ಸ್ಮೃತಿ ಮಂಧನಾ ಫ್ರೀ ಟೈಮ್ನಲ್ಲಿ ಈ ಆಟವನ್ನು ಆಡಲು ಇಷ್ಟಪಡುತ್ತಾರೆ
ಸ್ಮೃತಿ ಮಂಧನಾ ಭಾರತೀಯ ಕ್ರಿಕೆಟ್ನ ಹೆಮ್ಮೆ
ಸ್ಮೃತಿ ಮಂಧನಾ ಟೀಮ್ ಇಂಡಿಯಾದ ಮಹಿಳಾ ಕ್ರಿಕೆಟ್ನ ಹೆಮ್ಮೆ ಎಂದು ಹೇಳಲಾಗುತ್ತದೆ. ಅವರು ತಮ್ಮ ಕಿರು ವೃತ್ತಿಜೀವನದಲ್ಲಿ ಹಲವು ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ.
ಸ್ಟೈಲ್ಗೆ ಲಕ್ಷಾಂತರ ಮಂದಿ ಮಾರು ಹೋಗಿದ್ದಾರೆ
ಭಾರತೀಯ ಕ್ರಿಕೆಟರ್ ಸ್ಮೃತಿ ಮಂಧನಾ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲೂ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ಸ್ಟೈಲ್ಗೆ ಲಕ್ಷಾಂತರ ಮಂದಿ ಮಾರು ಹೋಗಿದ್ದಾರೆ.
Instagram ನಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ
ಸ್ಮೃತಿ ಮಂಧನಾ ಅವರ ಅಭಿಮಾನಿಗಳ ಬಳಗವು ಅಗಾಧವಾಗಿದೆ. ಅವರ ಅಧಿಕೃತ Instagram ಖಾತೆಯಲ್ಲಿ 12 ಮಿಲಿಯನ್ ಜನರು ಫಾಲೋ ಮಾಡ್ತಿದ್ದಾರೆ. ಅವರನ್ನು ಇಷ್ಟಪಡುವವರ ಕೊರತೆಯಿಲ್ಲ.
ಫ್ರೀ ಟೈಮ್ನಲ್ಲಿ ಮಸ್ತಿ ಮಾಡುತ್ತಾರೆ
ಸ್ಮೃತಿಗೆ ಕ್ರಿಕೆಟ್ನಿಂದ ಬಿಡುವು ಸಿಕ್ಕಾಗ ಫ್ರೀ ಟೈಮ್ನಲ್ಲಿ ಮಸ್ತಿ ಮಾಡಲು ತುಂಬಾ ಇಷ್ಟ. ಅವರು ಹಲವು ರೀತಿಯ ಚಟುವಟಿಕೆಗಳನ್ನು ಮಾಡಲು ಇಷ್ಟಪಡುತ್ತಾರೆ.
ಗೇಮಿಂಗ್ ಅಂದ್ರೆ ಇಷ್ಟ
RCB ನಾಯಕಿಗೆ ಗೇಮಿಂಗ್ ಅಂದ್ರೆ ತುಂಬಾ ಇಷ್ಟ. ವರದಿಗಳ ಪ್ರಕಾರ, ಅವರು ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ಆಡಲು ಇಷ್ಟಪಡುತ್ತಾರೆ.
ಗೇಮಿಂಗ್ನಿಂದ ಏನು ಲಾಭ?
ಸ್ಮೃತಿ ಮಂಧಾನ ಆಟಗಳನ್ನು ಆಡುವ ಮೂಲಕ ತಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅವರಿಗೆ ಬಿಡುವಿನ ವೇಳೆಯಲ್ಲಿ ಸಮಯ ಕಳೆಯಲು ಇದು ಒಂದು ದೊಡ್ಡ ಮಾರ್ಗವಾಗಿದೆ.
ಹಾಡು ಕೇಳುವುದು ಇಷ್ಟ
ಸ್ಮೃತಿ ಮಂಧನಾ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅರಿಜಿತ್ ಸಿಂಗ್ ಅವರ ಹಾಡುಗಳನ್ನು ಕೇಳಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು. ಅವರು ಅವರ ದೊಡ್ಡ ಅಭಿಮಾನಿ ಎಂದು ಹೇಳಲಾಗುತ್ತದೆ.