ಜೆಮಿಮಾ ರೋಡ್ರಿಗ್ಸ್ ಒಬ್ಬ ಭಾರತೀಯ ಮಹಿಳಾ ಬ್ಯಾಟರ್. ಅವರು 2018ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅವರು WPLನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಾರೆ.
Image credits: Instagram
Kannada
4ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭ
ಜೆಮಿಮಾ ರೋಡ್ರಿಗ್ಸ್ ಸೆಪ್ಟೆಂಬರ್ 5, 2000 ರಂದು ಮುಂಬೈನಲ್ಲಿ ಜನಿಸಿದರು. 4ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. 18ನೇ ವಯಸ್ಸಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ T20Iಗೆ ಪಾದಾರ್ಪಣೆ ಮಾಡಿದರು.
Image credits: Instagram
Kannada
ಜೆಮಿಮಾ ರೋಡ್ರಿಗ್ಸ್ ಅವರ ಕ್ರಿಕೆಟ್ ವೃತ್ತಿಜೀವನ
ಜೆಮಿಮಾ 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಹಾಗೂ 2021ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.
Image credits: Instagram
Kannada
ಈ ವರ್ಷವೇ ಶತಕ ಸಿಡಿಸಿದ್ದರು
ಜೆಮಿಮಾ ಮೇ 2025ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ಪರ ಶತಕ ಸಿಡಿಸಿದ್ದರು. ಅವರು ಮೂರನೇ ಅತಿ ವೇಗದ ಶತಕ ಬಾರಿಸಿದ ಮಹಿಳಾ ಆಟಗಾರ್ತಿ ಎನಿಸಿಕೊಂಡರು.
Image credits: Instagram
Kannada
ಜೆಮಿಮಾ ರೋಡ್ರಿಗ್ಸ್ ಅವರ ವೈಯಕ್ತಿಕ ಜೀವನ
ಜೆಮಿಮಾ ಕ್ರಿಕೆಟ್ ಹೊರತುಪಡಿಸಿ, ಮುಂಬೈನ ಅಂಡರ್ 17 ಮತ್ತು ಅಂಡರ್ 19 ಹಾಕಿ ತಂಡದ ಭಾಗವಾಗಿದ್ದರು. ಇದಲ್ಲದೆ, ಅವರು ಅತ್ಯುತ್ತಮ ಗಾಯಕಿ ಮತ್ತು ಗಿಟಾರ್ ಕೂಡ ನುಡಿಸುತ್ತಾರೆ.
Image credits: Instagram
Kannada
ಸೋಶಿಯಲ್ ಮೀಡಿಯಾ ಸ್ಟಾರ್ ಜೆಮಿಮಾ
ಜೆಮಿಮಾ ತಮ್ಮ ಆಟದ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರಿಗೆ 1.6 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಇದ್ದಾರೆ.
Image credits: Instagram
Kannada
ಇಂಡಿಯನ್, ವೆಸ್ಟರ್ನ್ ಎರಡರಲ್ಲೂ ಮಿಂಚಿಂಗ್
ಜೆಮಿಮಾ ರೋಡ್ರಿಗ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಭಾರತೀಯ ಮತ್ತು ಪಾಶ್ಚಿಮಾತ್ಯ ಉಡುಗೆಗಳಲ್ಲಿ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಅವರು ಎರಡೂ ಉಡುಗೆಗಳಲ್ಲೂ ತುಂಬಾ ಸುಂದರವಾಗಿ ಕಾಣುತ್ತಾರೆ.