ಟೀಂ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ ಸದ್ಯ ಹೆಚ್ಚು ಸುದ್ದಿಯಲ್ಲಿರುವ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ
cricket-sports Feb 02 2025
Author: Naveen Kodase Image Credits:Social Media
Kannada
ಪ್ರಿಯಾ ಜತೆ ಮದುವೆ?
ರಿಂಕು ಸಿಂಗ್ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜಾ ಅವರನ್ನು ಮದುವೆಯಾಗಲು ತೀರ್ಮಾನಿಸಿದ್ದಾರೆ ಎನ್ನುವ ವಿಚಾರ ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು.
Image credits: INSTAGRAM OWN
Kannada
ಹೊಸ ಬಂಗ್ಲೆ ಖರೀದಿಸಿದ ರಿಂಕು
ರಿಂಕು ಸಿಂಗ್, ತಮ್ಮ ತವರೂರು ಆದ ಆಲಿಘಡ್‌ನಲ್ಲಿ 3.5 ಕೋಟಿ ರುಪಾಯಿ ಮೌಲ್ಯದ ಬಂಗ್ಲೆ ಖರೀದಿಸಿದ್ದರು. ಬಂಗ್ಲೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು
Image credits: Social Media
Kannada
ಹೊಸ ಬಂಗ್ಲೆಗೆ ಬರಲ್ಲ ಪೋಷಕರು!
ಆದರೆ 27 ವರ್ಷದ ರಿಂಕು ಸಿಂಗ್ ಜತೆ ಅವರ ತಂದೆ-ತಾಯಿ ಹೊಸ ಬಂಗ್ಲೆಗೆ ಬರದಿರಲು ನಿರ್ಧರಿಸಿದ್ದಾರಂತೆ. ಇದರ ಹಿಂದೆ ದೊಡ್ಡ ಕಾರಣವೂ ಇದೆ.
Image credits: INSTAGRAM OWN
Kannada
ರಿಂಕು ಫೋಷಕರ ಗಟ್ಟಿ ನಿರ್ಧಾರ
ಯಾವ ಮನೆಯಲ್ಲಿ ತಾವು ಕಷ್ಟ ಸುಖ ಕಂಡಿದ್ದೇವೋ, ಯಾವ ಮನೆಯಲ್ಲಿ ರಿಂಕು ಹುಟ್ಟಿ ಬೆಳೆದು ಈ ಹಂತಕ್ಕೇರಿದ್ದಾನೋ ಆ ಮನೆಯೇ ನಮಗೆ ಮುಖ್ಯ ಎಂದು ಪೋಷಕರು ಹೇಳಿದ್ದಾರೆ.
Image credits: Instagram
Kannada
ಅದೃಷ್ಟದ ಮನೆ
ಹೀಗಾಗಿ ಅವರ ಕುಟುಂಬದ ಅದೃಷ್ಟದ ಬಾಗಿಲು ತೆರೆದ ಆ ಮನೆ ಬಿಟ್ಟು ಬರದಿರಲು ಅವರ ತಂದೆ-ತಾಯಿ ತೀರ್ಮಾನಿಸಿದ್ದಾರಂತೆ.
Image credits: Instagram
Kannada
ತಂದೆ ಸಿಲಿಂಡರ್ ವಿತರಕ
ರಿಂಕು ಸಿಂಗ್ ತುಂಬಾ ಕಡುಬಡತನದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಅವರ ತಂದೆ ಮನೆಮನೆಗೆ ಸಿಲಂಡರ್ ವಿತರಣೆ ಮಾಡುವ ಕೆಲಸ ಮಾಡುತ್ತಿದ್ದರು.
Image credits: X
Kannada
ತಂದೆಗೆ ನೆರವಾಗುತ್ತಿದ್ದ ರಿಂಕು
ಇನ್ನು ಬಿಡುವಿನ ಸಮಯದಲ್ಲಿ ತಾವು ಕೂಡಾ ಸಿಲಿಂಡರ್ ಸಪ್ಲೆ ಮಾಡುವ ಮೂಲಕ ತಂದೆಗೆ ನೆರವಾಗುತ್ತಿದ್ದೆ ಎಂದು ರಿಂಕು ಸಿಂಗ್ ಸಂದರ್ಶನವೊಂದರಲ್ಲಿ ಹೇಳಿದ್ದರು.
Image credits: X
Kannada
ಟೀಂ ಇಂಡಿಯಾ ಕ್ರಿಕೆಟಿಗ ರಿಂಕು
ರಿಂಕು ಸಿಂಗ್ ಭಾರತ ಪರ 2 ಏಕದಿನ ಹಾಗೂ 32 ಟಿ20 ಪಂದ್ಯಗಳನ್ನಾಡಿ ಒಟ್ಟಾರೆ 592 ರನ್ ಸಿಡಿಸಿದ್ದಾರೆ.
Image credits: X
Kannada
ಕೆಕೆಆರ್ ನಂಬಿಗಸ್ಥ ಆಟಗಾರ ರಿಂಕು
ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಪ್ರತಿನಿಧಿಸುತ್ತಿರುವ ರಿಂಕು ಸಿಂಗ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮೆಗಾ ಹರಾಜಿಗೂ ಮುನ್ನ ₹13 ಕೋಟಿ ನೀಡಿ ರೀಟೈನ್ ಮಾಡಿಕೊಂಡಿದೆ.