Cricket
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅನೇಕ ಶ್ರೇಷ್ಠ ಆಟಗಾರರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆ ಆಟಗಾರರು ವರ್ಷಗಳ ಕಾಲ ಐಪಿಎಲ್‌ನಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ.
ಇಲ್ಲಿಯವರೆಗೆ ಆ ಆಟಗಾರರಿಗೆ ಯಾವುದೇ ತಂಡದ ಪರವಾಗಿ ನಾಯಕತ್ವ ವಹಿಸುವ ಅವಕಾಶ ಸಿಗಲಿಲ್ಲ ಎನ್ನುವುದು ಅಚ್ಚರಿ ಎನಿಸಿದ್ರೂ ಸತ್ಯ. ಆ ಆಟಗಾರರ ಬಗ್ಗೆ ತಿಳಿಯೋಣ.
ಎಬಿ ಡಿವಿಲಿಯರ್ಸ್ ವರ್ಷಗಳ ಕಾಲ ಆರ್‌ಸಿಬಿ ಪರ ಆಡಿದರು, ಆದರೆ ಅವರ ಅದೃಷ್ಟದಲ್ಲಿ ನಾಯಕತ್ವ ಇರಲಿಲ್ಲ. 2016 ರಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅವಕಾಶ ಸಿಕ್ಕಿತು, ಆದರೆ ಶೇನ್ ವಾಟ್ಸನ್ ನಾಯಕರಾದರು.
ಎಬಿ ಡಿವಿಲಿಯರ್ಸ್ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಕ್ರೇಝ್ ಹುಟ್ಟುಹಾಕಿದ್ದಾರೆ . ಅವರು ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿಯೂ ಇದ್ದರು. ಆದರೆ ಐಪಿಎಲ್‌ನಲ್ಲಿ ಒಮ್ಮೆಯೂ ಕ್ಯಾಪ್ಟನ್ ಆಗಲಿಲ್ಲ
ಟಿ20 ಮಾದರಿಯಲ್ಲಿ ಕ್ರಿಸ್ ಗೇಲ್ ತನ್ನದೇ ಆದ ಹೆಜ್ಜೆಗುರುತು ದಾಖಲಿಸಿದ್ದಾರೆ. ಆದರೆ ಅವರು ಐಪಿಎಲ್‌ನಲ್ಲಿ ನಾಯಕತ್ವ ಪಡೆಯಲು ಸಾಧ್ಯವಾಗಲಿಲ್ಲ
ಗೇಲ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು & ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದಾರೆ. ಹಲವು ದಾಖಲೆ ಬರೆದಿದ್ದರೂ ಗೇಲ್ ಐಪಿಎಲ್‌ನಲ್ಲಿ ಕ್ಯಾಪ್ಟನ್ ಆಗುವ ಅದೃಷ್ಟ ಸಿಗಲಿಲ್ಲ.
ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಆಟಗಾರನಾಗಿ ಗುರುತಿಸಿಕೊಂಡಿದ್ದ ಲಸಿತ್ ಮಾಲಿಂಗಾಗೆ ಐಪಿಎಲ್‌ನಲ್ಲಿ ನಾಯಕನಾಗುವ ಅವಕಾಶವೇ ಸಿಗಲಿಲ್ಲ.
ಮುಂಬೈ ಇಂಡಿಯನ್ಸ್ ಪರ ನೂರಾರು ಪಂದ್ಯಗಳನ್ನು ಆಡಿದ್ದರೂ ಯಾರ್ಕರ್ ಸ್ಪೆಷಲಿಸ್ಟ್‌ಗೆ ಮುಂಬೈ ಕ್ಯಾಪ್ಟನ್ ಆಗುವ ಅವಕಾಶ ಸಿಗಲಿಲ್ಲ.