ಭಾರತ-ಇಂಗ್ಲೆಂಡ್ ಐದನೇ ಕ್ರಿಕೆಟ್ ಟೆಸ್ಟ್ ನಾಳೆ ಕೆನ್ನಿಂಗ್ಟನ್ ಓವಲ್‌ನಲ್ಲಿ ಆರಂಭವಾಗಲಿದ್ದು, ಓವಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತೀಯ ಆಟಗಾರರು ಯಾರೆಂದು ನೋಡೋಣ.
cricket-sports Jul 30 2025
Author: Sathish Kumar KH Image Credits:ANI
Kannada
ಓವಲ್‌ನಲ್ಲಿ ದ್ರಾವಿಡ್ ಮೇಲುಗೈ
ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ರಾಹುಲ್ ದ್ರಾವಿಡ್ ಓವಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಮೂರು ಟೆಸ್ಟ್‌ಗಳಿಂದ 110.75 ಸರಾಸರಿಯಲ್ಲಿ 443 ರನ್‌ಗಳನ್ನು ದ್ರಾವಿಡ್ ಓವಲ್‌ನಲ್ಲಿ ಗಳಿಸಿದ್ದಾರೆ.
Image credits: x
Kannada
ಸಚಿನ್ ಎರಡನೇ ಸ್ಥಾನ
ಓವಲ್‌ನ ರನ್‌ಗಳಿಕೆಯಲ್ಲಿ ದ್ರಾವಿಡ್ ನಂತರ ಸಚಿನ್ ಅತಿಹೆಚ್ಚು ರನ್ ಗಳಿಸಿದ ಆಟಗಾರ. ಓವಲ್‌ನಲ್ಲಿ ಆಡಿದ 4 ಟೆಸ್ಟ್‌ಗಳಿಂದ 45.33 ಸರಾಸರಿಯಲ್ಲಿ 272 ರನ್‌ಗಳನ್ನು ಸಚಿನ್ ಗಳಿಸಿದ್ದಾರೆ.
Image credits: X/ICC
Kannada
3ನೇ ಸ್ಥಾನದಲ್ಲಿ ರವಿಶಾಸ್ತ್ರಿ
ಮಾಜಿ ಭಾರತೀಯ ಆಟಗಾರ ಮತ್ತು ಕೋಚ್ ರವಿಶಾಸ್ತ್ರಿ ಓವಲ್‌ನಲ್ಲಿ ಭಾರತೀಯ ರನ್‌ಗಳಿಕೆಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆಡಿದ 2 ಟೆಸ್ಟ್‌ಗಳಿಂದ 84.33 ಸರಾಸರಿಯಲ್ಲಿ 253 ರನ್‌ಗಳನ್ನು ರವಿಶಾಸ್ತ್ರಿ ಗಳಿಸಿದ್ದಾರೆ.
Image credits: Getty
Kannada
ಹಾಲಿ ಆಟಗಾರರಲ್ಲಿ ರಾಹುಲ್ ಟಾಪ್
ಈಗಿನ ತಂಡದ ಆಟಗಾರರಲ್ಲಿ ಕೆ.ಎಲ್. ರಾಹುಲ್ ಓವಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಎರಡು ಟೆಸ್ಟ್‌ಗಳಿಂದ 62.25 ಸರಾಸರಿಯಲ್ಲಿ 249 ರನ್‌ಗಳನ್ನು ರಾಹುಲ್ ಗಳಿಸಿದ್ದಾರೆ.
Image credits: google
Kannada
3ನೇ ಕನ್ನಡಿಗ ಗುಂಡಪ್ಪ ವಿಶ್ವನಾಥ್
ಓವಲ್‌ನಲ್ಲಿ ಆಡಿದ 3 ಪಂದ್ಯಗಳಿಂದ 241 ರನ್ ಗಳಿಸಿದ ಗುಂಡಪ್ಪ ವಿಶ್ವನಾಥ್ ರನ್‌ಗಳಿಕೆಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಡ್ರಾವಿಡ್, ಕೆ.ಎಲ್. ರಾಹುಲ್ ಮತ್ತು ವಿಶ್ವನಾಥ್ ಮೂವರು ಕನ್ನಡಿಗರಿದ್ದಾರೆ.
Image credits: x/icc
Kannada
ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಇಷ್ಟದ ಮೈದಾನ
ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ರೋಹಿತ್ ಶರ್ಮ ಓವಲ್‌ನಲ್ಲಿ ಕೊನೆಯದಾಗಿ ಶತಕ ಗಳಿಸಿದ ಆಟಗಾರ. 2021 ರಲ್ಲಿ ರೋಹಿತ್ ಓವಲ್‌ನಲ್ಲಿ ಶತಕ ಗಳಿಸಿದ್ದರು.