Cricket
ಸಾರಾ ತೆಂಡುಲ್ಕರ್ ಹಂಚಿಕೊಂಡ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ತಮ್ಮ ಪೋಸ್ಟ್‌ಗಳ ಮೂಲಕ ಸುದ್ದಿಯಲ್ಲಿರುತ್ತಾರೆ.
ಸಾರಾ ತೆಂಡುಲ್ಕರ್ ಅವರು ಬೀಚ್‌ನಲ್ಲಿ ಮೋಜು ಮಸ್ತಿ ಮಾಡುತ್ತಿರುವುದು ಕಂಡುಬಂದಿದೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಶೇಷ ಫೋಟೋಗಳು ಮತ್ತು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.
ಸಾರಾ ಕಲ್ಲಂಗಡಿ ಹಣ್ಣಿನ ತುಂಡನ್ನು ಗಾಳಿಯಲ್ಲಿ ಎಸೆದು ಹಿಡಿಯಲು ಪ್ರಯತ್ನಿಸುತ್ತಿರುವ ಒಂದು ಮಜವಾದ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಸಾರಾ ತಮ್ಮ ಪೋಸ್ಟ್‌ನಲ್ಲಿ "ಫೇಲ್ಡ್ ಅಟೆಂಪ್ಟ್ ಅಟ್ ಕ್ಯಾಚಿಂಗ್" ಎಂದು ತಮಾಷೆಯಾಗಿ ಬರೆದಿದ್ದಾರೆ, ಅಂದರೆ ಹಿಡಿಯುವ ಪ್ರಯತ್ನ ವಿಫಲವಾಗಿದೆ ಎಂದು.
ಸಚಿನ್ ಅವರ ಮಗಳು ಬೀಚ್‌ನಲ್ಲಿ ಫೋಟೋಶೂಟ್ ಮಾಡುತ್ತಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಆಕೆಯನ್ನು ನೆಟ್ಟಿಗರು ಧರೆಗಿಳಿದ ದೇವಕನ್ಯೆ ಎಂದು ಬಣ್ಣಿಸಿದ್ದಾರೆ.
ಚಿತ್ರದಲ್ಲಿ ಸಾರಾ ಸಮುದ್ರ ತೀರದಲ್ಲಿ ಕುಳಿತು ಪೋಸ್ ನೀಡುತ್ತಿದ್ದಾರೆ. ಈ ಶೈಲಿಯಲ್ಲಿ ಅವರು ಸುಂದರವಾಗಿ ಕಾಣುತ್ತಿದ್ದಾರೆ.
ಇತ್ತೀಚೆಗೆ ಸಾರಾ ತೆಂಡುಲ್ಕರ್ ಬ್ರಿಸ್ಬೇನ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರ ಹೊಸ ತಾಣ ಸಮುದ್ರ ತೀರ. ಅವರು ಸುಂದರವಾಗಿ ಕಾಣುತ್ತಿದ್ದಾರೆ.