ಪ್ಯಾನ್-ಇಂಡಿಯಾ ನಟಿ ಪೂಜಾ ಹೆಗ್ಡೆ ತಮ್ಮ ಮುಂಬರುವ ಚಿತ್ರ 'ರೆಟ್ರೋ' ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಪೂಜಾ ಹೆಗ್ಡೆ ಇದೀಗ ಹಸಿರು ಸೀರೆಯನ್ನು ಧರಿಸಿ, ವೀಂಟೇಜ್ ಲುಕ್ ನಲ್ಲಿ ಪೋಸ್ ಕೊಟ್ಟಿದ್ದು, ಅವರ ಈ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪೂಜಾ ಹಸಿರು ಬಣ್ಣದ ಸಣ್ಣ ಪ್ಯಾಚ್‌ವರ್ಕ್ ಮತ್ತು ಗೋಲ್ಡನ್ ಮತ್ತು ಕೆಂಪುಥ್ರೆಡ್ ವರ್ಕ್ ಇರುವ ಬಾರ್ಡರ್ಡ್ ವಿ-ನೆಕ್‌ಲೈನ್ ಇರುವ ಬ್ಲೌಸ್ ಧರಿಸಿದ್ದರು. ಜೊತೆಗೆ ಟ್ರೆಡಿಶನಲ್ ಜ್ಯುವೆಲ್ಲರಿ, ಬಳೆ ಧರಿಸಿದ್ದರು.
ಪೂಜಾ ಹೆಗ್ಡೆಯ ಈ ಸಿಂಪಲ್ ಸುಂದರ ಲುಕ್ ಗೆ ಅಭಿಮಾನಿಗಳು ಮನಸೋತಿದ್ದು, ಬ್ಯೂಟಿ ಫುಲ್ ಗಾರ್ಜಿಯಸ್ ಎನ್ನುತ್ತಿದ್ದಾರೆ. ಆದರೆ ಉಪ್ಪಿನಕಾಯಿ ಜಾರ್ ಅಲ್ಲೇನ್ ಮಾಡ್ತಿದೆ ಕೇಳ್ತಿದ್ದಾರೆ.
ಪೂಜಾ ಹೆಗ್ಡೆಯ ಈ ವಿಂಟೇಜ್ ಲುಕ್ ನೋಡಿ ಜನರು ನೀವು ಪಿರಿಯೋಡಿಕ್ ಡ್ರಾಮಾ ಸಿನಿಮಾಗಳಲ್ಲಿ ನಟಿಸಿ, ನಿಮ್ಮ ಲುಕ್ ಗೆ ಅದು ಸೂಕ್ತವಾಗಿದೆ ಎಂದಿದ್ದಾರೆ.
ಅಭಿಮಾನಿಗಳಂತೂ ಸೀರೆಲಿ ಸುಂದರವಾಗಿ ಕಾಣಿಸ್ತೀರಿ, ನಿಮ್ಮನ್ನು ನೋಡಿದಾಗ ಮತ್ತೆ ಮತ್ತೆ ಲವ್ ಆಗ್ತಿದೆ ಎಂದಿದ್ದಾರೆ.
ರೆಟ್ರೋ ಕಥೆಯುಳ್ಳ ರೆಟ್ರೋ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ಪೂಜಾ ಹೆಗ್ಡೆ ಅದಕ್ಕಾಗಿಯೇ ವಿಂಟೇಜ್ ಗರ್ಲ್ ಆಗಿ ಕಾಣಿಸಿಕೊಂಡಿದ್ದಾರೆ.
ತಮಿಳಿನ ಸೂಪರ್ ಸ್ಟಾರ್ ಸೂರ್ಯನಿಗೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದು, ಇದೊಂದು ರೆಟ್ರೋ ಕಾಲದಲ್ಲಿ ನಡೆಯುವ ರೋಮ್ಯಾಂಟಿಕ್ ಕಥೆಯನ್ನು ಹೊಂದಿದೆ.
ಕಾರ್ತಿಕ್ ಸುಬ್ಬರಾಜ್ ನಿರ್ದೇಶನದಲ್ಲಿ ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಮೇಕಪ್ ಇಲ್ಲದೇ ನಟಿಸಿದ್ದಾರೆ ಎನ್ನಲಾಗಿದೆ. ಯಾಕಂದ್ರೆ, ಇದು ರೆಟ್ರೋ ಸಿನಿಮಾವಾಗಿದ್ದು, ನ್ಯಾಚುರಲ್ ಲುಕ್ ಗೆ ಮಾನ್ಯತೆ ನೀಡಲಾಗಿದೆ.
ರೆಟ್ರೋ ಸಿನಿಮಾದ ಕಥೆ ಬಗ್ಗೆ ಹೇಳೋದಾದರೆ ತನ್ನ ಪ್ರೀತಿಗಾಗಿ ಹಿಂಸೆಯನ್ನು ತ್ಯಜಿಸುವ ನಾಯಕ, ನಂತರ ತನ್ನ ಪ್ರೀತಿಯೇ ಕೈ ತಪ್ಪಿ ಹೋದಾಗ, ಆಕೆಯನ್ನು ಮತ್ತೆ ಪಡೆಯಲು ಏನು ಮಾಡುತ್ತಾನೆ ಅನ್ನೋದು.
ಪೂಜಾ ಹೆಗ್ಡೆ ಮುಂದೆ ತಳಪತಿ ವಿಜಯ್ ಅವರ ಹೊಸ ಸಿನಿಮಾ ಜನ ನಾಯಕದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಬಾಬಿ ಡಿಯೋಲ್ ಕೂಡ ನಟಿಸುತ್ತಿದ್ದಾರೆ.