ಮಾಡೆಲ್ ನಟ ಹಾಗೂ ಓಟಗಾರ ತನ್ನ 59ರಲ್ಲೂ ತನ್ನ ಯುವತರುಣನಂತಹ ಫಿಟ್‌ನೆಸ್‌ನಿಂದಲೇ ಎಲ್ಲರ ಸೆಳೆಯುತ್ತಿರುವ ಮಿಲಿಂದ್ ಸೋಮನ್ ಅವರು ಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.
cine-world Jan 30 2025
Author: Anusha Kb Image Credits:instagram
Kannada
ಅಂಕಿತಾ ಕೊನ್ವರ್
ಉತ್ತರ ಪ್ರದೇಶ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಮಿಲಿಂದ್ ಸೋಮನ್ ಅವರು ತಮ್ಮ ಪತ್ನಿ ಅಂಕಿತಾ ಕೊನ್ವರ್ ಅವರೊಂದಿಗೆ ಗಂಗೆಯಲ್ಲಿ ಮುಳುಗೆದ್ದರು.
Image credits: instagram
Kannada
ಅಂಕಿತಾ ಕೊನ್ವರ್
ಮಿಲಿಂದ್ ಸೋಮನ್ ಅವರು ಈ ಪುಣ್ಯ ಕ್ಷಣಗಳ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಖುಷಿ ಪಟ್ಟಿದ್ದಾರೆ.
Image credits: instagram
Kannada
ಮಿಲಿಂದ್ ಸೋಮನ್ ಪತ್ನಿ ಅಂಕಿತಾ ಜೊತೆ
ಮಿಲಿಂದ್ ಸೋಮನ್ ಹಾಗೂ ಪತ್ನಿ ಅಂಕಿತಾ ಕೊನ್ವರ್ ಗಂಗೆಯ ತಟದಲ್ಲಿನ ಕುಂಭಮೇಳದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಮ್ಮ ಅನುಭವನ್ನು ಹೇಳಿದ್ದಾರೆ.
Image credits: instagram
Kannada
ಅಂಕಿತಾ ಕೊನ್ವರ್
ನನ್ನ ಹೃದಯ ಈಗ ಎಷ್ಟು ತುಂಬಿದೆ ಎಂಬುದನ್ನು ವರ್ಣಿಸಲು ಪದಗಳೇ ಸಾಲದು! ಮೌನಿ ಅಮವಾಸ್ಯೆಯ ಶುಭ ಕ್ಷಣಗಳಲ್ಲಿ ಮಹಾಕುಂಭದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ನನ್ನ ಗ್ರಹಿಕೆಗೆ ಮೀರಿದ್ದು
Image credits: instagram
Kannada
ಮಿಲಿಂದ್ ಸೋಮನ್ ಪತ್ನಿ ಅಂಕಿತಾ ಜೊತೆ
ನಮ್ಮ ಅತ್ಯಲ್ಪ ಅಸ್ತಿತ್ವದ ಮಹತ್ವವನ್ನು ನಿಮಗೆ ಅರಿತುಕೊಳ್ಳುವ ಕ್ಷಣಗಳು ಇವು. ಎಂದಿರುವ ನಟ, ಇದೇ ವೇಳೆ ಇಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತರಾದವರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
Image credits: instagram
Kannada
ಪತ್ನಿ ಅಂಕಿತಾ
ನಿನ್ನೆ ರಾತ್ರಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಜನರಿಗೆ ನನ್ನ ಹೃದಯ ಮಿಡಿಯುತ್ತದೆ, ನಮ್ಮ ಪ್ರಾರ್ಥನೆಗಳ ಮೂಲಕ ನಾವೆಲ್ಲರೂ ಶಾಂತಿಯನ್ನು ಕಂಡುಕೊಳ್ಳೋಣ. ಹರ್ ಹರ್ ಮಹಾದೇವ್ ಎಂದಿದ್ದಾರೆ.
Image credits: instagram
Kannada
ಮಿಲಿಂದ್ ಸೋಮನ್ ಪತ್ನಿ ಅಂಕಿತಾ ಜೊತೆ
ಮಿಲಿಂದ್ ಸೋಮನ್ ಅವರು ಅಂಕಿತಾ ಅವರನ್ನು 2018ರಲ್ಲಿ 2ನೇ ಮದುವೆಯಾದರು. ಇವರಿಬ್ಬರ ನಡುವಿನ ವಯಸ್ಸಿನ ಅಂತರ ಆಗ ಭಾರಿ ಸುದ್ದಿ ಮಾಡಿತ್ತು. ಇವರ ನಡುವೆ 26 ವರ್ಷಗಳ ಅಂತರವಿದೆ.