ದೀಪಿಕಾ ಪಡುಕೋಣೆ ನಟನೆಯ ಹಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಗಳಿಸಿವೆ. ಇದರಲ್ಲಿ ಪಠಾಣ್, ಜವಾನ್ ಮತ್ತು ಫೈಟರ್ ಮೂರು ಚಿತ್ರಗಳು 2,500 ಕೋಟಿ ರೂಪಾಯಿ ಗಳಿಸಿದವು
5 300+ ಕೋಟಿ ಗಳಿಕೆಯ ಚಿತ್ರಗಳ ಸ್ಟಾರ್ ನಟಿ ದೀಪಿಕಾ
ಐದು ಬಾರಿ 300+ ಕೋಟಿ ಗಳಿಕೆಯ ಚಿತ್ರಗಳಲ್ಲಿ ನಟಿಸಿರುವ ನಟಿಸಿರುವ ಹೆಗ್ಗಳಿಕೆ ಪಾತ್ರವಾಗಿರುವ ಭಾರತದ ಏಕೈಕ ನಟಿ ಎನಿಸಿದ್ದಾರೆ.
5. ಸಿಂಗಮ್ ಅಗೇನ್
ನ.೧ರಂದು ಬಿಡುಗಡೆಯಾದ ರೋಹಿತ್ ಶೆಟ್ಟಿ ನಿರ್ದೇಶನದ ಮತ್ತು ಅಜಯ್ ದೇವಗನ್ ನಟಿಸಿರುವ 'ಸಿಂಗಮ್ ಅಗೇನ್' ನಲ್ಲಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿದ್ದಾರೆ ಮತ್ತು ಈ ಚಿತ್ರ ವಿಶ್ವಾದ್ಯಂತ 336.35 ಕೋಟಿ ರೂ. ಗಳಿಸಿದೆ
4. ಕಲ್ಕಿ 2898 AD
ಜೂ. 27 ರಂದು ಬಿಡುಗಡೆಯಾದ ಕಲ್ಕಿ ವಿಶ್ವಾದ್ಯಂತ 1042.25 ಕೋಟಿ ರೂ. ಗಳಿಸಿದೆ. ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಪ್ರಭಾಸ್ ಜೊತೆ ನಟಿಸಿದ್ದಾರೆ.
3. ಫೈಟರ್
ಬಿಡುಗಡೆ ದಿನಾಂಕ : 25 ಜನವರಿ 2024
ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಮತ್ತು ನಾಯಕ ನಟ ರಿತಿಕ್ ರೋಷನ್. ದೀಪಿಕಾ ಪಡುಕೋಣೆ ಚಿತ್ರದ ನಾಯಕಿ. ಈ ಚಿತ್ರ ವಿಶ್ವಾದ್ಯಂತ 344.46 ಕೋಟಿ ರೂ. ಗಳಿಸಿದೆ.
2. ಜವಾನ್
ಬಿಡುಗಡೆ ದಿನಾಂಕ : ಸೆ.೭ 2023 ಆಟ್ಲೀ ಕುಮಾರ್ ನಿರ್ದೇಶನದ ಈ ಚಿತ್ರದ ನಾಯಕ ನಟ ಶಾರುಖ್ ಖಾನ್. ದೀಪಿಕಾ ಡುಕೋಣೆ ಅತಿಥಿ ಪಾತ್ರದಲ್ಲಿದ್ದಾರೆ. ಈ ಚಿತ್ರ ವಿಶ್ವಾದ್ಯಂತ 1148.32 ಕೋಟಿ ರೂ. ಗಳಿಸಿದೆ.
1. ಪಠಾಣ್
ಬಿಡುಗಡೆ ದಿನಾಂಕ : 25 ಜನವರಿ 2023
ಶಾರುಖ್ ಖಾನ್ ನಟಿಸಿರುವ ಈ ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಆನಂದ್. ದೀಪಿಕಾ ಪಡುಕೋಣೆ ನಾಯಕಿ. ಈ ಚಿತ್ರ ವಿಶ್ವಾದ್ಯಂತ 1050.3 ಕೋಟಿ ರೂ. ಗಳಿಸಿದೆ.