ತವರು ಮೈದಾನವಾದ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ 2012ರ ಬಳಿಕ ಮೊದಲ ಬಾರಿಗೆ ರಣಜಿ ಟ್ರೋಫಿ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು.
Image credits: Getty
Kannada
ಕೊಹ್ಲಿ ನೋಡಲು ಜನಸಾಗರ
ರೈಲ್ವೇಸ್ ಎದುರಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಟವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮೈದಾನಕ್ಕೆ ಬಂದಿದ್ದರು.
Image credits: INSTAGRAM
Kannada
ಕೊಹ್ಲಿ ನಿರಾಸೆ
ಆದರೆ ವಿರಾಟ್ ಕೊಹ್ಲಿ ದೊಡ್ಡ ಇನ್ನಿಂಗ್ಸ್ ಆಡುವ ನಿರೀಕ್ಷೆ ಹುಸಿ ಮಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಕೊಹ್ಲಿ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
Image credits: Getty
Kannada
ಕೊಹ್ಲಿಗೆ ಸಿಕ್ಕ ಸಂಬಳ
12 ವರ್ಷಗಳ ಬಳಿಕ ಮೊದಲ ರಣಜಿ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿಗೆ ಈ ಪಂದ್ಯವನ್ನಾಡಲು ಸಿಕ್ಕ ಸಂಬಳ ಎಷ್ಟು ಎನ್ನುವುದನ್ನು ನೋಡೋಣ ಬನ್ನಿ.
Image credits: INSTA/virat.kohli
Kannada
60 ಸಾವಿರ ಸಂಬಳ
40ಕ್ಕಿಂತ ಹೆಚ್ಚು ಪ್ರಥಮ ದರ್ಜೆ ಪಂದ್ಯವನ್ನಾಡಿದ ಆಟಗಾರನಿಗೆ ಪ್ರತಿ ಪಂದ್ಯದ ಪ್ರತಿ ದಿನದ ಆಟಕ್ಕೆ 60 ಸಾವಿರ ರುಪಾಯಿ ಸಂಬಳ ಸಿಗುತ್ತದೆ.
Image credits: INSTA/virat.kohli
Kannada
50 ಸಾವಿರ ಸಂಬಳ
ಇನ್ನು 21ರಿಂದ 40 ಪ್ರಥಮ ದರ್ಜೆ ಪಂದ್ಯವನ್ನಾಡಿದ ಆಟಗಾರರಿಗೆ ಪ್ರತಿ ಪಂದ್ಯದ ಪ್ರತಿ ದಿನದ ಆಟಕ್ಕೆ 50 ಸಾವಿರ ರುಪಾಯಿ ಸಂಬಳ ಸಿಗುತ್ತದೆ.
Image credits: Getty
Kannada
40 ಸಾವಿರ ಸಂಬಳ
ಇನ್ನು 20ಕ್ಕಿಂತ ಕಡಿಮೆ ಪ್ರಥಮ ದರ್ಜೆ ಪಂದ್ಯವನ್ನಾಡಿದ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 40,000 ರುಪಾಯಿ ಸಂಬಳ ಸಿಗುತ್ತದೆ.
Image credits: Getty
Kannada
ಕೊಹ್ಲಿ ಸಂಬಳ
ವಿರಾಟ್ 23 ರಣಜಿ ಪಂದ್ಯಗಳನ್ನು ಸೇರಿ ಒಟ್ಟು 140 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ಹೀಗಾಗಿ ಕೊಹ್ಲಿ ರೈಲ್ವೇಸ್ ಎದುರಿನ ಪ್ರತಿ ದಿನದ ಆಟಕ್ಕೆ 60 ಸಾವಿರ ರುಪಾಯಿ ಸಂಬಳ ಪಡೆದಿದ್ದಾರೆ.
Image credits: Getty
Kannada
1.80 ಲಕ್ಷ ರುಪಾಯಿ ಸಂಬಳ
ಡೆಲ್ಲಿ-ರೈಲ್ವೇಸ್ ನಡುವಿನ ಪಂದ್ಯವು ಕೇವಲ 3 ದಿನಕ್ಕೆ ಮುಕ್ತಾಯವಾಗಿದ್ದು, ವಿರಾಟ್ ಕೊಹ್ಲಿ 1.80 ಲಕ್ಷ ರುಪಾಯಿ ಸಂಬಳವನ್ನು ಈ ಪಂದ್ಯದಿಂದ ಪಡೆದುಕೊಂಡಿದ್ದಾರೆ.