Cine World

ಬಾಲಿವುಡ್‌ನ 10 ಕಡಿಮೆ ವಿದ್ಯಾವಂತ ತಾರೆಯರು

ಸಲ್ಮಾನ್ ಖಾನ್‌ರಿಂದ ಹಿಡಿದು ಆಮೀರ್ ಖಾನ್‌ವರೆಗೆ ಬಾಲಿವುಡ್‌ನಲ್ಲಿ ತಮ್ಮ ಕಡಿಮೆ ಶಿಕ್ಷಣದ ಹೊರತಾಗಿಯೂ ಹೆಸರು ಮಾಡಿದ ನಟ ನಟಿಯರ ಬಗ್ಗೆ ಇಲ್ಲಿದೆ ಮಾಹಿತಿ..

1. ಸಲ್ಮಾನ್ ಖಾನ್

ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಶಾಲಾ ಶಿಕ್ಷಣದ ನಂತರ ಕಾಲೇಜಿಗೆ ಸೇರಿದ್ದರು, ಆದರೆ ಚಿತ್ರಗಳಿಗಾಗಿ ಮುಂದಿನ ವ್ಯಾಸಂಗವನ್ನು ಅವರು ತ್ಯಜಿಸಿದರು.

2. ಪ್ರಿಯಾಂಕ ಚೋಪ್ರಾ

ಪ್ರಿಯಾಂಕ ಚೋಪ್ರಾ 12ನೇ ತರಗತಿವರೆಗೆ ಓದಿದ್ದಾರೆ. ಇದಾದ ನಂತರ ಅವರು ವಿಶ್ವ ಸುಂದರಿ ಪಟ್ಟವನ್ನು ಗೆದ್ದರು ಮತ್ತು ಅವರಿಗೆ ಚಿತ್ರಗಳ ಆಫರ್‌ಗಳು ಬರಲಾರಂಭಿಸಿದವು. ನಂತರ ಪ್ರಿಯಾಂಕ ಓದು ಮುಂದುವರೆಸಲಿಲ್ಲ,

3. ಅಕ್ಷಯ್ ಕುಮಾರ್

10ನೇ ಕ್ಲಾಸ್ ಪಾಸ್ ಮಾಡಿ ಕಾಲೇಜಿಗೆ ಅಡ್ಮಿಷನ್ ಕೂಡ ಮಾಡಿದ್ದ ನಟ ಅಕ್ಷಯ್ ಕುಮಾರ್ ತಮ್ಮ ವಿದ್ಯಾಭ್ಯಾಸ ಅರ್ಧಕ್ಕೆ ಬಿಟ್ಟು ಕರಾಟೆ ಕಲಿಯಲು ಬ್ಯಾಂಕಾಕ್‌ಗೆ ಹೋಗಿದ್ದರು. ವಾಪಸ್ ಬಂದಾಗ ಚಿತ್ರಗಳಲ್ಲಿ ಕೆಲಸ ಸಿಕ್ಕಿತು 

4. ಆಲಿಯಾ ಭಟ್

ಬಾಲಿವುಡ್‌ನ ಟಾಪ್ ಸೆಲೆಬ್ರಿಟಿ ಎನಿಸಿರುವ ಆಲಿಯಾ ಭಟ್ ಓದಿದ್ದು ಬರೀ 10ನೇ ಕ್ಲಾಸ್ ಮುಂಬೈನ ಜಮನಾಬಾಯಿ ನರ್ಸಿ ಶಾಲೆಯಲ್ಲಿ ಓದಿದ ಅವರು ನಟನೆಗಾಗಿ ವ್ಯಾಸಂಗವನ್ನು ತ್ಯಜಿಸಿದರು.

5. ಕರೀನಾ ಕಪೂರ್

ಕರೀನಾ ಕಪೂರ್ ಶಾಲೆಯ ನಂತರ ಮೀಠಿಬಾಯಿ ಕಾಲೇಜಿನಲ್ಲಿ ಪ್ರವೇಶ ಪಡೆದರು. ಅವರಿಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ ಮತ್ತು ಅವರು ನಟನೆ ಆರಂಭಿಸಿದರು ಎಂದು ಹೇಳಲಾಗುತ್ತದೆ.

6. ಕಾಜೋಲ್

ಕಾಜೋಲ್ ಪಂಚಗಣಿಯ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಣ ಪಡೆದರು. ನಂತರ ಅವರು 16 ನೇ ವಯಸ್ಸಿನಲ್ಲಿಯೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರಿಂದ ಶಿಕ್ಷಣ ಮುಂದುವರೆಸಲಿಲ್ಲ.

7. ರಣಬೀರ್ ಕಪೂರ್

ರಣಬೀರ್ ಕಪೂರ್ ಒಂದು ಸಂದರ್ಶನದಲ್ಲಿ ತಾವು ಓದಿನಲ್ಲಿ ಚೆನ್ನಾಗಿರಲಿಲ್ಲ ಎಂದು ಹೇಳಿದ್ದಾರೆ. ಅವರು 10 ನೇ ತರಗತಿ ಪಾಸಾದ ನಂತರ ಬಾಲಿವುಡ್‌ನಲ್ಲಿ ವೃತ್ತಿಜೀವನವನ್ನು ರೂಪಿಸಿಕೊಂಡರು.

8. ಕತ್ರೀನಾ ಕೈಫ್

ಕತ್ರೀನಾ ಕೈಫ್ ಕೇವಲ 14 ನೇ ವಯಸ್ಸಿನಲ್ಲಿ ಮಾಡೆಲ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದರು.  ಶಾಲಾ ಶಿಕ್ಷಣವನ್ನು ತ್ಯಜಿಸಿ ಭಾರತಕ್ಕೆ ಬಂದ ಅವರು ಬಾಲಿವುಡ್ ಚಿತ್ರಗಳಲ್ಲಿ ನಟಿಸಲಾರಂಭಿಸಿದರು.

9. ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಬೆಂಗಳೂರಿನ ಮೌಂಟ್‌ ಕಾರ್ಮೆಲ್ ಶಾಲೆಯಲ್ಲಿ 12ನೇ ತರಗತಿವರೆಗೆ ಓದಿದ್ದಾರೆ.. ಇದರ ನಂತರ ಅವರು ಪದವಿ ಪಡೆಯಲು ಬಯಸಿದ್ದರು ಸಾಧ್ಯವಾಗಲಿಲ್ಲ ಮಾಡೆಲಿಂಗ್‌ಗೆ ಬಂದು ಚಿತ್ರಗಳಲ್ಲಿ ನಟಿಸಲಾರಂಭಿಸಿದರು.

10. ಆಮಿರ್ ಖಾನ್

ಆಮಿರ್ ಖಾನ್ 12 ನೇ ತರಗತಿವರೆಗೆ ಓದಿದ್ದಾರೆ. ಅವರಿಗೆ ಕ್ರೀಡೆಯಲ್ಲಿ ಆಸಕ್ತಿ ಇದ್ದರಿಂದ ಅವರು ವ್ಯಾಸಂಗದತ್ತ ಗಮನ ಹರಿಸಲಿಲ್ಲ. ನಂತರ ನಟನೆಯಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಕ್ರೀಡೆಯನ್ನೂ ತ್ಯಜಿಸಿದರು.

Find Next One