Cine World
ಐಶ್ವರ್ಯಾ ರೈ ಮತ್ತು ಹೃತಿಕ್ ರೋಷನ್ ಅಭಿನಯದ ಜೋಧಾ ಅಕ್ಬರ್ ಚಿತ್ರ ಬಿಡುಗಡೆಯಾಗಿ 17 ವರ್ಷಗಳು ಪೂರ್ಣಗೊಂಡಿವೆ. ನಿರ್ದೇಶಕ ಆಶುತೋಷ್ ಗೋವಾರಿಕರ್ ಅವರ ಈ ಚಿತ್ರ 2008 ರಲ್ಲಿ ಬಿಡುಗಡೆಯಾಗಿತ್ತು.
ಜೋಧಾ ಅಕ್ಬರ್ ಚಿತ್ರ ನಿರ್ಮಾಣಕ್ಕೂ ಮುನ್ನ ನಿರ್ದೇಶಕ ಆಶುತೋಷ್ ಗೋವಾರಿಕರ್ ಸಾಕಷ್ಟು ಸಂಶೋಧನೆ ನಡೆಸಿದ್ದರು ಎನ್ನಲಾಗಿದೆ. ನಟ-ನಟಿಯರ ಆಯ್ಕೆ ಬಗ್ಗೆಯೂ ಸಾಕಷ್ಟು ಚಿಂತನೆ ನಡೆಸಿದ್ದರು.
ವರದಿಗಳ ಪ್ರಕಾರ, ಜೋಧಾ ಅಕ್ಬರ್ ಚಿತ್ರದ ಒಂದು ದೃಶ್ಯಕ್ಕೆ 100 ಆನೆಗಳ ಅಗತ್ಯವಿತ್ತು. ಚಿತ್ರೀಕರಣಕ್ಕೂ ಮುನ್ನ ನಿರ್ಮಾಪಕರು ಇವುಗಳ ಆಡಿಷನ್ ನಡೆಸಿದ್ದರು.
ಜೋಧಾ ಅಕ್ಬರ್ ಚಿತ್ರದಲ್ಲಿ ಐಶ್ವರ್ಯಾ ರೈ ಧರಿಸಿದ್ದ ಆಭರಣಗಳು ನಿಜವಾದವು. ಈ ಆಭರಣಗಳನ್ನು 400 ಕೆಜಿ ಚಿನ್ನದಿಂದ ತಯಾರಿಸಲಾಗಿತ್ತು ಎನ್ನಲಾಗಿದೆ. ಇವುಗಳ ಸುರಕ್ಷತೆಗಾಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ನಿರ್ದೇಶಕ ಆಶುತೋಷ್ ಜೋಧಾ ಅಕ್ಬರ್ ಚಿತ್ರವನ್ನು ಶಾರುಖ್ ಖಾನ್ ಅವರೊಂದಿಗೆ ನಿರ್ಮಿಸಲು ಬಯಸಿದ್ದರು. ನಿರ್ಮಾಪಕರು ದೀರ್ಘ ದಿನಾಂಕಗಳನ್ನು ಬಯಸಿದ್ದರು & ಶಾರುಖ್ ಖಾನ್ ಇದಕ್ಕೆ ಒಪ್ಪಲಿಲ್ಲ.ಹೀಗಾಗಿ ಹೃತಿಕ್ ಆಯ್ಕೆಯಾದರು
ಅಕ್ಬರ್ ತಾಯಿ ಹಮೀದಾ ಬಾನು ಬೇಗಂ ಪಾತ್ರಕ್ಕೆ, ಸೈರಾ ಬಾನು ಅವರನ್ನು ಸಂಪರ್ಕಿಸಿದ್ದರು. ಆದರೆ, ಕೆಲವು ಕೌಟುಂಬಿಕ ಕಮಿಟ್ಮೆಂಟ್‌ನಿಂದ ಅವರು ನಿರಾಕರಿಸಿದರು. ನಂತರ ಈ ಪಾತ್ರವನ್ನು ಪೂನಂ ಸಿನ್ಹಾ ನಿರ್ವಹಿಸಿದರು.
ನಿರ್ದೇಶಕ ಆಶುತೋಷ್ ಗೋವಾರಿಕರ್ ಜೋಧಾ ಅಕ್ಬರ್ ಚಿತ್ರವನ್ನು 40 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದರು. ಚಿತ್ರ ಬಿಡುಗಡೆಯಾದೊಂದಿಗೆ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತು. ಚಿತ್ರ 120 ಕೋಟಿ ಸಂಗ್ರಹಿಸಿತ್ತು.