Cricket
ರಜತ್ ಪಟಿದಾರ್ ಅವರನ್ನು ಐಪಿಎಲ್ 2025 ರ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಹೊಸ ನಾಯಕರನ್ನಾಗಿ ನೇಮಿಸಲಾಗಿದೆ. ಕಳೆದ 17 ಐಪಿಎಲ್ ಆವೃತ್ತಿಗಳಲ್ಲಿ ಆರ್‌ಸಿಬಿ ತಂಡದ ಹಿಂದಿನ ನಾಯಕರನ್ನು ನೋಡೋಣ.
2008 ರ ಐಪಿಎಲ್‌ನ ಉದ್ಘಾಟನಾ ಆವೃತ್ತಿಯಲ್ಲಿ ರಾಹುಲ್ ದ್ರಾವಿಡ್ ಆರ್‌ಸಿಬಿಯ ಮೊದಲ ನಾಯಕರಾಗಿದ್ದರು. ಆಡಿದ 14 ಪಂದ್ಯಗಳಲ್ಲಿ ತಂಡವು ಕೇವಲ 4 ಪಂದ್ಯಗಳನ್ನು ಗೆದ್ದಿದ್ದರಿಂದ ನಾಯಕತ್ವದಿಂದ ಕೆಳಗಿಳಿದರು
ಅನಿಲ್ ಕುಂಬ್ಳೆ 2009 ರಿಂದ 2010 ರವರೆಗೆ ಎರಡು ಸೀಸನ್‌ಗಳ ಕಾಲ ಆರ್‌ಸಿಬಿ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ, ಬೆಂಗಳೂರು ಮೂಲದ ತಂಡವು ತಮ್ಮ ಮೊದಲ ಸಲ ಫೈನಲ್ ತಲುಪಿ, ಡೆಕ್ಕನ್ ಚಾರ್ಜರ್ಸ್ ವಿರುದ್ಧ ಸೋತಿತು.
ಕೆವಿನ್ ಪೀಟರ್ಸನ್ 2009 ರಲ್ಲಿ ಆರು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ನಾಯಕತ್ವ ವಹಿಸಿದ್ದರು ಆದರೆ ಕೇವಲ ಎರಡು ಪಂದ್ಯಗಳನ್ನು ಗೆದ್ದರು.
ವೆಟ್ಟೋರಿ ಆರ್‌ಸಿಬಿಗೆ ನಾಯಕತ್ವ ವಹಿಸಿದ ಎರಡನೇ ವಿದೇಶಿ ಆಟಗಾರ. ಅವರು 2011 ರಿಂದ 2012 ರವರೆಗೆ 2 ಸೀಸನ್‌ಗಳ ಕಾಲ ಆರ್‌ಸಿಬಿಗೆ ನಾಯಕತ್ವ ವಹಿಸಿದ್ದರು. 2011 ರಲ್ಲಿ ತಂಡವು 2 ನೇ ಸಲ ಐಪಿಎಲ್ ಫೈನಲ್‌ಗೇರಿತ್ತು.
ಕೊಹ್ಲಿ ಆರ್‌ಸಿಬಿಯ ಯಶಸ್ವಿ ನಾಯಕ, 2013 - 2021 ರವರೆಗೆ ಆಡಿದ 143 ರಲ್ಲಿ 66 ಪಂದ್ಯಗಳನ್ನು ಗೆದ್ದಿದ್ದಾರೆ. ಅವರು 2016 ರಲ್ಲಿ ತಂಡವನ್ನು 3 ನೇ ಬಾರಿ ಐಪಿಎಲ್ ಫೈನಲ್‌ಗೆ ಕರೆದೊಯ್ದರು, ಆದರೆ SRH ವಿರುದ್ಧ ಸೋತರು.
ಶೇನ್ ವ್ಯಾಟ್ಸನ್ 2017 ರಲ್ಲಿ ಮೂರು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ನಾಯಕತ್ವ ವಹಿಸಿದ್ದರು ಮತ್ತು ಕೇವಲ ಒಂದು ಪಂದ್ಯವನ್ನು ಗೆದ್ದರು.
ಫಾಫ್ ಡು ಪ್ಲೆಸಿಸ್ 2022 ರಲ್ಲಿ ಆರ್‌ಸಿಬಿ ನಾಯಕರನ್ನಾಗಿ ನೇಮಿಸಲಾಯಿತು ಮತ್ತು 2024 ರವರೆಗೆ 3 ಋತುಗಳಲ್ಲಿ ತಂಡವನ್ನು ಮುನ್ನಡೆಸಿದರು. ಅವರ ನಾಯಕತ್ವದಲ್ಲಿ, ಆರ್‌ಸಿಬಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಯಿತು