಗಿ ಕಾಣುತ್ತದೆ. ರಾಯಲ್ ಲುಕ್ ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

Image credits: Pinterest
Kannada

ಚಿನ್ನದ ಬಳೆಗಳು

ಕೈತುಂಬಾ ಬಳೆಗಳನ್ನು ಹಾಕಿಕೊಂಡರೆ ಸೀರೆಯ ಅಂದ ದುಪ್ಪಟ್ಟಾಗುತ್ತದೆ. ಅಗಲವಾದ ಡಿಸೈನ್ ಬಳೆಗಳು ರೇಷ್ಮೆ ಸೀರೆಗಳೊಂದಿಗೆ ಸೂಪರ್ ಆಗಿ ಕಾಣುತ್ತವೆ.

Image credits: ladyzeal_ Instagram
Kannada

ಚಿನ್ನದ ಮಾಂಗ್ ಟಿಕ್ಕಾ (ನೆತ್ತಿ ಬೊಟ್ಟು)

ಹಣೆಯ ಮೇಲೆ ಸುಂದರವಾಗಿ ಹೊಳೆಯುವ ನೆತ್ತಿ ಬೊಟ್ಟು ಟ್ರೆಡಿಷನಲ್ ಲುಕ್ ನೀಡುತ್ತದೆ. ಮದುವೆ ಹಾಗೂ ಶುಭಕಾರ್ಯಗಳಿಗೆ ಇದನ್ನು ಧರಿಸಲು ತುಂಬಾ ಚೆನ್ನಾಗಿರುತ್ತದೆ.

Image credits: Gemini AI

Antique Bangles: ಹೆಣ್ಣುಮಕ್ಕಳೇ, ನಿಮ್ಮ ಕೈಗಳ ಅಂದ ಹೆಚ್ಚಿಸುವ ಈ ಆಂಟಿಕ್ ಬಳೆಗಳನ್ನು ನೋಡಿದ್ದೀರಾ?

ಡೈಲಿ ವೇರ್‌ಗೆ ಕಡಿಮೆ ಬಜೆಟ್‌ನಲ್ಲಿ ಸಿಗುವ ಚಿನ್ನದ ಓಲೆಗಳು ಇಲ್ಲಿವೆ ನೋಡಿ..!

Bridal Set ಮದುವೆಗೆ ಹೇಳಿ ಮಾಡಿಸಿದ ಕಂಪ್ಲೀಟ್ ಬ್ರೈಡಲ್ ಸೆಟ್; ಒಮ್ಮೆ ಟ್ರೈ ಮಾಡಿ

Silver Bracelet Designs: ಮಹಿಳೆಯರಿಗೆ ಬಳೆಯಂತಹ ಲುಕ್ ನೀಡುವ 6 ಟ್ರೆಂಡಿಂಗ್ ಬೆಳ್ಳಿ ಬ್ರೇಸ್‌ಲೆಟ್‌ಗಳು!